ಕ್ರೀಂ, ಲೋಶನ್, ಶಾಂಪೂ ಎಲ್ಲದಕ್ಕೂ ಹೇಳಿ ಗುಡ್ ಬೈ !ತ್ವಚೆ ಮತ್ತು ಕೂದಲ ಆರೋಗ್ಯಕ್ಕೆ ಈ ಜ್ಯೂಸ್ ಕುಡಿದರೆ ಸಾಕು

Amla Benefits:  ಪ್ರತಿದಿನ ಒಂದು ಒಂದು ನೆಲ್ಲಿಕಾಯಿ ಸೇವಿಸುವುದರಿಂದ ನಮ್ಮ ತ್ವಚೆಯ ಜೊತೆಗೆ ಕೂದಲು ಮತ್ತು ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ.

Written by - Ranjitha R K | Last Updated : Jan 23, 2024, 05:51 PM IST
  • ನೆಲ್ಲಿಕಾಯಿ ನಮಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
  • ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಭಾರೀ ಪ್ರಯೋಜನ ನೀಡುತ್ತದೆ.
  • ಮನೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ತಯಾರಿಸಿ
ಕ್ರೀಂ, ಲೋಶನ್, ಶಾಂಪೂ ಎಲ್ಲದಕ್ಕೂ ಹೇಳಿ ಗುಡ್ ಬೈ !ತ್ವಚೆ ಮತ್ತು ಕೂದಲ ಆರೋಗ್ಯಕ್ಕೆ ಈ ಜ್ಯೂಸ್ ಕುಡಿದರೆ ಸಾಕು   title=

Amla Benefits : ನೆಲ್ಲಿಕಾಯಿ ನಮಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದನ್ನು ಕೆಲವು ವಸ್ತುಗಳೊಂದಿಗೆ ಬೆರೆಸಿ ತ್ವಚೆ ಮತ್ತು   ಕೂದಲಿಗೆ ಹಚ್ಚಬಹುದು. ಇದನ್ನು ಆಹಾರವಾಗಿಯೂ ಸೇವಿಸಬಹುದು.  ಆಹಾರದಲ್ಲಿ ನೆಲ್ಲಿಕಾಯಿಯನ್ನು ಸೇರಿಸುವುದು ಬಹಳ ಮುಖ್ಯ. ಅದು ನಿಮ್ಮ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಭಾರೀ ಪ್ರಯೋಜನ ನೀಡುತ್ತದೆ. 

ಮನೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ತಯಾರಿಸಿ : 
ನೆಲ್ಲಿಕಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಒಂದು ಒಂದು ನೆಲ್ಲಿಕಾಯಿ ಸೇವಿಸುವುದರಿಂದ ನಮ್ಮ ತ್ವಚೆಯ ಜೊತೆಗೆ ಕೂದಲು ಮತ್ತು ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ. ಹಲವಾರು ಪ್ರಯೋಜನಗಳನ್ನು ಹೊಂದಿರುವ ನೆಲ್ಲಿಕಾಯಿಯಿಂದ ಆರೋಗ್ಯಕರ  ಜ್ಯೂಸ್ ಮಾಡಬಹುದು.   

ನೆಲ್ಲಿಕಾಯಿ ಜ್ಯೂಸ್ ತಯಾರಿಸುವುದು ಹೇಗೆ ? :
ಬೇಕಾಗುವ ಸಾಮಾಗ್ರಿಗಳು

- 2 ನೆಲ್ಲಿಕಾಯಿ 
- 6 ರಿಂದ 7 ಕರಿಬೇವಿನ ಎಲೆಗಳು
- 1 ಇಂಚು ಶುಂಠಿ
- 1/2 ಸಣ್ಣ ಬಟ್ಟಲು ಬೆಲ್ಲ
- 4-6 ಕರಿಮೆಣಸು
- 1/2  ನೀರು

ಇದನ್ನೂ ಓದಿ 30ವರ್ಷ ದಾಟಿದ ಬಳಿಕ ನಿಮ್ಮ ಡಯಟ್ನಲ್ಲಿ ಇರಲೇಬೇಕು ಈ ಆಹಾರಗಳು

- ಮೊದಲನೆಯದಾಗಿ, ಎರಡು ನೆಲ್ಲಿಕಾಯಿಯನ್ನು ಕತ್ತರಿಸಿ ಬೀಜಗಳಿಂದ ಬೇರ್ಪಡಿಸಿ.
- ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
- ಇಲ್ಲಿಗೆ ನೆಲ್ಲಿಕಾಯಿ ಜ್ಯೂಸ್ ರೆಡಿಯಾಗುತ್ತದೆ. 

ಕೂದಲಿಗೆ ನೆಲ್ಲಿಕಾಯಿ ಪ್ರಯೋಜನಗಳು : 
ನೆಲ್ಲಿಕಾಯಿಯಲ್ಲಿರುವ ಖನಿಜಗಳು ನೆತ್ತಿಯ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಆಮ್ಲಾವನ್ನು ಸೇವಿಸುವುದರಿಂದ ಕೂದಲು ಬೇಗನೆ ಬಿಳಿ ಬಣ್ಣಕ್ಕೆ ತಿರುಗುವುದಿಲ್ಲ. ಇದು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ, ಇದು ನೆತ್ತಿಯ ಸೋಂಕನ್ನು ತಡೆಯುತ್ತದೆ.

 ತ್ವಚೆಗೆ ನೆಲ್ಲಿಕಾಯಿ ಪ್ರಯೋಜನಗಳು : 
ನೆಲ್ಲಿಕಾಯಿ ನಮ್ಮ ಕೂದಲಿಗೆ ಎಷ್ಟು ಪ್ರಯೋಜನಕಾರಿಯೋ, ಚರ್ಮಕ್ಕೂ ಅಷ್ಟೇ ಪ್ರಯೋಜನಕಾರಿ. ಆಮ್ಲಾದಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳಂತಹ ಅನೇಕ ಪೋಷಕಾಂಶಗಳು ನಮ್ಮ ಚರ್ಮದ ರಕ್ತ ಪರಿಚಲನೆ ಸುಧಾರಿಸಲು ಮತ್ತು ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಚಳಿಗಾಲದಲ್ಲಿ Sinus ಸಮಸ್ಯೆ ಹೆಚ್ಚಾಗಲು ಇದೇ ಕಾರಣ ! ಸಮಸ್ಯೆಯ ತಕ್ಷಣದ ಪರಿಹಾರಕ್ಕೆ ಹೀಗೆ ಮಾಡಿ

(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News