Foods For Kidney Patient: ಕಿಡ್ನಿಯ ಆರೋಗ್ಯಕ್ಕಾಗಿ ಸೇವಿಸಿ ಈ ಐದು ಆಹಾರ

Healthy Diet For Kidney Patient : ಆರೋಗ್ಯಕರವಾಗಿರಲು ಆರೋಗ್ಯಕರ ಆಹಾರ ಸೇವಿಸುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ. ಆರೋಗ್ಯಕರ ಆಹಾರವು ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ.

Written by - Ranjitha R K | Last Updated : Jul 16, 2021, 07:44 PM IST
  • ಕಳಪೆ ಆಹಾರ ಪದ್ಧತಿಯಿಂದ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ
  • ಕಿಡ್ನಿ ದೇಹದ ಪ್ರಮುಖ ಅಂಗವಾಗಿದೆ.
  • ಪಾಲಕ್ ಸೇವನೆ ಕಿಡ್ನಿಯ ಆರೋಗ್ಯಕ್ಕೆ ಬಹಳ ಮುಖ್ಯ
Foods For Kidney Patient: ಕಿಡ್ನಿಯ ಆರೋಗ್ಯಕ್ಕಾಗಿ ಸೇವಿಸಿ ಈ ಐದು ಆಹಾರ  title=
ಕಳಪೆ ಆಹಾರ ಪದ್ಧತಿಯಿಂದ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ (photo zee news)

ನವದೆಹಲಿ :  Healthy Diet For Kidney Patient : ಆರೋಗ್ಯಕರವಾಗಿರಲು ಆರೋಗ್ಯಕರ ಆಹಾರ ಸೇವಿಸುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ. ಆರೋಗ್ಯಕರ ಆಹಾರವು ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ. ಅಲ್ಲದೆ, ಅನೇಕ ರೋಗಗಳಿಂದ ರಕ್ಷಿಸುವುದಕ್ಕೂ ಸಹಾಯ ಮಾಡುತ್ತದೆ. ಮೂತ್ರಪಿಂಡವು ಮಾನವನ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಒಂದು ರೀತಿಯಲ್ಲಿ, ಮೂತ್ರಪಿಂಡವು ನಮ್ಮ ದೇಹದಲ್ಲಿನ ಫಿಲ್ಟರ್ ರೀತಿಯಲ್ಲಿ ಕೆಲಸ ಮಾಡುತ್ತದೆ. ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಾಗ ಮೂತ್ರಪಿಂಡದ ಆರೋಗ್ಯವನ್ನು ನೋಡಿಕೊಳ್ಳುವುದು ಸಹ ಮುಖ್ಯವಾಗಿದೆ. ಕೆಟ್ಟ ಆಹಾರ ಪದ್ದತಿಯು ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ಮೂತ್ರಪಿಂಡದ ಕಲ್ಲು (Kidney stone) ರಚನೆಯಿಂದ ಹಿಡಿದು ಮೂತ್ರಪಿಂಡದ ಕ್ಯಾನ್ಸರ್ (Cancer) ವರೆಗಿನ ಕಾಯಿಲೆಗಳು ಉಂಟಾಗಬಹುದು. ಮೂತ್ರಪಿಂಡವನ್ನು ಆರೋಗ್ಯವಾಗಿಡಲು, ನಿಮ್ಮ ಡಯಟ್ ನಲ್ಲಿ ಆರೋಗ್ಯಕರ ಆಹಾರಗಳನ್ನು ಸೇರಿಸಬೇಕು. 

ನಿಮಗೆ ಕಿಡ್ನಿ ಸಮಸ್ಯೆಗಳಿದ್ದರೆ ಈ ವಸ್ತುಗಳನ್ನು ಸೇವಿಸಿ:
1. ಪಾಲಕ್ : ಪಾಲಕ್ (Palak) ಹಸಿರು ಎಲೆಗಳ ತರಕಾರಿ. ಇದರಲ್ಲಿ ವಿಟಮಿನ್ ಎ, ಸಿ, ಕೆ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಫೋಲೇಟ್ ಸಮೃದ್ಧವಾಗಿದೆ. ಪಾಲಕ್ ನಲ್ಲಿ ಕಂಡುಬರುವ ಬೀಟಾ ಕ್ಯಾರೋಟಿನ್ ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸಲು ಸಹಾಯ ಮಾಡುತ್ತದೆ. ಪಾಲಕ್ ಅನ್ನು  ಸೇರಿಸುವ ಮೂಲಕ ಮೂತ್ರಪಿಂಡಗಳನ್ನು ಆರೋಗ್ಯವಾಗಿಡಬಹುದು.

ಇದನ್ನೂ ಓದಿ : Most Common Exercise Mistakes: ಪ್ರತಿದಿನ ವ್ಯಾಯಾಮ ಮಾಡುವಾಗ ಈ ರೀತಿಯ ತಪ್ಪುಗಳಾಗದಂತೆ ನಿಗಾವಹಿಸಿ

2. ಅನಾನಸ್ : ಅನಾನಸ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ (Health benefits of pineapple) ಎಂದು ಪರಿಗಣಿಸಲಾಗಿದೆ. ಅನಾನಸ್ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದು ಬಹಳ ಕಡಿಮೆ ಪೊಟ್ಯಾಸಿಯಮ್ ಮತ್ತು ಹೆಚ್ಚು ಫೈಬರ್ ಅನ್ನು ಹೊಂದಿರುತ್ತದೆ. ಇದು ಮೂತ್ರಪಿಂಡದ ರೋಗವನ್ನು (Kidney disease) ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

3. ಕ್ಯಾಪ್ಸಿಕಂ : ಕ್ಯಾಪ್ಸಿಕಂನಲ್ಲಿ (Capsicum) ಆಂಟಿ ಆಕ್ಸಿಡೆಂಟ್ ಅಧಿಕ ಪ್ರಮಾಣದಲ್ಲಿರುತ್ತವೆ. ಇದಲ್ಲದೆ ಇದರಲ್ಲಿ ವಿಟಮಿನ್ ಸಿ ಕೂಡಾ ಸಮೃದ್ಧವಾಗಿದೆ. ಕ್ಯಾಪ್ಸಿಕಂ ಅನ್ನು ಆಹಾರದಲ್ಲಿ ಸೇರಿಸುವ ಮೂಲಕ ಮೂತ್ರಪಿಂಡದ ಸಮಸ್ಯೆಗಳನ್ನು ತಪ್ಪಿಸಬಹುದು. 

4. ಹೂಕೋಸು : ಹೂಕೋಸು ವಿಟಮಿನ್ ಸಿ, ಫೋಲೇಟ್ ಮತ್ತು ಫೈಬರ್ ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದು ಇಂಡೋಲ್ಸ್, ಗ್ಲುಕೋಸಿನೊಲೇಟ್‌ಗಳು ಮತ್ತು ಥಿಯೋಸಯನೇಟ್‌ಗಳಿಂದ ಕೂಡಿದೆ. ಹೂಕೋಸು ಸೇವನೆಯಿಂದ ಮೂತ್ರಪಿಂಡಗಳನ್ನು ಆರೋಗ್ಯವಾಗಿಡಬಹುದು. 

ಇದನ್ನೂ ಓದಿ : ಊಟ ಮಾಡಿದ ಕೂಡಲೇ ನೀವು ಮಾಡುತ್ತೀರಾ ಈ ತಪ್ಪು ? ಹಾಗಿದ್ದರೆ ತಕ್ಷಣವೇ ಸರಿಪಡಿಸಿಕೊಳ್ಳಿ

5. ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿ (Garlic) ಸೋಡಿಯಂ, ಪೊಟ್ಯಾಸಿಯಮ್ ಮತ್ತು ಫಾಸ್ಫರಸ್ ಕಡಿಮೆ ಪ್ರಮಾಣದಲ್ಲಿರುತ್ತವೆ.  ಇದು ಮೂತ್ರಪಿಂಡ ಕಾಯಿಲೆ ಇರುವವರಿಗೆ ಪ್ರಯೋಜನಕಾರಿಯಾಗಿದೆ. ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸುವ ಮೂಲಕ ಮೂತ್ರಪಿಂಡದ ಸಮಸ್ಯೆಯನ್ನು ನಿವಾರಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News