ನವದೆಹಲಿ : Tomato Seeds : ಪಲ್ಯ, ಸಾಂಬಾರ್, ಸಲಾಡ್‌ಗಳು ಮತ್ತು ಸೂಪ್ ಹೀಗೆ ಎಲ್ಲಾ ಅಡುಗೆಗಳಲ್ಲಿಯೂ ಟೊಮೆಟೊಗಳನ್ನು (Tomato) ಬಳಸಲಾಗುತ್ತದೆ. ಆದರೆ, ಟೊಮೆಟೊ ಬೀಜಗಳನ್ನು ಸೇವಿಸುವುದು ಹಾನಿಕಾರಕವಾಗಿದೆ ಎನ್ನಲಾಗುತ್ತದೆ. ಅಡುಗೆ ಮಾಡುವಾಗ ಟೊಮಾಟೊ ಬೀಜಗಳನ್ನು (Tomato Seeds side effects) ತೆಗೆದು ಟೊಮಾಟೊವನ್ನು ಬಳಸುವುದು ಒಳ್ಳೆಯದು. ಆದರೆ, ಟೊಮೆಟೊ ಬೀಜಗಳು ನಿಜವಾಗಿಯೂ ವಿಷಕಾರಿಯೇ? ಇದರ ಬೀಜಗಳನ್ನು ಸೇವಿಸಿದರೆ ಏನಾಗುತ್ತದೆ ಎನ್ನುವುದನ್ನು ತಿಳಿಯಿರಿ.
ಟೊಮೆಟೊ ಬೀಜಗಳನ್ನು ವಿಷಕಾರಿ ಎಂದು ಏಕೆ ಪರಿಗಣಿಸಲಾಗುತ್ತದೆ?
ಟೊಮೆಟೊ ಬೀಜಗಳು (Tomato Seeds) ವಿಷಕಾರಿಯಲ್ಲ. ಆದರೆ ಟೊಮೆಟೊ ಸಸ್ಯವು ಸೋಲನೈನ್ ಎಂದು ಕರೆಯಲ್ಪಡುವ ವಿಷಕಾರಿ ಆಲ್ಕಲಾಯ್ಡ್ ಅನ್ನು ಹೊಂದಿರುತ್ತದೆ. ಟೊಮೇಟೊ ಗಿಡದ ಕಾಂಡ ಮತ್ತು ಎಲೆಗಳಲ್ಲಿ ಈ ವಿಷದ ಪ್ರಮಾಣ ಅತಿ ಹೆಚ್ಚಾಗಿರುತ್ತದೆ. ಟೊಮೆಟೊದಲ್ಲಿ ಆಲ್ಕಲಾಯ್ಡ್‌ಗಳ ಉಪಸ್ಥಿತಿಯು ಅದರ ಸಸ್ಯದ ರಚನೆಗೆ ಸಹಾಯ ಮಾಡುತ್ತದೆ. ಸೀಮಿತ ಪ್ರಮಾಣದಲ್ಲಿ ಬೀಜಗಳೊಂದಿಗೆ ಟೊಮೆಟೊಗಳನ್ನು ಸೇವಿಸುವುದರಿಂದ ಹಾನಿಯಾಗುವುದಿಲ್ಲ (Tomato Seeds side effects). ಆದರೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಹಸಿ ಟೊಮ್ಯಾಟೊ ಅಥವಾ ಟೊಮೆಟೊ ಬೀಜಗಳನ್ನು ತಿನ್ನುವುದನ್ನು ತಪ್ಪಿಸುವುದು ಒಳ್ಳೆಯದು. ಇದರಿಂದ ಆಸಿಡಿಟಿ (Acidity) ಹೆಚ್ಚಾಗುತ್ತದೆ ಅಲ್ಲದೆ, ಎದೆಯುರಿಯಂತಹ ಸಮಸ್ಯೆಗಳು ಎದುರಾಗುತ್ತದೆ. ಇಷ್ಟು ಮಾತ್ರವಲ್ಲ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : 40 ವರ್ಷ ವಯಸ್ಸಿನ ನಂತರ, ಮಾರಕವಾಗಿ ಪರಿಣಮಿಸಬಹುದು ಈ 5 ಕೆಟ್ಟ ಅಭ್ಯಾಸಗಳು
ಟೊಮೆಟೊ ಸೇವನೆಯ ಪ್ರಯೋಜನಗಳು :
ಟೊಮ್ಯಾಟೋಸ್ ಲೈಕೋಪೀನ್ ಎಂಬ Antioxidants ಹೊಂದಿರುತ್ತದೆ. ಇದು ಹೃದಯ ಮತ್ತು ಮೂತ್ರಪಿಂಡದ (Kidney) ಕಾರ್ಯವನ್ನು ಸುಧಾರಿಸುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ಸರಿಯಾಗಿ ಇಡುತ್ತದೆ. ಟೊಮೆಟೊ ಬೀಜಗಳು ವಿಟಮಿನ್ ಸಿ ಮತ್ತು ಆಹಾರದ ಫೈಬರ್ ಅನ್ನು ಹೊಂದಿರುತ್ತವೆ. ಇದರ ಸೇವನೆಯು ಚರ್ಮಕ್ಕೆ ಹಾಗೂ ಹೃದಯದ ಆರೋಗ್ಯ, ತೂಕ ನಿರ್ವಹಣೆ ಮತ್ತು ರೋಗನಿರೋಧಕ ಶಕ್ತಿ (Immunity) ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ಟೊಮೆಟೊ ಬೀಜಗಳು ಜೀರ್ಣಕಾರಿ ಫೈಬರ್ ಮತ್ತು ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿರುವ ಕಾರಣ, ಜೀರ್ಣಕ್ರಿಯೆಗೆ ಒಳ್ಳೆಯದು. ಇದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಕರುಳಿನ ಆರೋಗ್ಯಕ್ಕೂ ಇದು ಒಳ್ಳೆಯದು.
ಆರೋಗ್ಯ ತಜ್ಞರ ಪ್ರಕಾರ, ಟೊಮೆಟೊ ಸೇವನೆಯು ದೇಹದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಅನ್ನು ಸಮತೋಲನಗೊಳಿಸಲು ಸಹಕಾರಿಯಾಗಿದೆ. ಆದರೂ, ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಟೊಮೆಟೊ ಬೀಜಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ ಮತ್ತು ಜೀವಕೋಶಗಳ ಪುನರುತ್ಪಾದನೆಯಲ್ಲಿ ಸಹಾಯಕವಾಗಿವೆ.
ಇದನ್ನೂ ಓದಿ : Egg Consumption and Type 2 Diabetes: ಮೊಟ್ಟೆ ಸೇವನೆಯಿಂದ ಮಧುಮೇಹದ ಅಪಾಯ ಹೆಚ್ಚುತ್ತದೆಯೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.