ಚಿಕನ್ ಅಥವಾ ಪನೀರ್ ಇದರಲ್ಲಿ ತೂಕ ನಷ್ಟಕ್ಕೆ ಯಾವುದು ಬೆಸ್ಟ್ ?

Best Weight Loss Food:ದೇಹ ತೂಕ ಕಳೆದುಕೊಳ್ಳಬೇಕಾದರೆ ನಾವು ಯಾವ ಆಹಾರ ಕ್ರಮವನ್ನು ಅನುಸರಿಸಬೇಕು ಎನ್ನುವುದು ತಿಳಿದಿರಬೇಕು.  ಸಮತೋಲಿತ ಡಯೆಟ್ ಅನುಸರಿಸಿದರೆ ದೇಹ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. 

Written by - Ranjitha R K | Last Updated : Mar 22, 2023, 10:43 AM IST
  • ತೂಕ ಇಳಿಸುವುದು ಬಾಯಿ ಮಾತಿನಲ್ಲಿ ಹೇಳುವಷ್ಟು, ಅಂದುಕೊಂಡಷ್ಟು ಸುಲಭವಲ್ಲ
  • ಜಿಮ್, ಜಾಗಿಂಗ್, ಯೋಗ, ಜುಂಬಾ, ಡಯೆಟ್ ಹೀಗೆ ಬಹಳ ಸರ್ಕಸ್ ಮಾಡಬೇಕಾಗುತ್ತದೆ.
  • ಇದರಲ್ಲಿ ನಾವು ತಿನ್ನುವ ಆಹಾರ ಕೂಡಾ ಬಹಳ ಮುಖ್ಯವಾಗಿರುತ್ತದೆ.
ಚಿಕನ್ ಅಥವಾ ಪನೀರ್ ಇದರಲ್ಲಿ ತೂಕ ನಷ್ಟಕ್ಕೆ ಯಾವುದು ಬೆಸ್ಟ್ ? title=

ಬೆಂಗಳೂರು : ತೂಕ ಇಳಿಸುವುದು ಬಾಯಿ ಮಾತಿನಲ್ಲಿ ಹೇಳುವಷ್ಟು, ಅಂದುಕೊಂಡಷ್ಟು ಸುಲಭವಲ್ಲ. ಅದಕ್ಕಾಗಿ ಕಷ್ಟ ಪಡಬೇಕಾಗುತ್ತದೆ. ಜಿಮ್, ಜಾಗಿಂಗ್, ಯೋಗ, ಜುಂಬಾ, ಡಯೆಟ್ ಹೀಗೆ ಬಹಳ ಸರ್ಕಸ್ ಮಾಡಬೇಕಾಗುತ್ತದೆ.   ಇದರಲ್ಲಿ ನಾವು ತಿನ್ನುವ ಆಹಾರ ಕೂಡಾ ಬಹಳ ಮುಖ್ಯವಾಗಿರುತ್ತದೆ. ದೇಹ ತೂಕ ಕಳೆದುಕೊಳ್ಳಬೇಕಾದರೆ ನಾವು ಯಾವ ಆಹಾರ ಕ್ರಮವನ್ನು ಅನುಸರಿಸಬೇಕು ಎನ್ನುವುದು ತಿಳಿದಿರಬೇಕು.  ಸಮತೋಲಿತ ಡಯೆಟ್ ಅನುಸರಿಸಿದರೆ ದೇಹ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. 

ತೂಕ ಇಳಿಸುವ ವಿಷಯಕ್ಕೆ ಬಂದಾಗ, ಚಿಕನ್ ಮತ್ತು ಪನೀರ್ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡುವುದು ಎನ್ನುವ ಗೊಂದಲದಲ್ಲಿರುತ್ತಾರೆ ಹಲವರು. ಎರಡರಲ್ಲೂ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ.  ಹಾಗಿದ್ದರೆ ಈ ಎರಡು ಆಹಾರದಲ್ಲಿ ವೈಟ್ ಲಾಸ್ ಗೆ ಯಾವುದು ಬೆಸ್ಟ್ ಅನ್ನುವ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ. 

ಇದನ್ನೂ ಓದಿ : Health Tips: ನಿದ್ರಾಹೀನತೆಯಿಂದ ಹೃದಯಾಘಾತ & ಪಾರ್ಶ್ವವಾಯು ಅಪಾಯ, ಉತ್ತಮ ನಿದ್ರೆಗೆ ಈ 5 ಆಹಾರ ಸೇವಿಸಿ

ಚಿಕನ್  ಅಧಿಕ ಪ್ರೋಟೀನ್ ಅಂಶವನ್ನು ಹೊಂದಿರುವ ಜೊತೆಗೆ ಕಡಿಮೆ ಕ್ಯಾಲೋರಿಗಳು ಮತ್ತು ಕೊಬ್ಬನ್ನು ಹೊಂದಿರುತ್ತದೆ. ಸ್ನಾಯುಗಳಿಗೆ  ಅಗತ್ಯವಾದ ಅಮೈನೋ ಆಮ್ಲ ಇದರಲ್ಲಿ ಅಧಿಕವಾಗಿದೆ. ಚಿಕನ್ ವಿಟಮಿನ್ ಬಿ 12 ನ ಉತ್ತಮ ಮೂಲವಾಗಿದೆ. ಇದು ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ನರಮಂಡಲವನ್ನು ಆರೋಗ್ಯಕರವಾಗಿಡಲು ಅವಶ್ಯಕವಾಗಿದೆ. ಮತ್ತೊಂದೆಡೆ, ಪನೀರ್ ಅನ್ನು ಭಾರತೀಯ ಪಾಕಪದ್ಧತಿಯಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಇದರಲ್ಲಿ ಪ್ರೊಟೀನ್, ಕ್ಯಾಲೋರಿ ಮತ್ತು ಕೊಬ್ಬಿನಾಂಶ ಅಧಿಕವಾಗಿದೆ. ಪನೀರ್‌ನಲ್ಲಿ ಕ್ಯಾಲ್ಸಿಯಂ ಸಹ ಹೇರಳವಾಗಿ ಕಂಡುಬರುತ್ತದೆ, ಇದು ಮೂಳೆಗಳನ್ನು ಬಲವಾಗಿಡಲು ಅವಶ್ಯಕವಾಗಿದೆ.

ತೂಕ ನಷ್ಟಕ್ಕೆ ಯಾವ ಆಹಾರ ಉತ್ತಮ? :
ಈಗ ತೂಕ ನಷ್ಟಕ್ಕೆ ಚಿಕನ್ ಮತ್ತು ಪನೀರ್ ಪೈಕಿ ಯಾವುದು ಬೆಸ್ಟ್ ಎಂದು ನೋಡುವುದಾದರೆ ಇದಕ್ಕೆ ಉತ್ತರ ಚಿಕನ್. ಪನೀರ್ ಪ್ರೋಟೀನ್‌ನ ಉತ್ತಮ ಮೂಲವಾಗಿದ್ದರೂ, ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಮತ್ತು ಕೊಬ್ಬು ಅಡಗಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಆದರೆ, ಚಿಕನ್ ಒಂದು ಲೀನ್ ಪ್ರೋಟೀನ್ ಆಗಿದ್ದು, ಇದು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಚಿಕನ್ ನಲ್ಲಿರುವ ಅಗತ್ಯವಾದ ಅಮೈನೋ ಆಮ್ಲಗಳು ಮಸಲ್ ಬಿಲ್ಡ್ ಮಾಡಲು ಸಹಾಯ ಮಾಡುತ್ತದೆ. ಚಯಾಪಚಯವನ್ನು ಹೆಚ್ಚಿಸಿ  ತೂಕ ನಷ್ಟಕ್ಕೆ  ದಾರಿ ಮಾಡಿಕೊಡುತ್ತದೆ. 

ಇದನ್ನೂ ಓದಿ ನಿಮ್ಮ ವಯಸ್ಸಿಗೆ ಅನುಗುಣವಾಗಿ ಇಷ್ಟು ಹೊತ್ತು ನಿದ್ರೆ ಮಾಡಲೇಬೇಕು

ಡಯಟ್ ನಲ್ಲಿ ಕೋಳಿ ಮತ್ತು ಪನೀರ್ ಎರಡನ್ನೂ ಸೇರಿಸಿಕೊಳ್ಳಬಹುದು : 
ತೂಕ ನಷ್ಟಕ್ಕಾಗಿ ಡಯೆಟ್ ಮಾಡುವವರು ಕೋಳಿ ಮತ್ತು ಪನೀರ್ ಎರಡನ್ನು ಸೇವಿಸಬಹುದು. ಆದರೆ ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ ಎಂದರೆ  ಮಿತ ಪ್ರಮಾಣದಲ್ಲಿ ಸೇವನೆ.  ಇವುಗಳನ್ನು ಕರಿದು ಹುರಿದು ತಿನ್ನುವ ಬದಲು ಗ್ರಿಲ್ಲಿಂಗ್ ಅಥವಾ ಬೇಕಿಂಗ್‌ನಂತಹ ಆರೋಗ್ಯಕರ ಅಡುಗೆ ವಿಧಾನಗಳನ್ನು  ಆರಿಸಿಕೊಳ್ಳಬಹುದು. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News