Methi Benefits : ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ಬೀಜ ಸೇವಿಸಿ : ಇದರಿಂದ ರೋಗಗಳು ಹತ್ತಿರವು ಸುಳಿಯುವುದಿಲ್ಲ

ಪೋಷಕಾಂಶ ಭರಿತ ಮೆಂತ್ಯ ಬೀಜಗಳಲ್ಲಿ ಫೈಬರ್, ವಿಟಮಿನ್ ಎ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಮೆಂತ್ಯ ಬೀಜಗಳ ಸೇವನೆಯು ನಿಮಗೆ ಯಾವ ರೀತಿಯಲ್ಲಿ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ತಿಳಿಯಿರಿ.

Written by - Channabasava A Kashinakunti | Last Updated : Nov 13, 2021, 11:53 AM IST
  • ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ಸೇವಿಸುವುದರಿಂದ ನೀವು ಅನೇಕ ಪ್ರಯೋಜನಗಳು
  • ಮೊಳಕೆಯೊಡೆದ ಮೆಂತ್ಯ ಬೀಜಗಳಲ್ಲಿ ಪೋಷಕಾಂಶಗಳ ಪ್ರಮಾಣವು ಹೆಚ್ಚಾಗಿರುತ್ತದೆ
  • ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.
Methi Benefits : ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ಬೀಜ ಸೇವಿಸಿ : ಇದರಿಂದ ರೋಗಗಳು ಹತ್ತಿರವು ಸುಳಿಯುವುದಿಲ್ಲ title=

ನವದೆಹಲಿ : ನಿಮ್ಮ ಅಡುಗೆಮನೆಯಲ್ಲಿ ಇಂತಹ ಹಲವು ಪದಾರ್ಥಗಳಿವೆ, ಇದರಲ್ಲಿ ಇರುವ ಔಷಧೀಯ ಗುಣಗಳು ನಿಮ್ಮನ್ನು ರೋಗಗಳಿಂದ ರಕ್ಷಿಸುತ್ತವೆ. ಮೆಂತ್ಯ ಬೀಜಗಳು ಸಹ ಇದೇ ರೀತಿಯ ಗುಣಲಕ್ಷಣಗಳಿಂದ ತುಂಬಿದೆ. ಮೆಂತ್ಯ ಬೀಜಗಳ ನಿಯಮಿತ ಸೇವನೆಯು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಪೋಷಕಾಂಶ ಭರಿತ ಮೆಂತ್ಯ ಬೀಜಗಳಲ್ಲಿ ಫೈಬರ್, ವಿಟಮಿನ್ ಎ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಮೆಂತ್ಯ ಬೀಜಗಳ ಸೇವನೆಯು ನಿಮಗೆ ಯಾವ ರೀತಿಯಲ್ಲಿ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ತಿಳಿಯಿರಿ.

ಮೆಂತ್ಯ ಬೀಜಗಳು(Methi Seeds) ಸಾಕಷ್ಟು ಪ್ರಮಾಣದ ಕರಗದ ಫೈಬರ್ ಅನ್ನು ಹೊಂದಿರುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮೆಂತ್ಯ ಬೀಜಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸಬಹುದು.

ಇದನ್ನೂ ಓದಿ : ಈ 5 ವಸ್ತುಗಳು ದೇಸಿ ತುಪ್ಪದ ಪ್ರಯೋಜನವನ್ನು ದ್ವಿಗುಣಗೊಳಿಸುತ್ತವೆ: ಸೇವಿಸುವ ಸರಿವಿಧಾನ ತಿಳಿಯಿರಿ

ಮೆಂತ್ಯವನ್ನು ಈ ರೀತಿ ಬಳಸಿ

ಮೆಂತ್ಯ ಬೀಜ ಮತ್ತು ಜೇನುತುಪ್ಪ

ಮೆಂತ್ಯ ಬೀಜಗಳು(Fenugreek) ಮತ್ತು ಜೇನುತುಪ್ಪದ ಸೇವನೆಯು ಸಹ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೇನುತುಪ್ಪವನ್ನು ರೋಗನಿರೋಧಕ ಶಕ್ತಿ ವರ್ಧಕವೆಂದು ಪರಿಗಣಿಸಲಾಗುತ್ತದೆ. ಇದು ದೇಹದಲ್ಲಿನ ಉರಿಯೂತವನ್ನು ಸಹ ತೆಗೆದುಹಾಕುತ್ತದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ, ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೆಂತ್ಯವನ್ನು ರುಬ್ಬಿಕೊಂಡು ಪೇಸ್ಟ್ ತಯಾರಿಸಿ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ತಿನ್ನಿರಿ.

ಮೆಂತ್ಯ ಬೀಜ ನೀರು

ತೂಕ ನಷ್ಟಕ್ಕೆ, ಮೆಂತ್ಯ ಬೀಜದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆ(Empty Stomach)ಯಲ್ಲಿ ತೆಗೆದುಕೊಳ್ಳಬಹುದು. ಒಂದು ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಬೀಜಗಳೊಂದಿಗೆ ಈ ನೀರನ್ನು ಕುದಿಸಿ ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಇದನ್ನೂ ಓದಿ : ಮೊಟ್ಟೆಯ ಹಳದಿ ಭಾಗ ಆರೋಗ್ಯಕ್ಕೆ ಒಳ್ಳೆಯದ್ದೋ ಅಥವಾ ಕೆಟ್ಟದ್ದೋ.? ಇಲ್ಲಿದೆ ನೋಡಿ ಉತ್ತರ

ಮೊಳಕೆಯೊಡೆದ ಮೆಂತ್ಯ ಬೀಜಗಳು

ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ಸೇವಿಸುವುದರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಅಧ್ಯಯನದ ಪ್ರಕಾರ, ಮೊಳಕೆಯೊಡೆದ ಮೆಂತ್ಯ ಬೀಜಗಳಲ್ಲಿ ಪೋಷಕಾಂಶಗಳ ಪ್ರಮಾಣವು ಹೆಚ್ಚಾಗುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಮೆಂತ್ಯ ಬೀಜಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News