ನಿತ್ಯ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ಕಾಳು ತಿನ್ನುವುದರಿಂದ ಈ ಸಮಸ್ಯೆಗಳಿಂದ ಸಿಗುವುದು ಪರಿಹಾರ

Soaked Chana Benefits:ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ಕಾಳು  ತಿನ್ನುವುದರಿಂದ  ಆರೋಗ್ಯಕೆ ಬಹಳಷ್ಟು ಪ್ರಯೋಜನಗಳಿವೆ. 

Written by - Ranjitha R K | Last Updated : Nov 17, 2022, 02:49 PM IST
  • ಕಡಲೆ ಕಾಳನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ.
  • ನೆನೆಸಿಟ್ಟ ಹಸಿ ಕಾಳನ್ನು ತಿಂದರೆ ಆರೋಗ್ಯ ಪ್ರಯೋಜನ ಹೆಚ್ಚು.
  • ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ನಿತ್ಯ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ಕಾಳು ತಿನ್ನುವುದರಿಂದ ಈ ಸಮಸ್ಯೆಗಳಿಂದ ಸಿಗುವುದು ಪರಿಹಾರ  title=
Soaked Chana Benefits

ಬೆಂಗಳೂರು : Soaked Chana  Benefits : ಕಡಲೆ ಕಾಳನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಈ ಕಾಳನ್ನು ಬೇಯಿಸಿ ತಿನ್ನುವುದಕ್ಕಿಂದ ನೆನೆಸಿಟ್ಟ ಹಸಿ ಕಾಳನ್ನು  ತಿಂದರೆ ಆರೋಗ್ಯ ಪ್ರಯೋಜನ ಹೆಚ್ಚು. ಏಕೆಂದರೆ ಪ್ರೋಟೀನ್, ನಾರಿನಂಶ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಸೋಡಿಯಂನಂತಹ ಪೋಷಕಾಂಶಗಳು ಈ ಕಾಳುಗಳಲ್ಲಿ ಕಂಡುಬರುತ್ತವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ಕಾಳು  ತಿನ್ನುವುದರಿಂದ  ಆರೋಗ್ಯಕೆ ಬಹಳಷ್ಟು ಪ್ರಯೋಜನಗಳಿವೆ. 

ನೆನೆಸಿದ ಕಡಲೆ ಕಾಳು ತಿನ್ನುವುದರಿಂದ ಆಗುವ ಪ್ರಯೋಜನಗಳು :
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : 
ಜೀರ್ಣಕ್ರಿಯೆಯನ್ನು ಸುಧಾರಿಸಲು ಪ್ರತಿದಿನ ನೆನೆಸಿದ ಕಡಲೆ ಕಾಳುಗಳನ್ನು ತಿನ್ನಬಹುದು. ಏಕೆಂದರೆ ಇದರಲ್ಲಿ ಫೈಬರ್ ಪ್ರಮಾಣ ಹೆಚ್ಚಾಗಿರುತ್ತದೆ. ಫೈಬರ್ ಕರುಳಿನ ಮತ್ತು ಹೊಟ್ಟೆಯ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಂದರೆ ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಈ ಮೂಲಕ  ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. 

ಇದನ್ನೂ ಓದಿ : Diet Tips : ಬೊಜ್ಜು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ ಈ ಹಣ್ಣು!

ಹೃದಯದ ಆರೋಗ್ಯಕ್ಕಾಗಿ :
ನೆನೆಸಿದ ಕಡಲೆ ಕಾಳು ತಿನ್ನುವುದು  ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಏಕೆಂದರೆ ಆಂಟಿಆಕ್ಸಿಡೆಂಟ್‌ಗಳು ಮತ್ತು ಆಂಥೋಸಯಾನಿನ್‌ಗಳು  ಇದರಲ್ಲಿ ಕಂಡುಬರುತ್ತವೆ. ಈ ಎಲ್ಲಾ ಅಂಶಗಳು ಹೃದಯ ಮತ್ತು ರಕ್ತನಾಳಗಳನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಇದಲ್ಲದೆ,  ಕಡಲೆ ಕಾಳಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ತೂಕ ನಷ್ಟಕ್ಕೆ ಸಹಕಾರಿ : 
ತೂಕ ಇಳಿಸಿಕೊಳ್ಳಲು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ಸೇವಿಸಬಹುದು. ಕಾಳುಗಳಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಹಾಗಾಗಿ ನೆನೆಸಿದ ಕಾಳುಗಳನ್ನು ಪ್ರತಿನಿತ್ಯ ಬೆಳಗ್ಗೆ ತಿಂದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಈ ಕಾರಣದಿಂದ ಪದೇ ಪದೇ ತಿನ್ನುವುದು ತಪ್ಪಿದಂತಾಗಿ ತೂಕವು ನಿಯಂತ್ರಣದಲ್ಲಿರುತ್ತದೆ.

ಇದನ್ನೂ ಓದಿ : Pregnancy Tips : ಆಹಾರದಲ್ಲಿನ ಈ ನಿರ್ಲಕ್ಷ್ಯವು ತಾಯಿಯಾಗಲು ಅಡ್ಡಿ!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News