ಎಚ್ಚರ.! ಚಹಾ ಸೇವನೆ ಬಳಿಕ ತಕ್ಷಣ ನೀರು ಕುಡಿದರೆ ಎದುರಾಗುವುದು ಈ ಸಮಸ್ಯೆ

ಮನೆಯ ಹಿರಿಯರು ಹೇಳುವ ಮಾತಿನಲ್ಲಿ ಸತ್ಯ ಇದೆ. ವೈಜ್ಞಾನಿಕವಾಗಿಯೂ ಇದು ನಿಜ. ಚಹಾ ಸೇವನೆ ನಂತರ ನೀರು ಕುಡಿದರೆ ಕೆಲವೊಂದು ಸಮಸ್ಯೆ ಎದುರಾಗುತ್ತದೆ.  

Written by - Ranjitha R K | Last Updated : Nov 22, 2022, 09:26 AM IST
  • ಚಹಾ ಕುಡಿದ ನಂತರ ನೀರು ಕುಡಿಯಬಾರದು
  • ಎದುರಾಗುತ್ತದೆ ಕೆಲವೊಂದು ಸಮಸ್ಯೆ .
  • ಹಲ್ಲುಗಳಿಗೆ ಹಾನಿ ಉಂಟಾಗುತ್ತದೆ
ಎಚ್ಚರ.! ಚಹಾ ಸೇವನೆ ಬಳಿಕ ತಕ್ಷಣ ನೀರು ಕುಡಿದರೆ ಎದುರಾಗುವುದು ಈ ಸಮಸ್ಯೆ  title=
Drinking Water After Tea

ಬೆಂಗಳೂರು : ಚಹಾ ಕುಡಿದ ನಂತರ ನೀರು ಕುಡಿಯಬಾರದು ಎಂದು  ಹಿರಿಯರು ಆಗಾಗ ಹೇಳುತ್ತಿರುತ್ತಾರೆ. ವಿನಾ ಕಾರಣ ಮನೆ ಹಿರಿಯರು ಹಾಗೆ ಹೇಳುತ್ತಿರುತ್ತಾರೆ ಎಂದು ಎಷ್ಟೋ ಸಲ ಆವರ ಮಾತನ್ನು ನಿರ್ಲಕ್ಷಿಸಿರಬಹುದು. ಆದರೆ, ಮನೆಯ ಹಿರಿಯರು ಹೇಳುವ ಮಾತಿನಲ್ಲಿ ಸತ್ಯ ಇದೆ. ವೈಜ್ಞಾನಿಕವಾಗಿಯೂ ಇದು ನಿಜ. ಚಹಾ ಸೇವನೆ ನಂತರ ನೀರು ಕುಡಿದರೆ ಕೆಲವೊಂದು ಸಮಸ್ಯೆ ಎದುರಾಗುತ್ತದೆ.  

ಚಹಾ ಸೇವನೆ ನಂತರ ನೀರು ಕುಡಿದರೆ ಎದುರಾಗುವ ಸಮಸ್ಯೆಗಳು : 
ಹಲ್ಲುಗಳಿಗೆ ಹಾನಿ :
ಚಹಾ ಕುಡಿದ ನಂತರ ನೀರು ಕುಡಿಯುವುದರಿಂದ ಹಲ್ಲುಗಳು ಹಾಳಾಗುತ್ತವೆ. ಇದು ಹಲ್ಲುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಬಿಸಿ ಕುಡಿದ ನಂತರ ತಕ್ಷಣ ತಣ್ಣಗಿರುವ ನೀರು ಕುಡಿಯುವುದರಿಂದ ಹಲ್ಲುಗಳ ಹೊರಪದರ ಅಂದರೆ ದಂತಕವಚದ ಮೇಲೆ ಪರಿಣಾಮ ಬೀರುತ್ತದೆ. ಬಿಸಿ ನಂತರ  ತಕ್ಷಣ ತಣ್ಣಗಿನ ಅನುಭವದಿಂದ ದಂತಕವಚಕ್ಕೆ ಹಾನಿ ಸಂಭವಿಸಬಹುದು.  ಇದರಿಂದ ವಸಡುಗಳು ದುರ್ಬಲಗೊಳ್ಳಬಹುದು.

ಇದನ್ನೂ ಓದಿ : Bad Cholesterol ಹೆಚ್ಚಾದಾಗ ಶರೀರದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ

ಅಲ್ಸರ್ ಗೆ ಕಾರಣವಾಗಬಹುದು : 
ಚಹಾ ಸೇವನೆ ನಂತರ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಹಾನಿಯಾಗಬಹುದು. ಚಹಾ ಕುಡಿದ ನಂತರ ನೀರು ಕುಡಿಯುವುದರಿಂದ, ಅಲ್ಸರ್ ಅಪಾಯ ಕೂಡಾ ಹೆಚ್ಚಾಗುತ್ತದೆ. ಮಾತ್ರವಲ್ಲ ಇದು ಅಸಿಡಿಟಿ ಸಮಸ್ಯೆಯನ್ನು ಕೂಡಾ ತಂದೊಡ್ಡುತ್ತದೆ. 

ಶೀತ -ಜ್ವರ  : 
ಹವಾಮಾನ ಬದಲಾವಣೆಯಿಂದ ಶೀತ ಮತ್ತು ಜ್ವರದ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ದೇಹದ ಉಷ್ಣತೆಯ ಬದಲಾವಣೆಯಿಂದಾಗಿಯೂ ಸಂಭವಿಸುತ್ತದೆ. ಚಹಾ ಕುಡಿದು ತಕ್ಷಣ ನೀರು ಕುಡಿಯುವುದರಿಂದ ತಾಪಮಾನದಲ್ಲಿ ಹಠಾತ್ ಬದಲಾವಣೆಯಾಗುತ್ತದೆ. ಈ ಕಾರಣದಿಂದಾಗಿ, ಶೀತ  ಗಂಟಲು ನೋವಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.  

ಇದನ್ನೂ ಓದಿ :  Ginger Milk: ಚಳಿಗಾಲದಲ್ಲಿ ಶುಂಠಿ ಹಾಲು ಕುಡಿದರೆ ಆರೋಗ್ಯಕ್ಕೆ ಸಿಗುತ್ತವೆ ಈ ಲಾಭಗಳು

ಮೂಗಿನಿಂದ ರಕ್ತಸ್ರಾವ :
ಬೇಸಿಗೆಯ ದಿನಗಳಲ್ಲಿ, ಕೆಲವರಿಗೆ ಮೂಗಿನಿಂದ ರಕ್ತಸ್ರಾವವಾಗುವ ಸಮಸ್ಯೆ ಎದುರಿಸುತ್ತಾರೆ. ಶೀತ ಮತ್ತು ಬಿಸಿ ತಾಪಮಾನದಲ್ಲಿನ ಹಠಾತ್ ಬದಲಾವಣೆಯಿಂದಾಗಿ ಈ ರೀತಿಯಾಗುತ್ತದೆ.  ಈ ಕಾರಣದಿಂದಾಗಿ ಚಹಾ ಕುಡಿದು ತಣ್ಣೀರು ಕುಡಿದರೆ, ಮೂಗಿನಿಂದ ರಕ್ತಸ್ರಾವದ ಸಮಸ್ಯೆ ಎದುರಾಗಬಹುದು. 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News