ಮಳೆಗಾಲದಲ್ಲಿ ಅತಿಯಾಗಿ ಕಾಡುವ ಮಂಡಿ ನೋವಿಗೆ ಈ ಪುಟ್ಟ ಕಾಳು ಪರಿಹಾರ !ಒಮ್ಮೆ ಟ್ರೈ ಮಾಡಿ

Home remedies for knee pain:ಕೆಲವು ಮನೆಮದ್ದುಗಳು ಮೊಣಕಾಲು ನೋವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

Written by - Ranjitha R K | Last Updated : Jul 18, 2024, 11:19 AM IST
  • ಮೊಣಕಾಲು ನೋವಿಗೆ ಕಾರಣ ಅನೇಕ ಇರಬಹುದು.
  • ವಯಸ್ಸು,ಗಾಯ ಅಥವಾ ಕೆಲವು ಆಂತರಿಕ ಆರೋಗ್ಯ ಸ್ಥಿತಿಯಿಂದಲೂ ಈ ನೋವು ಕಾಣಿಸಿಕೊಳ್ಳುತ್ತದೆ
  • ಮೊಣಕಾಲು ನೋವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಈ ಮನೆ ಮದ್ದು
ಮಳೆಗಾಲದಲ್ಲಿ ಅತಿಯಾಗಿ ಕಾಡುವ ಮಂಡಿ ನೋವಿಗೆ ಈ ಪುಟ್ಟ ಕಾಳು ಪರಿಹಾರ !ಒಮ್ಮೆ ಟ್ರೈ ಮಾಡಿ  title=

Home remedies for knee pain : ಮೊಣಕಾಲು ನೋವಿಗೆ ಕಾರಣ ಅನೇಕ ಇರಬಹುದು. ಸಾಮಾನ್ಯವಾಗಿ ವಯಸ್ಸು,ಗಾಯ ಅಥವಾ ಕೆಲವು ಆಂತರಿಕ ಆರೋಗ್ಯ ಸ್ಥಿತಿಯಿಂದಲೂ ಈ ನೋವು ಕಾಣಿಸಿಕೊಳ್ಳುತ್ತದೆ.ಈ ಮಂಡಿ ನೋವಿಗೆ ಸಂಧಿವಾತವೂ ಕಾರಣವಾಗಿರಬಹುದು.ದೇಹದಲ್ಲಿ ಯೂರಿಕ್ ಆಸಿಡ್ ಸ್ಫಟಿಕಗಳ ಶೇಖರಣೆಯಿಂದಾಗಿ ಸಂಧಿವಾತ ಉಂಟಾಗುತ್ತದೆ.  ಇದರಿಂದಾಗಿ ಹಠಾತ್ ಮತ್ತು ತೀವ್ರವಾದ ನೋವು,ಊತ ಕಾಣಿಸಿಕೊಳ್ಳುತ್ತದೆ.  ಕೆಲವು ಮನೆಮದ್ದುಗಳು ಮೊಣಕಾಲು ನೋವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. 

ಬಿಸಿ ಮತ್ತು ತಣ್ಣನೆಯ ಮಸಾಜ್ : 
ಮೊಣಕಾಲುಗಳಲ್ಲಿ ಸಾಕಷ್ಟು ನೋವು ಕಾಣಿಸಿಕೊಂಡರೆ ಒಂದು ತುಂಡು ಐಸ್ ಅನ್ನು ಬಟ್ಟೆಯಲ್ಲಿ ಸುತ್ತಿ ನೋವಿನ ಸ್ಥಳದಲ್ಲಿ 15-20 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ,ಬಿಸಿನೀರಿನ ಬಾಟಲಿಯನ್ನು ಬಟ್ಟೆಯಲ್ಲಿ ಸುತ್ತಿ 15-20 ನಿಮಿಷಗಳ ಕಾಲ ಮಸಾಜ್ ಮಾಡಿ. ಐಸ್ ಊತವನ್ನು ಕಡಿಮೆ ಮಾಡಿದರೆ, ಬಿಸಿ ನೀರಿನ ಶಾಖ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಈ ಮೂಲಕ ನೋವಿನಿಂದ ಪರಿಹಾರ ಸಿಗುತ್ತದೆ. 

ಇದನ್ನೂ ಓದಿ : Uric Acid: ಯೂರಿಕ್ ಆಸಿಡ್ ಇದ್ದವರಿಗೆ ಈ ತರಕಾರಿಗಳು ವಿಷಕ್ಕೆ ಸಮಾನ!

ಅರಿಶಿನ ಮತ್ತು ಶುಂಠಿ ಚಹಾ : 
ಅರ್ಧ ಚಮಚ ಅರಿಶಿನ ಪುಡಿ ಮತ್ತು ಅರ್ಧ ಚಮಚ ಶುಂಠಿ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ಕುದಿಸಿ.ಇದನ್ನು ಫಿಲ್ಟರ್ ಮಾಡಿ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಿರಿ.ಅರಿಶಿನ ಮತ್ತು ಶುಂಠಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಆದ್ದರಿಂದ,ನಿಮ್ಮ ಮೊಣಕಾಲುಗಳಲ್ಲಿ ನಿರಂತರ ನೋವು ಕಾಣಿಸುತ್ತಿದ್ದರೆ, ಈ ಮನೆಮದ್ದನ್ನು ಅಳವಡಿಸಿಕೊಳ್ಳುವ ಮೂಲಕ ಪರಿಹಾರ ಪಡೆಯಬಹುದು.

ಮೆಂತ್ಯೆ ಬೀಜ :
ಒಂದು ಚಮಚ ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ನೆನೆ ಹಾಕಿದ ನೀರನ್ನು ಕುಡಿದು ಕಾಳುಗಳನ್ನು ಅಗಿದು ತಿನ್ನಿ.ಇದು  ಮೊಣಕಾಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತ್ಯೆ ಬೀಜಗಳು ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು,ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ ನಿದ್ರೆ ಬರುತ್ತಿಲ್ಲವೇ? ಚಿಂತಿಸಬೇಡಿ..! ಮಲಗುವ ಮುನ್ನ ಈ ದೇಹದ ಭಾಗವನ್ನು ಮಸಾಜ್ ಮಾಡಿ

ತೆಂಗಿನ ಎಣ್ಣೆ ಮಸಾಜ್ :
ಸ್ವಲ್ಪ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ನೋವಿರುವ ಜಾಗಕ್ಕೆ ಮಸಾಜ್ ಮಾಡಬೇಕು.ತೆಂಗಿನ ಎಣ್ಣೆಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಮಸಾಜ್ ಮೂಲಕ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ನೋವನ್ನು ಕಡಿಮೆ ಮಾಡುತ್ತದೆ.

(ಸೂಚನೆ: ಪ್ರಿಯ ಓದುಗರೇ,ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

 

 

Trending News