ಚಿಕ್ಕ ವಯಸ್ಸಿನಲ್ಲೇ ಗಡ್ಡ-ಮೀಸೆ ಬೆಳ್ಳಗಾಗಿದೆಯೇ? ಈ ಮನೆಮದ್ದುಗಳಿಂದ ಸಿಗುವುದು ಸುಲಭ ಪರಿಹಾರ .!

White beard treatment: ರಾಸಾಯನಿಕಯುಕ್ತ ಬಣ್ಣವನ್ನು ಗಡ್ಡ ಮೀಸೆಗೆ ಪ್ರತೀ ಸಲ ಬಳಸುವುದು ಹಾನಿಕಾರಕ. ಹಾಗಾಗಿ ಈ ಬಣ್ಣಗಳಿಂದ ಉಂಟಾಗುವ  ಅಡ್ಡ ಪರಿಣಾಮಗಳನ್ನು ತಪ್ಪಿಸಲು,  ಕೆಲವೊಂದು ಮನೆಮದ್ದುಗಳನ್ನು  ಅಳವಡಿಸಿಕೊಳ್ಳಬೇಕಾಗುತ್ತದೆ. 

Written by - Ranjitha R K | Last Updated : Nov 18, 2022, 11:38 AM IST
  • ಯುವಜನರು ಉದ್ದನೆಯ ಗಡ್ಡ ಮತ್ತು ಮೀಸೆಯನ್ನು ಇಷ್ಟಪಡುತ್ತಾರೆ.
  • ಗಡ್ಡ ಮೀಸೆ ಬೆಳೆಸುವ ಟ್ರೆಂಡ್ ಅನ್ನು ಸೆಲೆಬ್ರಿಟಿಗಳು ಫಾಲೋ ಮಾಡುತ್ತಿದ್ದಾರೆ
  • ಕೆಲವೊಂದು ಮನೆಮದ್ದುಗಳ ಮೂಲಕವೂ ಈ ಸಮಸ್ಯೆ ಪರಿಹಾರ ಸಾಧ್ಯ
ಚಿಕ್ಕ ವಯಸ್ಸಿನಲ್ಲೇ ಗಡ್ಡ-ಮೀಸೆ ಬೆಳ್ಳಗಾಗಿದೆಯೇ? ಈ ಮನೆಮದ್ದುಗಳಿಂದ   ಸಿಗುವುದು ಸುಲಭ ಪರಿಹಾರ .!  title=
White beard treatment

White beard treatment : ಇಂದಿನ ದಿನಗಳಲ್ಲಿ ಹೆಚ್ಚಿನ ಯುವಜನರು ಉದ್ದನೆಯ ಗಡ್ಡ ಮತ್ತು ಮೀಸೆಯನ್ನು ಇಷ್ಟಪಡುತ್ತಾರೆ. ನಟರಾಗಲಿ, ಆಟಗಾರರಾಗಲಿ ಎಲ್ಲರೂ ಈ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಆದರೆ ಕಿರಿ ವಯಸ್ಸಿನಲ್ಲಿಯೇ ಗಡ್ಡ, ಮೀಸೆಯ ಕೂದಲು ಬೆಳ್ಳಗಾಗುವ ಕಾರಣ ಗಡ್ಡ ಮೀಸೆ ಬೆಳೆಸುವ ಆಸೆ ಇದ್ದರೂ ಕೆಲವರಿಗೆ ಇದು ಸಾಧ್ಯವಾಗುವುದಿಲ್ಲ.   ಈ ಸಮಸ್ಯೆಯನ್ನು ಸರಿಪಡಿಸುವ ಸಲುವಾಗಿ ಕೆಲವರು ಕಲರ್ ಮೊರೆ ಹೋಗುತ್ತಾರೆ. ಆದರೆ ರಾಸಾಯನಿಕಯುಕ್ತ ಬಣ್ಣವನ್ನು ಗಡ್ಡ ಮೀಸೆಗೆ ಪ್ರತೀ ಸಲ ಬಳಸುವುದು ಹಾನಿಕಾರಕ. ಹಾಗಾಗಿ ಈ ಬಣ್ಣಗಳಿಂದ ಉಂಟಾಗುವ  ಅಡ್ಡ ಪರಿಣಾಮಗಳನ್ನು ತಪ್ಪಿಸಲು, ಕೆಲವೊಂದು ಮನೆಮದ್ದುಗಳನ್ನು  ಅಳವಡಿಸಿಕೊಳ್ಳಬೇಕಾಗುತ್ತದೆ.  

ತೆಂಗಿನ ಎಣ್ಣೆ  :
ಗಡ್ಡದ ಕೂದಲಿಗೆ ತೆಂಗಿನೆಣ್ಣೆ ಮತ್ತು ಕರಿಬೇವಿನ ಎಲೆಗಳನ್ನು ಬಳಸಿದರೆ ಅದು  ಕೂದಲನ್ನು ಕಪ್ಪಾಗಿಸುತ್ತದೆ. ಈ ಮಿಶ್ರಣವನ್ನು ತಯಾರಿಸಲು ತೆಂಗಿನ ಎಣ್ಣೆಗೆ ಕರಿಬೇವಿನ ಎಲೆಗಳನ್ನು ಸೇರಿಸಿ  ಕಡಿಮೆ ಉರಿಯಲ್ಲಿ ಕುದಿಸಿ. ನಂತರ ಈ ಎಣ್ಣೆಯನ್ನು ತಣ್ಣಗಾಗಲು ಬಿಡಿ. ನಂತರ ಈ ಎಣ್ಣೆಯನ್ನು ಗಡ್ಡ ಮತ್ತು ಮೀಸೆಗೆ ಹಚ್ಚಿ 5 ನಿಮಿಷಗಳ ಕಾಲ ಬಿಡಿ. ಉತ್ತಮ ಫಲಿತಾಂಶಗಳನ್ನು ಪಡೆಯಲು ಈ ಎಣ್ಣೆಯನ್ನು ಬಳಸಿ ನಿಯಮಿತವಾಗಿ ಮಸಾಜ್ ಮಾಡಿ. 

ಇದನ್ನೂ ಓದಿ : Black Wheat Benefits: ರೈತರ 'ಕಪ್ಪು ಚಿನ್ನ' ಎಂದೇ ಕರೆಯಲಾಗುವ ಈ ಗೋದಿಯ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ?

ಎಳ್ಳಿನ ಬಳಕೆ :
ಎಳ್ಳನ್ನು ಬಳಸಿ ಗಡ್ಡದ ಕೂದಲನ್ನು ಕಪ್ಪಾಗಿಸಬಹುದು. ನೈಸರ್ಗಿಕ ವಿಧಾನಗಳಲ್ಲಿ ಕೂದಲನ್ನು ಕಪ್ಪಾಗಿಸಲು ಇದು ತುಂಬಾ ಪ್ರಯೋಜನಕಾರಿ.  ಇದಕ್ಕಾಗಿ ಕಪ್ಪು ಎಳ್ಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ನಂತರ ಮರುದಿನ ಇದನ್ನು ಪೇಸ್ಟ್ ಮಾಡಿ ಗಡ್ಡಕ್ಕೆ ಹಚ್ಚಿ. ಒಣಗಿದ ನಂತರ ಗಡ್ಡವನ್ನು ಸ್ವಚ್ಛಗೊಳಿಸಿ.  

ನೆಲ್ಲಿಕಾಯಿ : 
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಐರನ್ ಅಂಶದಿಂದ ಸಮೃದ್ಧವಾಗಿದೆ. ಇದು ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದಕ್ಕಾಗಿ, ನೆಲ್ಲಿಕಾಯಿಯನ್ನು ಪುಡಿಮಾಡಿ ಅದನ್ನು ಪೇಸ್ಟ್ ಮಾಡಿ. ಕಬ್ಬಿಣದ ಪಾತ್ರೆಯಲ್ಲಿ ರಾತ್ರಿಯಿಡೀ ಇಡಿ. ಬೆಳಿಗ್ಗೆ ಇದನ್ನು ಗಡ್ಡ ಮತ್ತು ಮೀಸೆಗೆ  ಹಚ್ಚಿ. ಇದನ್ನು ಹಚ್ಚುವುದರಿಂದ ಬೆಳ್ಳಗಾಗಿರುವ ಗಡ್ಡ ಮೀಸೆ ಕಪ್ಪಾಗುತ್ತದೆ. 

ಇದನ್ನೂ ಓದಿ :  Green Chickpeas: ಹೃದ್ರೋಗ, ಮಧುಮೇಹ ಹಾಗೂ ಕ್ಯಾನ್ಸರ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ ಈ ಕಡಲೆ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಈ ಪರಿಹಾರಗಳನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News