ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್.. ಈ ಸಂಧಿವಾತದ ಬಗ್ಗೆ ನಿಮಗೆಷ್ಟು ಗೊತ್ತು?

ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್ ಒಂದು ರೀತಿಯ ಉರಿಯೂತದ ಸಂಧಿವಾತವಾಗಿದ್ದು, ಇದು ಮುಖ್ಯವಾಗಿ ಬೆನ್ನುಮೂಳೆ ಮತ್ತು ಸ್ಯಾಕ್ರೊಲಿಯಾಕ್ ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ (ಬೆನ್ನುಮೂಳೆಯು ಸೊಂಟಕ್ಕೆ ಜೋಡಣೆಯಾಗುವಲ್ಲಿ), ಕೆಳ-ಬೆನ್ನು, ಸೊಂಟ ಮತ್ತು ಪೆಲ್ವಿಸ್ ನೋವನ್ನು ಉಂಟುಮಾಡುತ್ತದೆ. 

Written by - Chetana Devarmani | Last Updated : May 5, 2022, 04:36 PM IST
  • ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್ ಒಂದು ರೀತಿಯ ಉರಿಯೂತದ ಸಂಧಿವಾತವಾಗಿದೆ
  • ಇದು ಮುಖ್ಯವಾಗಿ ಬೆನ್ನುಮೂಳೆ ಮತ್ತು ಸ್ಯಾಕ್ರೊಲಿಯಾಕ್ ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ
  • ಕೆಳ-ಬೆನ್ನು, ಸೊಂಟ ಮತ್ತು ಪೆಲ್ವಿಸ್ ನೋವನ್ನು ಉಂಟುಮಾಡುತ್ತದೆ
ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್.. ಈ ಸಂಧಿವಾತದ ಬಗ್ಗೆ ನಿಮಗೆಷ್ಟು ಗೊತ್ತು? title=
ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್

ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್ ಒಂದು ರೀತಿಯ ಉರಿಯೂತದ ಸಂಧಿವಾತವಾಗಿದ್ದು, ಇದು ಮುಖ್ಯವಾಗಿ ಬೆನ್ನುಮೂಳೆ ಮತ್ತು ಸ್ಯಾಕ್ರೊಲಿಯಾಕ್ ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ (ಬೆನ್ನುಮೂಳೆಯು ಸೊಂಟಕ್ಕೆ ಜೋಡಣೆಯಾಗುವಲ್ಲಿ), ಕೆಳ-ಬೆನ್ನು, ಸೊಂಟ ಮತ್ತು ಪೆಲ್ವಿಸ್ ನೋವನ್ನು ಉಂಟುಮಾಡುತ್ತದೆ. ಭಾರತದಲ್ಲಿ ಸುಮಾರು 1.65 ಮಿಲಿಯನ್ ಜನರಲ್ಲಿ ಪ್ರಸ್ತುತ ಈ ಸ್ಥಿತಿಯು ಕಂಡುಬಂದಿದೆ, ಇದು ಜಾಗತಿಕ ದತ್ತಾಂಶದ ಇತ್ತೀಚಿನ ಅಧ್ಯಯನದ ಪ್ರಕಾರ, 2.95% ರ ವಾರ್ಷಿಕ ಪ್ರಮಾಣದಲ್ಲಿ ಹೆಚ್ಚುತ್ತದೆ ಎಂದು ಅಂದಾಜಿಸಲಾಗಿದೆ. ಈ ರೋಗದ ಬಗೆಗಿನ ಅರಿವಿನ ಕೊರತೆಯಿಂದ, 69% ರೋಗಿಗಳಲ್ಲಿ ತಪ್ಪಾಗಿ ರೋಗನಿರ್ಣಯವಾಗುತ್ತದೆ  ಅಥವಾ ಅವರು ಅದರ ಬಗ್ಗೆ ಅರಿವಿಲ್ಲದೆ ಉಳಿಯುತ್ತಾರೆ, ಇದು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ರೂಮಟಾಲಜಿಸ್ಟ್ ಡಾ ರಮೇಶ್ ಜೋಯಿಸ್ ಮಾತನಾಡಿ, "AS ಒಂದು  ದೀರ್ಘಕಾಲದ ನೋವಿನಿಂದ ಕೂಡಿದ ದುರ್ಬಲಗೊಳಿಸುವ ಸಂಧಿವಾತವಾಗಿದ್ದು, ಇದು ಬೆನ್ನುಮೂಳೆಯ ಮತ್ತು ಸೊಂಟ, ಮೊಣಕಾಲು ಮತ್ತು ಕಣಕಾಲುಗಳಂತಹ ಇತರ ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ತೀವ್ರವಾದ ನೋವು, ಬಿಗಿತ ಮತ್ತು ಬೆನ್ನುಮೂಳೆಯಲ್ಲಿನ ಕಾರ್ಯನಷ್ಟ ಮುಂತಾದ ಲಕ್ಷಣಗಳನ್ನು ಹೊಂದಿದ್ದು, ಜೀವಿತಾವಧಿಯ ಸ್ಥಿತಿಯನ್ನಾಗಿಸುತ್ತದೆ. AS ಗೆ ಅಸಮರ್ಪಕ ಚಿಕಿತ್ಸೆ ನೀಡಿದಲ್ಲಿ ಅಥವಾ ಯಾವುದೇ ಚಿಕಿತ್ಸೆ ನೀಡದಿದ್ದಲ್ಲಿ ಶಾಶ್ವತ ಕೀಲುಹಾನಿಗೆ ಕಾರಣವಾಗಬಹುದು. ಈ ಸ್ಥಿತಿಯನ್ನು ಅಸಮರ್ಪಕವಾಗಿ ಪರಿಗಣಿಸಿದರೆ, 40% ರೋಗಿಗಳು ಬೆನ್ನುಮೂಳೆಯ ವಿಲೀನ / ಸಂಯೋಜನೆ, ಬೆನ್ನುಮೂಳೆಯ ಚಲನೆಗಳ ನಷ್ಟ ಮತ್ತು ಬೆನ್ನುಮೂಳೆಯ ವಿರೂಪತೆಯೊಂದಿಗೆ ಕೊನೆಗೊಳ್ಳುತ್ತದೆ."

ಇದನ್ನೂ ಓದಿ: ಅಜ್ವೈನ್‌ನಿಂದ ತೂಕ ಇಳಿಸಲು ಈ ಸಿಂಪಲ್ ಟಿಪ್ಸ್ ಅನುಸರಿಸಿ

ಈ ವಿಶ್ವ ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್ ದಿನದಂದು, ರೋಗ ಮತ್ತು ಚಿಕಿತ್ಸೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡಲು ನೀವು ತಿಳಿದುಕೊಳ್ಳಬೇಕಾದ AS ಕುರಿತ ಪ್ರಮುಖ ಸಂಗತಿಗಳು ಇಲ್ಲಿವೆ.

ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್ ಒಂದು ಉರಿಯೂತದ ಕಾಯಿಲೆಯಾಗಿದೆ. AS ಕೀಲುಗಳ ಸಹಜ ಸವೆತದ ಪರಿಣಾಮವಲ್ಲ ಆದರೆ ದೇಹದಲ್ಲಿ ದೀರ್ಘಕಾಲದ ಉರಿಯೂತದ ಕಾರಣದಿಂದಾಗಿ ಉಂಟಾಗುತ್ತದೆ. ನೀವು ಕೀಲುಗಳನ್ನು ಕದಲಿಸದಿದ್ದಾಗ, ಕಾಯಿಲೆಯೊಂದಿಗೆ ಬರುವ ನೋವು ಉಲ್ಬಣಗೊಳ್ಳುತ್ತದೆ ಮತ್ತು ಈ ಉರಿಯೂತದ ನೋವು ಬೆಳಿಗ್ಗೆ ಕಾಣಿಸಿಕೊಳ್ಳುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ಬೆನ್ನುಮೂಳೆಯ ಕೀಲುಗಳ ಮೇಲೆ ತಪ್ಪಾಗಿ ದಾಳಿ ಮಾಡುವುದರಿಂದ ಇದು ಸಂಭವಿಸುತ್ತದೆ.

ಕಾಲಾನಂತರದಲ್ಲಿ, ಬೆನ್ನುಮೂಳೆಯು ಒಟ್ಟಿಗೆ ಬೆಸೆಯಬಹುದು. ಕೆಲವರಲ್ಲಿ,AS ಕೀಲು ಹಾನಿಯ ಪ್ರಮಾಣವು ಉರಿಯೂತ, ಮೂಳೆ ಸವೆತ ಅಥವಾ ಮೂಳೆ ದಪ್ಪವಾಗುವುದರ ಚಿಹ್ನೆಗಳಾಗಿರಬಹುದು. ಆದರೆ ಇತರರಲ್ಲಿ, ಬೆನ್ನು ಮೂಳೆಗಳ ನಡುವಿನ ಡಿಸ್ಕ್ ಮತ್ತು ಅಸ್ಥಿರಜ್ಜುಗಳ ಕ್ಯಾಲ್ಸಿಫಿಕೇಶನ್ ಕಶೇರುಖಂಡಗಳನ್ನು ಒಟ್ಟಿಗೆ ಬೆಸೆಯುವಂತೆ ಮಾಡುತ್ತದೆ. ಇದು "ಬಿದಿರು ಬೆನ್ನುಮೂಳೆ" ಯಾಗಿ ಮುಂದುವರೆದಂತೆ, ರೋಗಿಗಳು ತಮ್ಮ ಬೆನ್ನಿನಲ್ಲಿ ಚಲನಶೀಲತೆಯನ್ನು ಕಳೆದುಕೊಳ್ಳಬಹುದು. ಆದಾಗ್ಯೂ, AS ನ ಶೀಘ್ರ ರೋಗನಿರ್ಣಯ ಮತ್ತು ಕ್ರಿಯಾತ್ಮಕ ಚಿಕಿತ್ಸೆಯು ಇದನ್ನು ತಡೆಯಲು ಅಥವಾ ವಿಳಂಬಗೊಳಿಸಲು ಸಹಾಯ ಮಾಡುತ್ತದೆ.

ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್ ಚಿಕಿತ್ಸೆ:

ರೋಗಲಕ್ಷಣಗಳನ್ನು ಎಚ್ಚರಿಕೆಯಿಂದ ಪತ್ತೆಹಚ್ಚುವ ಮತ್ತು ಆರಂಭದಲ್ಲಿಯೇ ತಜ್ಞರನ್ನು, ಅಂದರೆ ರೂಮಟಾಲಜಿಸ್ಟ್ ಅನ್ನು ಸಂಪರ್ಕಿಸುವ ಮೂಲಕ, ನಿಖರವಾದ ಮತ್ತು ಸಕಾಲಿಕ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಬಹುದು. ಜೈವಿಕ ಚಿಕಿತ್ಸೆಗಳು ಮತ್ತು ಜೀವನಶೈಲಿಯ ಬದಲಾವಣೆಗಳಂತಹ ಔಷಧಿಗಳ ಸಮತೋಲನದೊಂದಿಗೆ ಅವರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಚಿಕಿತ್ಸಾ ಆಯ್ಕೆಗಳನ್ನು ಗುರುತಿಸಲು ರೂಮಟಾಲಜಿಸ್ಟ್ ಸಹಾಯ ಮಾಡುತ್ತಾರೆ.
 
"ವೈದ್ಯಕೀಯ ವಿಜ್ಞಾನದಲ್ಲಿ ಇತ್ತೀಚಿನ ಪ್ರಗತಿಯೊಂದಿಗೆ, ನಾವು ಈಗ ಜೈವಿಕ ಔಷಧಗಳಂತಹ ಔಷಧಿಗಳನ್ನು ಹೊಂದಿದ್ದೇವೆ, ಇದು ಈಗ ಬೆನ್ನುಮೂಳೆಯ ಮತ್ತು ಕೀಲುಗಳಲ್ಲಿನ ಉರಿಯೂತವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ, ಇದರಿಂದಾಗಿ ರೋಗದ ಹೆಚ್ಚಳವನ್ನು ಮತ್ತು ಕೀಲುಗಳ ಹಾನಿಯನ್ನು ತಡೆಯುತ್ತದೆ. ಚಿಕಿತ್ಸೆಯ ಅನುಸರಣೆಯ ಜೊತೆಗೆ, ರೂಮಟಾಲಜಿಸ್ಟ್ ನ ನಿಯಮಿತ ಸಮಾಲೋಚನೆ ಅತಿ ಮುಖ್ಯವಾಗಿದೆ. ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯ ಅನುಸರಣೆಯು ಸ್ಥಿತಿಯನ್ನು ನಿರ್ವಹಿಸಲು ಪ್ರಮುಖವಾಗಿದೆ. ಉರಿಯೂತವನ್ನು ಸಾಧ್ಯವಾದಷ್ಟು ಉತ್ತಮವಾಗಿ ನಿಯಂತ್ರಿಸುವುದು ಇದರ ಉದ್ದೇಶವಾಗಿದ್ದು, ಇದು ಮೂಳೆಗಳು ಬೆಸೆಯುವುದನ್ನು ತಡೆಯುತ್ತದೆ. ಉತ್ತಮ ಆಹಾರ ಮತ್ತು ವ್ಯಾಯಾಮದ ದಿನಚರಿಯೊಂದಿಗೆ (ವಿಶೇಷವಾಗಿ ಈಜು) ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿಯನ್ನು ಬೆಳೆಸಿಕೊಳ್ಳುವುದು ನಿಜವಾಗಿಯೂ ಪ್ರಯೋಜನಕಾರಿಯಾಗಿದೆ"  ಎಂದು ಡಾ ಜೋಯಿಸ್ ಸೇರಿಸಿದರು.

AS ಯುವಕರನ್ನು ಹೆಚ್ಚು ಬಾಧಿಸುತ್ತದೆ. ಮಧ್ಯವಯಸ್ಸಿನೊಂದಿಗೆ ಸಂಧಿವಾತವು ಬೆಸೆದುಕೊಳ್ಳುತ್ತದೆ ಎಂದು ನಾವು ಅಂದುಕೊಳ್ಳುತ್ತಿದ್ದರೆ, ಉರಿಯೂತದ ಸಂಧಿವಾತವು ಕಿರಿಯ ವಯಸ್ಸಿನಲ್ಲಿ ಮೊದಲು ಸಂಭವಿಸುತ್ತದೆ. ಮತ್ತು ಅವುಗಳಲ್ಲಿ,AS ವಿಶೇಷವಾಗಿ ಯುವಕರನ್ನು ಬಾಧಿಸುತ್ತದೆ - ಜಾನ್ಸ್ ಹಾಪ್ಕಿನ್ಸ್ ಆಥ್ರ್ರೈಟಿಸ್ ಸೆಂಟರ್‍ನ ಪ್ರಕಾರ ಸುಮಾರು 80 ಪ್ರತಿಶತ ರೋಗಿಗಳು 30 ವರ್ಷಕ್ಕಿಂತ ಮೊದಲು ತಮ್ಮ ಮೊದಲ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ; ಕೇವಲ 5 ಪ್ರತಿಶತದಷ್ಟು ಜನರು 45 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಲಕ್ಷಣಗಳನ್ನು ಗಮನಿಸುತ್ತಾರೆ. ಅಸಮರ್ಪಕ ಭಂಗಿ, ಜಡ ಜೀವನಶೈಲಿ ಮತ್ತು ಒತ್ತಡದ ಕಾರಣದಿಂದಾಗಿ, ಯುವ ಭಾರತೀಯರು ಹೆಚ್ಚಿನ ಅಪಾಯದಲ್ಲಿದ್ದಾರೆ.

ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗಳ ಕನ್ಸಲ್ಟೆಂಟ್ ರೂಮಟಾಲಜಿಸ್ಟ್ ಡಾ.ಬಿ.ಜಿ.ಧರ್ಮಾನಂದ್ ಮಾತನಾಡಿ, "ಕೆಲವೊಮ್ಮೆ ರೋಗಿಗಳಿಗೆ ಮತ್ತು ಸಾಮಾನ್ಯ ವೈದ್ಯರಿಗೆ ಸಹ ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್‍ನ (AS) ಸಾಮಾನ್ಯ ಆರಂಭಿಕ ರೋಗಲಕ್ಷಣವಾದ ಬೆನ್ನು ನೋವನ್ನು ಇತರ ಸಾಮಾನ್ಯ ಕಾರಣಗಳಿಂದ ಉಂಟಾಗುವ ಬೆನ್ನುನೋವಿನಿಂದ ಪ್ರತ್ಯೇಕಿಸಿ ಗುರುತಿಸಲು ಕಷ್ಟವಾಗುತ್ತದೆ. ಇದರಿಂದ ಸಾಮಾನ್ಯವಾಗಿ ರೋಗನಿರ್ಣಯದಲ್ಲಿನ ವಿಳಂಬಕ್ಕೆ ಕಾರಣವಾಗುತ್ತದೆ. ಹಲವಾರು ಯುವಕರು AS ನಿಂದ ಬಳಲುತ್ತಿದ್ದು, ಈ ಜನರಲ್ಲಿನ ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ, ಈ ಸ್ಥಿತಿಯ ಚಿಕಿತ್ಸೆಯನ್ನು ಗಂಭೀರವಾಗಿ ಪರಿಗಣಿಸುವುದು ಬಹಳ ಮುಖ್ಯ. ಸಂಧಿವಾತ ಚಿಕಿತ್ಸಾಲಯದಲ್ಲಿ ಪ್ರತಿ ವಾರ ಸುಮಾರು 10 ರೋಗಿಗಳಿಗೆ AS ಎಂದು ಕಂಡುಹಿಡಿಯಲಾಗುತ್ತಿದ್ದು, ಪುರುಷ ಮತ್ತು ಮಹಿಳೆಯರಲ್ಲಿನ ಅನುಪಾತವು ಮೂರನೇ ಒಂದರಷ್ಟಿರುತ್ತದೆ. " ಎಂದರು.

ಇದನ್ನೂ ಓದಿ: ಡಯಾಬಿಟೀಸ್ ರೋಗಿಗಳು ದೇಹದಲ್ಲಿ ಕಾಣಿಸುವ ಈ ಬದಲಾವಣೆಗಳನ್ನು ನಿರ್ಲಕ್ಷಿಸಬಾರದು .! ಎದುರಾಗಬಹುದು ಭಾರೀ ಸಮಸ್ಯೆ

AS ಪುರುಷರು ಮತ್ತು ಮಹಿಳೆಯರ ಮೇಲೆ ವಿಭಿನ್ನವಾಗಿ ಪರಿಣಾಮ ಬೀರಬಹುದು. AS ಹೊಂದಿರುವ ಪುರುಷರಲ್ಲಿ, ಬೆನ್ನುಮೂಳೆ ಮತ್ತು ಸೊಂಟಗಳು ರೋಗವು ಕಾಣಿಸಿಕೊಳ್ಳುವ ಸಾಮಾನ್ಯ ಸ್ಥಳಗಳಾಗಿವೆ ಮತ್ತು ಅಲ್ಲಿ ರೋಗಲಕ್ಷಣಗಳು ಹೆಚ್ಚು ಗಂಭೀರವಾಗಿರುತ್ತವೆ. ಮಹಿಳೆಯರಲ್ಲಿ ನೋವು ಸಾಮಾನ್ಯವಾಗಿ ತೋಳುಗಳು, ಕಾಲುಗಳು ಅಥವಾ ಕತ್ತಿನ ಕೀಲುಗಳಲ್ಲಿ ಕಂಡುಬರುತ್ತದೆ. ಗುರುತುಗಳು AS ಹೊಂದಿದ ಪುರುಷರು ಮತ್ತು ಮಹಿಳೆಯರ ನಡುವೆ ರಕ್ತದಲ್ಲಿನ ಉರಿಯೂತಗಳು ಭಿನ್ನವಾಗಿರುತ್ತವೆ.AS ಹೊಂದಿರುವ ಪುರುಷರು ತಮ್ಮ ರಕ್ತದಲ್ಲಿ ಹೆಚ್ಚಿನ ಮಟ್ಟದ ಉರಿಯೂತದ ಗುರುತುಗಳನ್ನು ಹೊಂದಿರುತ್ತಾರೆ ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ.AS ಹೊಂದಿರುವ ಮಹಿಳೆಯರಲ್ಲಿ ಈ ಹೆಚ್ಚಳಗಳು ಕಂಡುಬರುವುದಿಲ್ಲ.

ಅನುವಂಶಿಕ ಧಾತುಗಳು AS ನಲ್ಲಿ ಪಾತ್ರವನ್ನು ವಹಿಸಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಆನುವಂಶಿಕ ರೂಪಾಂತರವಾದ HLA-B27, AS  ಅನ್ನು ಉಂಟುಮಾಡುವ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ. HLA-B27 ಅನುವಂಶಿಕ ಧಾತುವಿನ ಪರೀಕ್ಷೆಯು ರೋಗನಿರ್ಣಯವನ್ನು ತಳ್ಳಿಹಾಕುವುದಿಲ್ಲ ಎಂದು ಅದು ಹೇಳಿದೆ. ಅಮೆರಿಕದ ಸ್ಪಾಂಡಿಲೈಟಿಸ್ ಅಸೋಸಿಯೇಷನ್‍ನ ಪ್ರಕಾರ, HLA-B27 ಜೀನ್ ಹೊಂದಿರುವ ಸುಮಾರು 2% ಜನರಲ್ಲಿ ರೋಗವು ಬರಬಹುದು ಮತ್ತು AS ಹೊಂದಿರುವ ಪ್ರತಿಯೊಬ್ಬರಲ್ಲಿಯೂ HLA-B27 ಅನುವಂಶಿಕ ಧಾತುವು ಇರುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News