ಈ ಹೊತ್ತಿನಲ್ಲಿ ಕಿವಿ ಹಣ್ಣು ತಿಂದರೆ ಆರೋಗ್ಯಕ್ಕೆ ಅಮೃತ !ಮಾಯವಾಗುವುದು ಈ ರೋಗಗಳು

Kiwi Health Benefits : ಸಿಹಿ ಮತ್ತು ಹುಳಿ ಮಿಶ್ರಿತವಾಗಿರುವ ಈ ಹಣ್ಣಿಗೆ ಬೇಡಿಕೆ ಕೂಡಾ ಹೆಚ್ಚುತ್ತಿದೆ. ಇದನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ನಮ್ಮನ್ನು ಕಾಪಾಡಿಕೊಳ್ಳಬಹುದು.

Written by - Ranjitha R K | Last Updated : Mar 27, 2024, 06:35 PM IST
  • ಹಣ್ಣುಗಳನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ
  • ಪೌಷ್ಟಿಕಾಂಶವುಳ್ಳ ಹಣ್ಣುಗಳು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.
  • ಕೆಲವು ವಿಶೇಷ ಗುಣಗಳನ್ನು ಹೊಂದಿರುವ ಹಣ್ಣುಗಳಿವೆ.
ಈ ಹೊತ್ತಿನಲ್ಲಿ ಕಿವಿ ಹಣ್ಣು ತಿಂದರೆ ಆರೋಗ್ಯಕ್ಕೆ ಅಮೃತ !ಮಾಯವಾಗುವುದು ಈ ರೋಗಗಳು  title=

ಬೆಂಗಳೂರು : Health Benefits of Kiwi : ಹಣ್ಣುಗಳನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ಪೌಷ್ಟಿಕಾಂಶವುಳ್ಳ ಹಣ್ಣುಗಳು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಅದರಲ್ಲಿಯೂ ಕೆಲವು ವಿಶೇಷ ಗುಣಗಳನ್ನು ಹೊಂದಿರುವ ಹಣ್ಣುಗಳಿವೆ. ಈ ಹಣ್ಣುಗಳಲ್ಲಿ ಕಿವಿ ಕೂಡಾ ಒಂದು. ಸಿಹಿ ಮತ್ತು ಹುಳಿ ಮಿಶ್ರಿತವಾಗಿರುವ ಈ ಹಣ್ಣಿಗೆ ಬೇಡಿಕೆ ಕೂಡಾ ಹೆಚ್ಚುತ್ತಿದೆ. ಇದನ್ನು ಸಿಪ್ಪೆ ಸಮೇತವಾದರೂ ತಿನ್ನಬಹುದು ಇಲ್ಲಾ ಸಿಪ್ಪೆ ತೆಗೆದು ಬೇಕಾದರೂ ಸೇವಿಸಬಹುದು. ಇದನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ನಮ್ಮನ್ನು ಕಾಪಾಡಿಕೊಳ್ಳಬಹುದು.

ಪೋಷಕಾಂಶಗಳ ಆಗರ ಕಿವಿ : 
ಕಿವಿ ಹಣ್ಣು ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಸಿ, ಫೋಲಿಕ್ ಆಮ್ಲ, ವಿಟಮಿನ್ ಇ ಮತ್ತು ಪಾಲಿಫಿನಾಲ್‌ಗಳ ಆಗರವಾಗಿದೆ. ಕಿವಿಯಲ್ಲಿ ಕಡಿಮೆ ಕ್ಯಾಲೋರಿಯೂ ಇರುವುದರಿಂದ ತೂಕ ಇಳಿಸಲು ಈ ಹಣ್ಣು ಬೆಸ್ಟ್. 

ಇದನ್ನೂ ಓದಿ : Benefits of Basil Seeds: ಬೇಸಿಗೆಯಲ್ಲಿ ಕಾಮಕಸ್ತೂರಿ ಜ್ಯೂಸ್‌ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ

ಈ ಸಮಸ್ಯೆಯಲ್ಲಿ ಕಿವಿ ಪ್ರಯೋಜನಕಾರಿ :
ದೃಷ್ಟಿಯನ್ನು ಹೆಚ್ಚಿಸುತ್ತದೆ: ದೃಷ್ಟಿ ದೋಷವನ್ನು ಸುಧಾರಿಸಲು ಕಿವಿ ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ದೃಷ್ಟಿಯನ್ನು  ಹೆಚ್ಚಿಸಬಹುದು.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ : ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಋತುಮಾನದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಿವಿ ಹಣ್ಣನ್ನು ಸೇವಿಸಬಹುದು. ಇದರಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. 

ಜ್ವರದ ಸಮಯದಲ್ಲಿ ಪ್ರಯೋಜನಕಾರಿ: ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಫೈಬರ್‌ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕಿವಿಯನ್ನು ಜ್ವರದ ಸಮಯದಲ್ಲಿ ಸೇವಿಸಬಹುದು. ಡೆಂಗ್ಯೂನಿಂದ ಬಳಲುತ್ತಿದ್ದವರು ಕಿವಿ ಹಣ್ಣನ್ನು ಸೇವಿಸಬಹುದು. ವಾಸ್ತವವಾಗಿ, ಡೆಂಗ್ಯೂನಲ್ಲಿ ಪ್ಲೇಟ್ಲೆಟ್  ಗಳು  ಬೇಗನೆ ಕಡಿಮೆಯಾಗಲು ಪ್ರಾರಂಭಿಸುತ್ತವೆ. ಹಾಗಾಗಿ ಕಿವಿ ಹಣ್ಣು  ಪ್ಲೇಟ್ಲೆಟ್ ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : ಕಿಡ್ನಿ ಸ್ಟೋನ್ ಇದ್ದರೆ ಈ ಜ್ಯೂಸ್ ಕುಡಿಯಿರಿ, ಒಂದೇ ವಾರದಲ್ಲಿ ಕಲ್ಲು ಹೊರ ಬರುತ್ತದೆ !

ಹೃದಯದ ಆರೋಗ್ಯಕ್ಕೆ : ಕಿವಿ ಹಣ್ಣಿನ ಸೇವನೆಯು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.ಇದರಲ್ಲಿರುವ ಫೈಬರ್ ಮತ್ತು ಪೊಟ್ಯಾಸಿಯಮ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. 

ಮಲಬದ್ಧತೆಯನ್ನು ನಿವಾರಿಸುತ್ತದೆ: ಮಲಬದ್ಧತೆಯಿಂದ ಬಳಲುತ್ತಿದ್ದರೆ, ಪ್ರತಿದಿನ 2-3 ಕಿವು ಹಣ್ಣು ಸೇವಿಸಬಹುದು. ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಕಿವಿ ತುಂಬಾ ಪ್ರಯೋಜನಕಾರಿಯಾಗಿದೆ.

 ಈ ಹಣ್ಣನ್ನು ಯಾವ ಸಮಯದಲ್ಲಿ ಸೇವಿಸಬೇಕು? : 
 ಕಿವಿಯನ್ನು ಮಧ್ಯಾಹ್ನ ಅಥವಾ ಸಂಜೆಯ ಬದಲಿಗೆ ಬೆಳಿಗ್ಗೆ 10 ರಿಂದ 12 ರ ನಡುವೆ ಸೇವಿಸಿದರೆ ಒಳ್ಳೆಯದು. ಕಿವಿಯು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ,  ಇದನ್ನು ಖಾಲಿ ಹೊಟ್ಟೆಯಲ್ಲಿಯೂ ಸೇವಿಸಬಹುದು.ಆದರೆ ಖಾಲಿ ಹೊಟ್ಟೆಯಲ್ಲಿ ಹುಳಿ ಹಣ್ಣನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ  ಬೆಳಗಿನ ಉಪಾಹಾರದ ನಂತರ ಕಿವಿ ಹಣ್ಣು ಸೇವಿಸಿದರೆ ಇದರ ಪೋಷಕ ತತ್ವಗಳು ಸರಿಯಾಗಿ ಸಿಗುತ್ತವೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News