Spices to loose weights : ತೂಕವನ್ನು ಕಳೆದುಕೊಳ್ಳಲು, ನಾವು ಅನೇಕ ವಿಧಾನಗಳನ್ನು ಅನುಸರಿಸುತ್ತೇವೆ. ಇದಕ್ಕಾಗಿ ಕಠಿಣ ವ್ಯಾಯಾಮ, ಆಹಾರ ಪದ್ದತಿಯನ್ನು ಅನುಸರಿಸಲಾಗುತ್ತದೆ. ಹಾಗಿದ್ದರೂ, ತೂಕವನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಹೀಗಾದಾಗ ಕೆಲವು ಮಸಾಲೆಗಳನ್ನು ತಿನ್ನುವ ಮೂಲಕ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಪೌಷ್ಟಿಕತಜ್ಞರು. ಸಾಮಾನ್ಯವಾಗಿ ಆಹಾರದ ರುಚಿಯನ್ನು ಹೆಚ್ಚಿಸಲು ಮಸಾಲೆಗಳನ್ನು ಬಳಸಲಾಗುತ್ತದೆ. ಆದರೆ ಅವುಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿರುವ ಅನೇಕ ಆಯುರ್ವೇದ ಗುಣಗಳನ್ನು ಹೊಂದಿವೆ.
ಈ ಮಸಾಲೆಗಳನ್ನು ತಿನ್ನುವುದರಿಂದ ತೂಕವನ್ನು ಕಳೆದುಕೊಳ್ಳಬಹುದು :
1. ಜೀರಿಗೆ :
ಜೀರಿಗೆ ಸಾಮಾನ್ಯವಾಗಿ ಬಹುತೇಕ ಎಲ್ಲಾ ಅಡುಗೆಯಲ್ಲಿ ಬಳಸುವ ಮಸಾಲೆಯಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಜೀರಿಗೆ ನೀರು ಕುಡಿಯುವುದಕ್ಕಿಂತ ಉತ್ತಮ ಮತ್ತು ಸರಳವಾದ ಮಾರ್ಗ ಬೇರೊಂದಿಲ್ಲ. ಜೀರಿಗೆ ದೇಹದಲ್ಲಿ ಸಡಿಲವಾದ ಕೊಬ್ಬಿನ ಅಂಗಾಂಶವನ್ನು ಕರಗಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಆಹಾರದಲ್ಲಿ ಜೀರಿಗೆಯನ್ನು ಸೇರಿಸುವ ಮೂಲಕ ಯಾವ ರೀತಿ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ಆಯುರ್ವೇದದಲ್ಲಿ ಹೇಳಲಾಗಿದೆ.
ಇದನ್ನೂ ಓದಿ : ಬೆಳಗ್ಗೆ ಎದ್ದ ತಕ್ಷಣ ಈ ಆಹಾರಗಳನ್ನು ತಪ್ಪದೇ ತಿನ್ನಿ..! ಆರೋಗ್ಯಕ್ಕೆ ಉತ್ತಮ
2. ಅರಿಶಿನ :
ಪ್ರಪಂಚದಾದ್ಯಂತ ಎಲ್ಲಾ ಪಾಕಪದ್ಧತಿಗಳಲ್ಲಿ ಬಳಸಲಾಗುವ ಪ್ರಮುಖ ವಸ್ತು ಅರಶಿನ. ಅತ್ಯುತ್ತಮ ಮಸಾಲೆ ಮಾತ್ರವಲ್ಲ, ತೂಕ ನಷ್ಟಕ್ಕೆ ಸಹಾಯ ಮಾಡುವ ಅಂಶ ಕೂಡಾ ಇದರಲ್ಲಿ ಅಡಗಿದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅರಿಶಿನವು ಸಸ್ಯ-ಆಧಾರಿತ ಪಾಲಿಫಿನಲ್ ಆಗಿದ್ದು, ಕರ್ಕ್ಯುಮಿನ್ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಇದು ಸಹಾಯ ಮಾಡುತ್ತದೆ.
3. ಕರಿಮೆಣಸು :
ಕರಿಮೆಣಸು ಪೈಪರಿನ್ ಅನ್ನು ಹೊಂದಿರುತ್ತದೆ. ಇದು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಕೊಬ್ಬಿನ ಶೇಖರಣೆಯಾಗದಂತೆ ನೋಡಿಕೊಳ್ಳುತ್ತದೆ. ಇದು ಕ್ಯಾಲೊರಿಗಳನ್ನು ವೇಗವಾಗಿ ಬರ್ನ್ ಮಾಡಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಮಧುಮೇಹಿಗಳು ಬೆಳಿಗ್ಗೆ ಎದ್ದ ಕೂಡಲೇ ಈ ವಸ್ತುವನ್ನು ಸೇವಿಸಿದರೆ ಸಿಗುವುದು ಅದ್ಭುತ ಪ್ರಯೋಜನ
4. ಚಕ್ಕೆ :
ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ಚಕ್ಕೆ ತುಂಬಾ ಸಹಾಯಕವಾಗಿದೆ. ಏಕೆಂದರೆ ಇದು ಸಕ್ಕರೆಯನ್ನು ಕೊಬ್ಬಾಗಿ ಪರಿವರ್ತಿಸುವುದನ್ನು ತಡೆಯುತ್ತದೆ. ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಲು ಪ್ರತಿದಿನ ರಾತ್ರಿ ಮಲಗುವ ಮೊದಲು ಚಕ್ಕೆ ನೀರನ್ನು ಕುಡಿಯಬೇಕು. ನಿತ್ಯ ಚಕ್ಕೆ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಕಲ್ಮಶಗಳನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee news ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ