ದೇಹದಲ್ಲಿನ ಕಬ್ಬಿಣದ ಕೊರತೆ ನಿವಾರಿಸಲು ಈ ಹಣ್ಣು, ತರಕಾರಿಗಳನ್ನು ಸೇವಿಸಿ

ಪಾಲಕ್ ಕಬ್ಬಿಣ, ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿದೆ. ಇದು ನಮ್ಮ ರೋಗನಿರೋಧಕ ಶಕ್ತಿ, ಹಿಮೋಗ್ಲೋಬಿನ್ ಅನ್ನು ಉತ್ತೇಜಿಸುತ್ತದೆ, ಜೊತೆಗೆ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.

Last Updated : Nov 17, 2020, 03:31 PM IST
  • ಕಬ್ಬಿಣವು ನಮ್ಮ ದೇಹದಲ್ಲಿ ಒಂದು ಪ್ರಮುಖ ಅಂಶವಾಗಿದೆ.
  • ಇದರ ಕೊರತೆಯು ತಲೆನೋವು, ತಲೆತಿರುಗುವಿಕೆ, ಉಸಿರಾಟದ ತೊಂದರೆ, ದೌರ್ಬಲ್ಯ, ಹಸಿವಿನ ಕೊರತೆ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ.
  • ಪಾಲಕ್ ಕಬ್ಬಿಣ, ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿದೆ.
ದೇಹದಲ್ಲಿನ ಕಬ್ಬಿಣದ ಕೊರತೆ ನಿವಾರಿಸಲು ಈ ಹಣ್ಣು, ತರಕಾರಿಗಳನ್ನು ಸೇವಿಸಿ title=

ಕಬ್ಬಿಣವು ನಮ್ಮ ದೇಹದಲ್ಲಿ ಒಂದು ಪ್ರಮುಖ ಅಂಶವಾಗಿದೆ, ಇದರ ಕೊರತೆಯು ತಲೆನೋವು, ತಲೆತಿರುಗುವಿಕೆ, ಉಸಿರಾಟದ ತೊಂದರೆ, ದೌರ್ಬಲ್ಯ, ಹಸಿವಿನ ಕೊರತೆ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಲ್ಲದೆ ಆರೋಗ್ಯಕರ ಚರ್ಮ, ಕೂದಲು, ಕೋಶಗಳನ್ನು ಕಾಪಾಡಿಕೊಳ್ಳಲು, ಆಯಾಸವನ್ನು ತೆಗೆದುಹಾಕಲು ಕಬ್ಬಿಣವು ಸಹಾಯ ಮಾಡುತ್ತದೆ. ಪ್ರಸ್ತುತ ಚಳಿಗಾಲದಲ್ಲಿ ನಿಮ್ಮ ದೇಹಕ್ಕೆ ಕಬ್ಬಿಣದ (Iron) ಅಂಶವನ್ನು ಒದಗಿಸುವ ಕೆಲವು ಹಣ್ಣುಗಳು ಮತ್ತು ತರಕಾರಿಗಳ ಬಗ್ಗೆ ನಾವು ಮಾಹಿತಿ ನೀಡುತ್ತೇವೆ. ಇದರಿಂದ ದೇಹದಲ್ಲಿನ ಕಬ್ಬಿಣದ ಕೊರತೆ ನಿವಾರಿಸಲು ಸಾಧ್ಯವಾಗುತ್ತದೆ.

ಬ್ರೋಕ್ಲಿ (Broccoli)


ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು, ನಾವು ದೈನಂದಿನ ಆಹಾರದಲ್ಲಿ ಕಬ್ಬಿಣವನ್ನು ಒಳಗೊಂಡಿರುವ ಇದೇ ರೀತಿಯ ಆಹಾರವನ್ನು ಸೇವಿಸಬೇಕು. ಬ್ರೋಕ್ಲಿ ಇದೇ ರೀತಿಯ ಗುಣಗಳನ್ನು ಹೊಂದಿದೆ. ಬ್ರೋಕ್ಲಿ ನಿಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಬ್ರೋಕ್ಲಿ/ಬ್ರೊಕೊಲಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ, ಫೋಲೇಟ್, ಸತು ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ.

ಎಲೆಕೋಸು (Cabbage)


ಎಲೆಕೋಸು ಚಳಿಗಾಲದಲ್ಲಿ ಸಹ ತಿನ್ನಬಹುದಾದ ತರಕಾರಿಗಳಲ್ಲಿ ಒಂದು. ಈ ತರಕಾರಿ ಕಬ್ಬಿಣದ ಕೊರತೆಯನ್ನು ತಡೆಯಲು ಸಹಾಯ ಮಾಡುತ್ತದೆ. ತೂಕ ನಷ್ಟ, ಆರೋಗ್ಯಕರ ಚರ್ಮವನ್ನು ಸಹ ಉತ್ತೇಜಿಸುತ್ತದೆ. ಎಲೆಕೋಸು ಕಬ್ಬಿಣ, ಅನೇಕ ಅಗತ್ಯ ಅಂಶಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ.

ಬೀಟ್ರೂಟ್ (Beetroot)


ಬೀಟ್ರೂಟ್ ನಮ್ಮ ದೇಹಕ್ಕೆ ಒಂದು ಪ್ರಮುಖ ಔಷಧಿಯಂತೆ. ಇದು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಬೀಟ್ರೂಟ್ ನಲ್ಲಿ ಕಬ್ಬಿಣ, ತಾಮ್ರ, ಪ್ರೋಟೀನ್, ಜೀವಸತ್ವಗಳು, ಕ್ಯಾಲ್ಸಿಯಂ, ಸಲ್ಫರ್ ಮುಂತಾದ ಖನಿಜಗಳಿವೆ. ಇದರಲ್ಲಿರುವ ವಿಟಮಿನ್-ಸಿ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ತೆಂಗಿನ ಕಾಯಿಯ ಅದ್ಭುತ ಪ್ರಯೋಜನಗಳಿವು

ಪಾಲಾಕ್ ಸೊಪ್ಪು (Spinach)


ಪಾಲಕ್ ಕಬ್ಬಿಣ, ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿದೆ. ಇದು ನಮ್ಮ ರೋಗನಿರೋಧಕ ಶಕ್ತಿ, ಹಿಮೋಗ್ಲೋಬಿನ್ ಅನ್ನು ಉತ್ತೇಜಿಸುತ್ತದೆ, ಜೊತೆಗೆ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ದೊಡ್ಡ ದೊಡ್ಡ ಕಾಯಿಲೆಗಳನ್ನು ನಿಮ್ಮಿಂದ ದೂರ ಇರಿಸುತ್ತೆ ಒಂದು ಸೇಬು

ಕಿತ್ತಳೆ (Orange), ಆಪಲ್ (APPLE) ಮತ್ತು ದಾಳಿಂಬೆ (Pomegranate) 
ಇಡೀ ದೇಹವನ್ನು ಆರೋಗ್ಯವಾಗಿಡಲು ಆಪಲ್ ಸಹಾಯ ಮಾಡುತ್ತದೆ. ಆಪಲ್ (Apple) ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿದೆ. ಈ ಹಣ್ಣು ಕಬ್ಬಿಣದ ಪ್ರಮುಖ ಮೂಲವಾಗಿದೆ. ಅದೇ ಸಮಯದಲ್ಲಿ ವಿಟಮಿನ್-ಸಿ (Vitamin-C) ಸಮೃದ್ಧವಾಗಿರುವ ಕಿತ್ತಳೆ ನಮ್ಮ ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಾಳಿಂಬೆ ಕಬ್ಬಿಣ, ಜೀವಸತ್ವಗಳು, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಮತ್ತು ನಾರಿನ ಉತ್ತಮ ಮೂಲವಾಗಿದೆ.

Trending News