ಈ ಕಾರಣಗಳಿಗಾಗಿ ರಾತ್ರಿ ಮಲಗುವ ವೇಳೆ ಪಕ್ಕದಲ್ಲಿರಲಿ ನಿಂಬೆ ಹಣ್ಣು

ಆಯುರ್ವೇದದಲ್ಲಿ ನಿಂಬೆಗೆ  ವಿಶೇಷ ಪ್ರಾಮುಖ್ಯತೆ ಇದೆ.  ನಿಂಬೆ ಹಣ್ಣಿನಲ್ಲಿ  ಆಂಟಿ ಬ್ಯಾಕ್ಟಿರಿಯಲ್ ಮತ್ತು ಆಂಟಿ  ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದು ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ.

Written by - Ranjitha R K | Last Updated : Jul 9, 2021, 06:29 PM IST
  • ನಿಂಬೆ ಆಂಟಿ ಬ್ಯಾಕ್ಟಿರಿಯಲ್ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ.
  • ಇದು ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ.
  • ಹಾಸಿಗೆಯ ಬಳಿ ನಿಂಬೆ ಇಟ್ಟುಕೊಳ್ಳುವುದರಿಂದ ಸರಾಗವಾಗಿ ಉಸಿರಾಡಬಹುದು
 ಈ ಕಾರಣಗಳಿಗಾಗಿ ರಾತ್ರಿ ಮಲಗುವ ವೇಳೆ ಪಕ್ಕದಲ್ಲಿರಲಿ ನಿಂಬೆ ಹಣ್ಣು  title=
ಹಾಸಿಗೆಯ ಬಳಿ ನಿಂಬೆ ಇಟ್ಟುಕೊಳ್ಳುವುದರಿಂದ ಸರಾಗವಾಗಿ ಉಸಿರಾಡಬಹುದು (photo zee news)

ನವದೆಹಲಿ : ನಿದ್ದೆ ಮಾಡುವ ಮೊದಲು ಕೆಲವರಿಗೆ ಹಾಸಿಗೆ ಸಮೀಪದಲ್ಲಿ  ನಿಂಬೆ ಹಣ್ಣು ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಇದನ್ನು  ನೋಡುವಾಗ ತಮಾಷೆ ಎಂದು ಕಾಣಬಹುದು. ಆದರೆ ಈ ರೀತಿ ಮಾಡುವುದರಿಂದ ಅದ್ಭುತ ಪ್ರಯೋಜನಗಳು ಸಿಗುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು (Benefis of lemon) ಇದು ನಿವಾರಣೆ ಮಾಡುತ್ತದೆ. ನಿಂಬೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ, ಇದು ಸಂಧಿವಾತ, ಅಧಿಕ ರಕ್ತದೊತ್ತಡ, ಅಧಿಕ ರಕ್ತದೊತ್ತಡ ಮತ್ತು ಹೃದಯ ವೈಫಲ್ಯದ ಅಪಾಯದಿಂದ ದೇಹವನ್ನು ರಕ್ಷಿಸುತ್ತದೆ.

ಆರೋಗ್ಯ ತಜ್ಞರು ಏನು ಹೇಳುತ್ತಾರೆ? :
ಪ್ರಸಿದ್ಧ ಆಯುರ್ವೇದ ತಜ್ಞ ಅಬ್ರಾರ್ ಮುಲ್ತಾನಿ ಅವರ ಪ್ರಕಾರ, ಆಯುರ್ವೇದದಲ್ಲಿ ನಿಂಬೆಗೆ  ವಿಶೇಷ ಪ್ರಾಮುಖ್ಯತೆ ಇದೆ.  ನಿಂಬೆ ಹಣ್ಣಿನಲ್ಲಿ (Lemon) ಆಂಟಿ ಬ್ಯಾಕ್ಟಿರಿಯಲ್ ಮತ್ತು ಆಂಟಿ  ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದು ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ. ನೀವು ಅಸ್ತಮಾ ಅಥವಾ ಶೀತದಿಂದ (Cold) ಬಳಲುತ್ತಿದ್ದು, ಉಸಿರಾಡಲು ಸಮಸ್ಯೆಯಾಗುತ್ತಿದ್ದರೆ, ಹಾಸಿಗೆಯ ಬಳಿ ನಿಂಬೆ ಹಣ್ಣು ಇಟ್ಟುಕೊಳ್ಳುವುದರಿಂದ ಸರಾಗವಾಗಿ ಉಸಿರಾಡಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : Dangerous Combination With Papaya : ಪಪ್ಪಾಯ ಜೊತೆ ಈ ವಸ್ತುಗಳನ್ನು ತಿನ್ನುವ ತಪ್ಪು ಮಾಡಬೇಡಿ

ದಿಂಬಿನ ಬಳಿ ನಿಂಬೆ ಹಣ್ಣು ಇಡುವುದರಿಂದ ಆಗುವ ಪ್ರಯೋಜನಗಳು:
1. ಉಸಿರಾಟದ ತೊಂದರೆ ಎದುರಾಗುವುದಿಲ್ಲ :
ನಿದ್ದೆ ಮಾಡುವಾಗ ಮೂಗು ಕಟ್ಟಿದರೆ , ಉಸಿರಾಡಲು ಸಮಸ್ಯೆಯಾಗಿ, ಸರಿಯಾಗಿ ನಿದ್ದೆ ಬರುವುದಿಲ್ಲ. ಹೀಗಾದಾಗ ನಿಂಬೆಯನ್ನು ತುಂಡು ಮಾಡಿ, ದಿಂಬಿನ ಬಳಿ ಇರಿಸಿದರೆ ಉಸಿರಾಟದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಿದ್ರೆಯು ಚೆನ್ನಾಗಿ ಬರುತ್ತದೆ.  

2. ರಕ್ತದೊತ್ತಡ ರೋಗಿಗಳಿಗೆ ಪ್ರಯೋಜನಕಾರಿ :
 ಕಡಿಮೆ ರಕ್ತದೊತ್ತಡದ (Blood pressure) ರೋಗಿಗಳು ರಾತ್ರಿಯಲ್ಲಿ ಮಲಗುವಾಗ ನಿಂಬೆ ತುಂಡನ್ನು ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಂಡರೆ, ಅವರು ಬೆಳಿಗ್ಗೆ ತಾಜಾತನವನ್ನು ಅನುಭವಿಸುತ್ತಾರೆ. ಯಾಕೆಂದರೆ ನಿಂಬೆಯ ಸುಗಂಧವು ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಕಡಿಮೆ ರಕ್ತದೊತ್ತಡದ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

3. ನಿಂಬೆ ಮನಸ್ಸನ್ನು ಶಾಂತವಾಗಿರಿಸುತ್ತದೆ:
ಹೆಚ್ಚು ದಣಿದಿದ್ದರೆ ಸಾ ಮಾನ್ಯವಾಗಿಯೇ ಒತ್ತಡ ಹೆಚ್ಚಾಗಿರುತ್ತದೆ. ಆ ವೇಳೆಯಲ್ಲಿ ನಿದ್ದೆ ಕೂಡ ಸರಿಯಾಗಿ ಹತ್ತುವುದಿಲ್ಲ. ಆಗ ರಾತ್ರಿಯಲ್ಲಿ ಮಲಗುವ ಮೊದಲು, ನಿಂಬೆಯನ್ನು ಕತ್ತರಿಸಿ ಹಾಸಿಗೆಯ ಬಳಿ (benefits of keeping lemon under bed) ಇರಿಸಿ. ನಿಂಬೆಯಲ್ಲಿರುವ ಆಂಟಿ ಬ್ಯಾಕ್ಟಿರಿಯಲ್ ಅಂಶಗಳು ಮನಸ್ಸನ್ನು ಶಾಂತವಾಗಿರಿಸುತ್ತವೆ. 

ಇದನ್ನೂ ಓದಿ : ಇಷ್ಟು ಗಂಟೆಗಳ ನಂತರ Fridge ನಲ್ಲಿಟ್ಟ ಆಹಾರ ತಿನ್ನಲೇ ಬಾರದು

4. ಸೊಳ್ಳೆ-ನೊಣಗಳ ಕಾಟದಿಂದ ಪರಿಹಾರ :
ಕೆಲವೊಮ್ಮೆ ಸೊಳ್ಳೆಗಳು (Mosquito) ಮತ್ತು ನೊಣಗಳ ಕಾಟದಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಮನೆಯಲ್ಲಿ ಸೊಳ್ಳೆಗಳು, ನೊಣಗಳು ಅಥವಾ ಇನ್ನಾವುದೇ ಕೀಟಗಳಿಂದಲೂ ತೊಂದರೆಗೀಡಾಗಿದ್ದರೆ, ಮಲಗುವ ಮುನ್ನ ನಾಲ್ಕು ಮೂಲೆಗಳನ್ನು ಒಳಗೊಂಡಂತೆ ಒಂದು ನಿಂಬೆ ತುಂಡನ್ನು ಹಾಸಿಗೆಯ ಬಳಿ ಇರಿಸಿ. ಅದರ ಸುವಾಸನೆಯಿಂದ ಸೊಳ್ಳೆಗಳು ಮತ್ತು ನೊಣಗಳು ಮಾತ್ರವಲ್ಲ, ಕೀಟಗಳು ಸಹ ಹತ್ತಿರ ಸುಳಿಯುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News