ಆಸಿಡಿಟಿ ಸಮಸ್ಯೆಗೆ ಮನೆಯಲ್ಲಿಯೇ ಇದೆ ಸರಳ ಮದ್ದು !

ಗ್ಯಾಸ್, ಅಸಿಡಿಟಿ, ಅಜೀರ್ಣ, ಹೊಟ್ಟೆ ನೋವು  ಇವು ಪ್ರತಿಯೊಬ್ಬರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಅಸಿಡಿಟಿ ಸಮಸ್ಯೆಯನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳನ್ನು ಬಳಸಬಹುದು.  

Written by - Ranjitha R K | Last Updated : Jan 25, 2023, 02:33 PM IST
  • ಅಸಿಡಿಟಿ ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆಯಾಗಿದೆ
  • ಅನಿಯಮಿತ ಆಹಾರ ಪದ್ಧತಿ ಇದಕ್ಕೆ ಮುಖ್ಯ ಕಾರಣ
  • ಈ ರೀತಿಯ ಆಹಾರ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ.
ಆಸಿಡಿಟಿ ಸಮಸ್ಯೆಗೆ ಮನೆಯಲ್ಲಿಯೇ ಇದೆ ಸರಳ ಮದ್ದು ! title=

ಬೆಂಗಳೂರು : ಗ್ಯಾಸ್, ಅಸಿಡಿಟಿ, ಅಜೀರ್ಣ, ಹೊಟ್ಟೆ ನೋವು ಇವು ಪ್ರತಿಯೊಬ್ಬರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ.  ಅನಿಯಮಿತ ಆಹಾರ ಪದ್ಧತಿ, ಹಣ್ಣು ಮತ್ತು ತರಕಾರಿಗಳ ಕಡಿಮೆ ಸೇವನೆ, ಅತಿಯಾದ ಸಕ್ಕರೆ ಸೇವನೆ, ಕೊಬ್ಬಿನ ಆಹಾರಗಳ ಅತಿಯಾದ ಸೇವನೆ ಇವುಗಳೇ ಈ ಸಮಸ್ಯೆಗಳಿಗೆ ಪ್ರಮುಖ ಕಾರಣ. ಈ ರೀತಿಯ ಆಹಾರ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಈ ಕಾರಣದಿಂದಾಗಿ, ಉದರದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕಾಗಿ ನಿಮ್ಮ ಆಹಾರಕ್ರಮವನ್ನು ಸುಧಾರಿಸಬೇಕಾಗುತ್ತದೆ. ಅಸಿಡಿಟಿ ಸಮಸ್ಯೆಯನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳನ್ನು ಬಳಸಬಹುದು.  

ಬೆಲ್ಲ :
ಆಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸಲು ಬೆಲ್ಲವನ್ನು ಬಳಸಬಹುದು. ಬೆಲ್ಲ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ. ಬೆಲ್ಲದಲ್ಲಿ ಫೈಬರ್ ಹೆಚ್ಚಿನ  ಪ್ರಮಾಣದಲ್ಲಿರುತ್ತದೆ. ಇದು ಅಸಿಡಿಟಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ಬೆಲ್ಲ  ಮೆಗ್ನೀಸಿಯಮ್ ನ  ಉತ್ತಮ ಮೂಲವಾಗಿದೆ. 

ಇದನ್ನೂ ಓದಿ : ಕಡಿಮೆ ನೀರು ಕುಡಿಯುವುದೇ ಮಹಿಳೆಯರ ಈ ಆರೋಗ್ಯ ಸಮಸ್ಯೆಯ ಮೂಲ

ಮಜ್ಜಿಗೆ :
ಅಸಿಡಿಟಿ ಸಮಸ್ಯೆಗಳಿಗೆ ಮಜ್ಜಿಗೆ ಪ್ರಯೋಜನಕಾರಿ.  ಮಜ್ಜಿಗೆ ಬಳಕೆಯಿಂದ ಹೊಟ್ಟೆ ತಂಪಾಗುತ್ತದೆ. ಅಲ್ಲದೆ, ಇದು ಪ್ರೋಬಯಾಟಿಕ್ಸ್ ಆಹಾರವಾಗಿದೆ. ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಆಹಾರದ ಏರುಪೇರಿನಿಂದ  ಆಸಿಡಿಟಿ ಸಮಸ್ಯೆ ಉಂಟಾಗಿದ್ದರೆ ಮಜ್ಜಿಗೆ ಸೇವಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇನ್ನು  ಮಜ್ಜಿಗೆಗೆ ಕೆಲವು ಪುದೀನಾ ಎಲೆಗಳನ್ನು  ಸೇರಿಸಿದರೆ ಮತ್ತಷ್ಟು ಪರಿಣಾಮಕಾರಿಯಾಗಿರುವುದು. 

ತುಳಸಿ ಎಲೆ :
ತುಳಸಿ ಎಲೆಗಳು ಜೀರ್ಣಕಾರಿ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರಯೋಜನಕಾರಿಯಾಗಿದೆ. ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸುವ ಮೂಲಕ  ಆಸಿಡಿಟಿ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು. ಇದರಲ್ಲಿರುವ ಗುಣಗಳು ಹೊಟ್ಟೆಯನ್ನು ತಂಪಾಗಿಸುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು  ತಿಂದರೆ ಹೆಚ್ಚಿನ ಪ್ರಯೋಜನವಾಗುವುದು. 

ಬಿಸಿ ನೀರು : 
ಬಿಸಿ ನೀರು ಕುಡಿಯುವುದರಿಂದ ಅಸಿಡಿಟಿ ಸಮಸ್ಯೆಯಿಂದ  ಹೊರಬರಬಹುದು. ಮಲಗುವ ಮುನ್ನ ಪ್ರತಿದಿನ 1 ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದರಿಂದ ನೀವು ಸಾಕಷ್ಟು ಪ್ರಯೋಜನವಾಗುತ್ತದೆ. 

ಇದನ್ನೂ ಓದಿ ಈ ಗಿಡದ ಹಣ್ಣು ಅಷ್ಟೇ ಅಲ್ಲ, ಅದರ ಪೌಡರ್ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ

ಸೋಂಪು ನೀರು : 
ಸೋಂಪು ನೀರು ಕುಡಿಯುವುದರಿಂದಲೂ ಕೂಡಾ ಆಸಿಡಿಟಿ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಇದಕ್ಕಾಗಿ 1 ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ 1 ಚಮಚ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ, ಈ ನೀರನ್ನು ಸೇವಿಸಿ. ಇದರಿಂದ ಅಸಿಡಿಟಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News