Bad Cholesterol ನಿರ್ಮೂಲನೆಗೆ ದುಬಾರಿ ಔಷಧಿಗಳು ಬೇಡ, ಈ ಗಿಡಮೂಲಿಕೆಗಳು ಸಾಕು!

Ayurvedic Herbs For Bad Cholesterol: ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ, ಅದು ಹೈಪರ್ ಕೊಲೆಸ್ಟರಾಲ್ಮಿಯಾ ಎಂಬ ಸ್ಥಿತಿಗೆ ಕಾರಣವಾಗಬಹುದು. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.  

Written by - Nitin Tabib | Last Updated : Mar 22, 2023, 05:15 PM IST
  • ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ, ಅದು ಹೈಪರ್ ಕೊಲೆಸ್ಟರಾಲ್ಮಿಯಾ ಎಂಬ ಸ್ಥಿತಿಗೆ ಕಾರಣವಾಗಬಹುದು.
  • ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದ್ರೋಗವನ್ನು ಅಪಾಯವನ್ನು ಹೆಚ್ಚಿಸುತ್ತದೆ.
  • ಅಧಿಕ ಕೊಲೆಸ್ಟರಾಲ್ ಮಟ್ಟಗಳು ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟಿ ಆಸಿಡ್ ಹೊಂದಿರುವ ಆಹಾರದಿಂದ, ವ್ಯಾಯಾಮದ ಕೊರತೆ, ಧೂಮಪಾನ, ಬೊಜ್ಜು, ಮಧುಮೇಹ ಮುಂತಾದ ಅಂಶಗಳಿಂದ ಉಂಟಾಗುತ್ತದೆ.
Bad Cholesterol ನಿರ್ಮೂಲನೆಗೆ ದುಬಾರಿ ಔಷಧಿಗಳು ಬೇಡ, ಈ ಗಿಡಮೂಲಿಕೆಗಳು ಸಾಕು! title=
ಕೆಟ್ಟ ಕೊಲೆಸ್ಟ್ರಾಲ್ ನಿರ್ಮೂಲನೆಗೆ ಗಿಡಮೂಲಿಕೆಗಳು!

Ayurvedic Herbs For Bad Cholesterol: ಕೊಲೆಸ್ಟ್ರಾಲ್ ಒಂದು ಮೇಣದಂಥ, ಕೊಬ್ಬಿನಂತಹ ಪದಾರ್ಥವಾಗಿದ್ದು, ಇದು ನಮ್ಮ ಯಕೃತ್ತಿನಲ್ಲಿ ಉತ್ಪತ್ತಿಯಾಗುತ್ತದೆ ಮತ್ತು ಕೆಲವು ಆಹಾರಗಳಲ್ಲಿ ಕಂಡುಬರುತ್ತದೆ. ಹಾರ್ಮೋನುಗಳು, ಜೀವಕೋಶ ಪೊರೆಗಳು ಮತ್ತು ಪಿತ್ತರಸ ಆಮ್ಲಗಳ ಉತ್ಪಾದನೆ ಸೇರಿದಂತೆ ದೇಹದ ಸಾಮಾನ್ಯ ಕಾರ್ಯನಿರ್ವಹಣೆಗೆ ಇದು ತುಂಬಾ ಮುಖ್ಯವಾಗಿದೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ: ಎಲ್‌ಡಿಎಲ್ (ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್) ಮತ್ತು ಎಚ್‌ಡಿಎಲ್ (ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್). ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಸಾಮಾನ್ಯವಾಗಿ 'ಕೆಟ್ಟ' ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಅಪಧಮನಿಗಳ ಗೋಡೆಗಳಲ್ಲಿ ಸಂಗ್ರಹಣೆಯಾಗುತ್ತದೆ, ಅದು ನಂತರ ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ. ಈ ಸಂದರ್ಭದಲ್ಲಿ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವು ಹೆಚ್ಚಾಗುತ್ತದೆ. ಆದರೆ, ಎಚ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ರಕ್ತಪ್ರವಾಹದಿಂದ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಅಧಿಕ ಕೊಲೆಸ್ಟ್ರಾಲ್‌ನಿಂದ ಏನಾಗುತ್ತದೆ?
ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ, ಅದು ಹೈಪರ್ ಕೊಲೆಸ್ಟರಾಲ್ಮಿಯಾ ಎಂಬ ಸ್ಥಿತಿಗೆ ಕಾರಣವಾಗಬಹುದು. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದ್ರೋಗವನ್ನು  ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ಕೊಲೆಸ್ಟರಾಲ್ ಮಟ್ಟಗಳು ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟಿ ಆಸಿಡ್ ಹೊಂದಿರುವ ಆಹಾರದಿಂದ, ವ್ಯಾಯಾಮದ ಕೊರತೆ, ಧೂಮಪಾನ, ಬೊಜ್ಜು, ಮಧುಮೇಹ ಮುಂತಾದ ಅಂಶಗಳಿಂದ ಉಂಟಾಗುತ್ತದೆ.

ಈ ಆಯುರ್ವೇದ ಗಿಡಮೂಲಿಕೆಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತವೆ
ಗುಗ್ಗಳ

ಗುಗ್ಗಳ ಪ್ರಾಚೀನ ಆಯುರ್ವೇದ ಔಷಧದಲ್ಲಿ ಬಳಸಲಾಗುವ ನೈಸರ್ಗಿಕ ಉತ್ಪನ್ನವಾಗಿದೆ. ಇದರಲ್ಲಿ guggulsterone ಎಂಬ ಸಂಯುಕ್ತವಿದ್ದು ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗುಗ್ಗುಲ್‌ಸ್ಟೆರಾನ್ ದೇಹದಲ್ಲಿ ಲಿಪಿಡ್ ಸಂಶ್ಲೇಷಣೆಯನ್ನು ಹೆಚ್ಚಿಸುತ್ತದೆ, ಇದು ಕೊಬ್ಬಿನ ಮೂಲಕ ಬರುವ ಕೊಲೆಸ್ಟ್ರಾಲ್ ಅನ್ನು ಒಡೆಯಲು ಸಹಾಯ ಮಾಡುತ್ತದೆ.

ಅರ್ಜುನ್ ಮರದ ತೊಗಟೆ
ಅರ್ಜುನ ಸಾವಿರಾರು ವರ್ಷಗಳಿಂದ ಆಯುರ್ವೇದ ಔಷಧದಲ್ಲಿ ಬಳಕೆಯಾಗುತ್ತಿರುವ ಒಂದು ಪ್ರಕಾರದ ಮರದ ತೊಗಟೆಯಾಗಿದೆ. ಎಲ್ಡಿಎಲ್ ಕೊಲೆಸ್ಟ್ರಾಲ್ನ ಆಕ್ಸಿಡೀಕರಣವನ್ನು ಪ್ರತಿಬಂಧಿಸುವ ಮೂಲಕ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. 

ತ್ರಿಫಲ
ತ್ರಿಫಲವು ಮೂರು ಹಣ್ಣುಗಳ ಸಂಯೋಜನೆಯಾಗಿದೆ: ಆಮ್ಲಾ, ಹರಿತಕಿ ಮತ್ತು ಬಿಭಿಟಕಿ. ಕರುಳಿನಲ್ಲಿನ ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವ ಮೂಲಕ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ ಮಾತು ಇದು ಎಲ್ಡಿಎಲ್ ಕೊಲೆಸ್ಟ್ರಾಲ್ನ ಆಕ್ಸಿಡೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ.

ಬ್ರಾಹ್ಮಿ
ಬ್ರಾಹ್ಮಿಯು ಶತಮಾನಗಳಿಂದ ಆಯುರ್ವೇದ ಔಷಧದಲ್ಲಿ ಬಳಸಲ್ಪಡುವ ಒಂದು ಮೂಲಿಕೆಯಾಗಿದೆ. ಅಪಧಮನಿಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ, ಇದು ಎಲ್ಡಿಎಲ್ ಕೊಲೆಸ್ಟ್ರಾಲ್ನ ಆಕ್ಸಿಡೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-Cholesterol Control: ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಈ ವಿಶೇಷ ಚಟ್ನಿ!

ಅರಿಶಿನ
ಅರಿಶಿನ ಒಂದು ರೀತಿಯ ಮಸಾಲೆ ಪದಾರ್ಥವಾಗಿದ್ದು, ಇದನ್ನು ಸಾವಿರಾರು ವರ್ಷಗಳಿಂದ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-ಬೆಳಗ್ಗೆ ಖಾಲಿ ಹೊಟ್ಟೆ ಈ ಜ್ಯೂಸ್ ಸೇವಿಸಿ, ಕೂದಲುದುರುವಿಕೆ ಸಮಸ್ಯೆಗೆ ಟಾಟಾ...ಬೈ ಬೈ ಹೇಳಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಟಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News