Bad Breath: ಹಲ್ಲುಜ್ಜಿದ ಬಳಿಕವೂ ಬಾಯಿಂದ ದುರ್ವಾಸನೆ ಬರುತ್ತಿದ್ದರೆ ಈ ಅಪಾಯಿಕಾರಿ ಕಾಯಿಲೆಗಳ ಸಂಕೇತವೂ ಆಗಿರಬಹುದು!

Bad Breath: ಬಾಯಿಯ ದುರ್ವಾಸನೆ ಬರಲು ಹಲವು ಕಾರಣಗಳಿರಬಹುದು. ಆದರೆ, ಬ್ರಶ್ ಮಾಡಿದ ಬಳಿಕವೂ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಏಕೆಂದರೆ ಇದು ಕೆಲವು ಅಪಾಯಕಾರಿ ಕಾಯಿಲೆಗಳ ಲಕ್ಷಣವೂ ಆಗಿರಬಹುದು. 

Written by - Yashaswini V | Last Updated : Jun 5, 2024, 04:14 PM IST
  • ಕೆಲವರಲ್ಲಿ ಮೌಖಿಕ ನೈರ್ಮಲ್ಯದ ಬಗ್ಗೆ ಗಮನ ಹರಿಸಿದರೂ ಕೂಡ ಬಾಯಿಯಿಂದ ಕೆಟ್ಟ ವಾಸನೆ ಬರುತ್ತದೆ.
  • ಇದು ಕೆಲವು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ?
Bad Breath: ಹಲ್ಲುಜ್ಜಿದ ಬಳಿಕವೂ ಬಾಯಿಂದ ದುರ್ವಾಸನೆ ಬರುತ್ತಿದ್ದರೆ ಈ ಅಪಾಯಿಕಾರಿ ಕಾಯಿಲೆಗಳ ಸಂಕೇತವೂ ಆಗಿರಬಹುದು! title=

Reason Behind Bad Breath: ಬಾಯಿಯಿಂದ ದುರ್ವಾಸನೆ ಬರುವುದನ್ನು ತಪ್ಪಿಸಲು ದಂತವೈದ್ಯರು ನಿತ್ಯ ಎರಡು ಬಾರಿ ಹಲ್ಲುಜ್ಜುವಂತೆ ಶಿಫಾರಸ್ಸು ಮಾಡುತ್ತಾರೆ. ಜೊತೆಗೆ ಪ್ರತಿ ಊಟದ ಬಳಿಕ ಬಾಯಿ ಮುಕ್ಕಳಿಸಿ ಉಗಿಯುವಂತೆ ಸಲಹೆ ನೀಡಲಾಗುತ್ತದೆ. ಆದರೆ, ಕೆಲವರಲ್ಲಿ ಮೌಖಿಕ ನೈರ್ಮಲ್ಯದ ಬಗ್ಗೆ ಗಮನ ಹರಿಸಿದರೂ ಕೂಡ ಬಾಯಿಯಿಂದ ಕೆಟ್ಟ ವಾಸನೆ ಬರುತ್ತದೆ. ಇದು ಕೆಲವು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ? 

ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, ಬ್ರಶ್ ಮಾಡಿದ ನಂತರವೂ ಬಾಯಿಯಿಂದ ದುರ್ವಾಸನೆ (Bad Breath) ಬರುತ್ತಿದ್ದರೆ ಅದು ಅಪಾಯಕಾರಿ ರೋಗಗಳ ಆರಂಭಿಕ ಲಕ್ಷಣವೂ ಆಗಿರಬಹುದು ಎಂದು ಗುರುತಿಸಲಾಗಿದೆ. 

ಹಲ್ಲುಜ್ಜಿದ ನಂತರವೂ ಬಾಯಿಂದ ಕೆಟ್ಟ ವಾಸನೆ ಬರುತ್ತಿದೆಯೇ? ಈ ಕಾಯಿಲೆಗಳ ಎಚ್ಚರಿಕೆ ಗಂಟೆಯೂ ಆಗಿರಬಹುದು! 
ಉಸಿರಾಟದ ಪ್ರದೇಶದ ಸೋಂಕು: 

ಸೈನುಟಿಸ್, ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ಉಸಿರಾಟದ ಸೋಂಕುಗಳಿಂದಾಗಿ, ದೇಹದಲ್ಲಿ ಬಾಷ್ಪಶೀಲ ಸಲ್ಫರ್ ಸಂಯುಕ್ತಗಳ (ವಿಎಸ್‌ಸಿ) ಮಟ್ಟವು ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಇದು ಬಾಯಿಯ ದುರ್ವಾಸನೆಗೂ ಕಾರಣವಾಗುತ್ತದೆ. ಸೋಂಕುಗಳು ಸಂಭವಿಸಿದಾಗ, ಬ್ಯಾಕ್ಟೀರಿಯಾವು ಉಸಿರಾಟದ ಪ್ರದೇಶದಲ್ಲಿ ಹೆಚ್ಚಾಗುತ್ತದೆ ಇದು ವಾಸನೆಯನ್ನು ಉಂಟುಮಾಡುತ್ತದೆ. 

ಇದನ್ನೂ ಓದಿ- ನಿತ್ಯ ಕೇವಲ 2 ಲವಂಗ ತಿನ್ನುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭ

ಜೀರ್ಣಕ್ರಿಯೆ ಸಮಸ್ಯೆ: 
ಬಾಯಿಯ ದುರ್ವಾಸನೆಯು ಆಸಿಡ್ ರಿಫ್ಲಕ್ಸ್, ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (ಜಿಇಆರ್‌ಡಿ) ಮತ್ತು ಹೊಟ್ಟೆಯ ಹುಣ್ಣುಗಳಂತಹ ಜೀರ್ಣಕಾರಿ ಸಮಸ್ಯೆಗಳ ಸಂಕೇತವೂ ಆಗಿರಬಹುದು. 

ಮೂತ್ರಪಿಂಡ ರೋಗ: 
ಮೂತ್ರಪಿಂಡಗಳು ದೇಹದ ತ್ಯಾಜ್ಯವನ್ನು ಹೊರಹಾಕುವ ಕೆಲಸವನ್ನು ಮಾಡುತ್ತದೆ. ಬ್ರಶ್ ಮಾಡಿದರೂ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಅದು ಮೂತ್ರಪಿಂಡದ ಕಾಯಿಲೆಯ ಲಕ್ಷಣವೂ ಆಗಿರಬಹುದು. 

ಮಧುಮೇಹ: 
ಡಯಾಬಿಟಿಸ್ ಸಮಸ್ಯೆ ಇರುವವರಲ್ಲಿಯೂ ಕೂಡ ಬಾಯಿಯ ದುರ್ವಾಸನೆ ಕಂಡು ಬರುತ್ತದೆ. 

ಇದನ್ನೂ ಓದಿ- ಮೈ ಕೈ ಸಣ್ಣಗಿದ್ದು ಹೊಟ್ಟೆ ಭಾಗ ಮಾತ್ರ ದುಂಡಗಿದೆಯೇ? ಮೊಸರಿಗೆ ಈ ಪುಡಿ ಬೆರೆಸಿ ಸೇವಿಸಿ,ಒಂದೇ ವಾರದಲ್ಲಿ ಹೊಟ್ಟೆಯೂ ಚಪ್ಪಟೆಯಾಗುವುದು

ಯಕೃತ್ತಿನ ಅಸ್ವಸ್ಥತೆ: 
ಸಿರೋಸಿಸ್ ಅಥವಾ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯಂತಹ ಯಕೃತ್ತಿನ ಸಮಸ್ಯೆಯಿದ್ದಾಗ ಚಯಾಪಚಯ ಸರಿಯಾಗಿ ಆಗುವುದಿಲ್ಲ. ಈ ಕಾರಣದಿಂದಾಗಿ ಲಿವರ್ ಸಮಸ್ಯೆ ಉಂಟಾದಾಗಲೂ ಬಾಯಿಯಿಂದ ದುರ್ವಾಸನೆ ಬರುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News