ನವದೆಹಲಿ: ಅಧಿಕ ಕೊಲೆಸ್ಟ್ರಾಲ್ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಇದು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು 200 mg/dL ಗಿಂತ ಹೆಚ್ಚಿದ್ದರೆ, ಅದನ್ನು ಅಧಿಕ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಇದನ್ನು LDL ಕೊಲೆಸ್ಟ್ರಾಲ್ ಎಂದೂ ಕರೆಯುತ್ತಾರೆ. ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಸ್ಟ್ಯಾಟಿನ್ ಅಧಿಕ ಕೊಲೆಸ್ಟ್ರಾಲ್‍ಗೆ ಅತ್ಯುತ್ತಮ ಔಷಧವೆಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು.
ಹೃದ್ರೋಗ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ ಮಾಡಲು ಹೆಚ್ಚಿನ ಕೊಲೆಸ್ಟ್ರಾಲ್ ಪರಿಸ್ಥಿತಿ ಹೊಂದಿರುವ ಜನರಿಗೆ ವೈದ್ಯರು ಈ ಔಷಧಿಗಳನ್ನು ಶಿಫಾರಸು ಮಾಡುತ್ತಾರೆ. ಇದಲ್ಲದೆ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಉತ್ತಮ ಜೀವನಶೈಲಿ ಇದ್ದರೂ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುವುದಿಲ್ಲ. 6 ಅಭ್ಯಾಸಗಳು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವಂತೆ ಮಾಡುತ್ತವೆ. ಇದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಇದನ್ನೂ ಓದಿ: ಮಾರುಕಟ್ಟೆಗೆ ಕಾಲಿಟ್ಟಿದೆ 'ನಕಲಿ ಆಲೂಗಡ್ಡೆ' ! ನೀವು ತರುತ್ತಿರುವ ಆಲೂಗಡ್ದೆಯನ್ನೊಮ್ಮೆ ಚೆಕ್ ಮಾಡಿಕೊಳ್ಳಿ
1. ನಿಮ್ಮ ಕೊಲೆಸ್ಟ್ರಾಲ್ ನಿರ್ವಹಣಾ ಯೋಜನೆ ಆರೋಗ್ಯಕರವಾಗಿಲ್ಲ
ಶೂನ್ಯ ಕೊಬ್ಬು ಮತ್ತು ಸಾವಯವ ತರಕಾರಿಗಳೊಂದಿಗೆ ನೀವು ಕೊಲೆಸ್ಟ್ರಾಲ್ ವಿರುದ್ಧ ಹೋರಾಡಬಹುದು ಎಂದು ಊಹಿಸುತ್ತಿರಬೇಕು. ವಾಸ್ತವವಾಗಿ ಕೊಲೆಸ್ಟ್ರಾಲ್ ನಿರ್ವಹಣೆಯು ಸಂಪೂರ್ಣ ಯೋಜನೆಯಾಗಿದೆ. ನೀವು ಆಹಾರದ ಬಗ್ಗೆ ಕಾಳಜಿ ವಹಿಸಬೇಕು, ಜೊತೆಗೆ ದೇಹವನ್ನು ಸಕ್ರಿಯವಾಗಿರಿಸಿಕೊಳ್ಳಬೇಕು ಮತ್ತು ನೀವು ಔಷಧಿಗಳೊಂದಿಗೆ ಜಾಗರೂಕರಾಗಿರಬೇಕು.
2. ನೀವು ದೈಹಿಕವಾಗಿ ಕ್ರಿಯಾಶೀಲರಾಗಿಲ್ಲ
ಕೊಲೆಸ್ಟ್ರಾಲ್ ನಿಯಂತ್ರಿಸಲು 30 ನಿಮಿಷಗಳ ನಡಿಗೆ ಸಾಕು ಎಂದು ನೀವು ಭಾವಿಸಬಹುದು. ಸತ್ಯವೆಂದರೆ ಪ್ರತಿಯೊಬ್ಬರೂ ದೈಹಿಕವಾಗಿ ಸಕ್ರಿಯವಾಗಿರಲು ವಿಭಿನ್ನ ಅಗತ್ಯವನ್ನು ಹೊಂದಿರುತ್ತಾರೆ. ನೀವು ಸರಿಯಾಗಿ ವ್ಯಾಯಾಮ ಮಾಡದಿದ್ದರೆ ಅನೇಕ ಮಾರಣಾಂತಿಕ ಕಾಯಿಲೆಗಳು ನಿಮ್ಮನ್ನು ಕಾಡುತ್ತವೆ.
3. ಆಲ್ಕೊಹಾಲ್ ಸೇವನೆ
ಆಲ್ಕೊಹಾಲ್ ಸೇವನೆಯು ಕೊಲೆಸ್ಟ್ರಾಲ್ ಮಟ್ಟದಲ್ಲಿ ನೇರ ಪರಿಣಾಮ ಬೀರುತ್ತದೆ. ನೀವು ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಮತ್ತು ಮದ್ಯಪಾನ ಮಾಡುತ್ತಿದ್ದರೆ, ಔಷಧಿಗಳು ನಿಮಗೆ ಸಹಾಯ ಮಾಡುವುದಿಲ್ಲ.
4. ಔಷಧಿಗಳು ಮಾತ್ರ ನಿಮಗೆ ಸಹಾಯ ಮಾಡಲ್ಲ
ಕೊಲೆಸ್ಟ್ರಾಲ್ ನಿರ್ವಹಣೆಯು ನೀವು ಯೋಚಿಸುವುದಕ್ಕಿಂತ ದೊಡ್ಡ ಯೋಜನೆಯಾಗಿದೆ. ಇದಕ್ಕಾಗಿ ವ್ಯಕ್ತಿಯು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು, ವ್ಯಾಯಾಮ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ನಿಮ್ಮ ಆಹಾರ ಮತ್ತು ಇತರ ಅಂಶಗಳು ಒಂದೇ ಆಗಿದ್ದರೆ, ಕೇವಲ ಔಷಧಿಗಳ ಮೇಲೆ ಅವಲಂಬಿತವಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ನಿಮಗೆ ಸಹಾಯ ಮಾಡುವುದಿಲ್ಲ.
5. ಹೆಚ್ಚು ಒತ್ತಡ
ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ನಮಗೆಲ್ಲರಿಗೂ ತಿಳಿದಿದೆ. ಅಧಿಕ ಕೊಲೆಸ್ಟ್ರಾಲ್‌ನಿಂದ ನೀವು ತಕ್ಷಣವೇ ಅಪಾಯಕ್ಕೆ ಒಳಗಾಗುವುದಿಲ್ಲ. ಹೀಗಾಗಿ ಹೆಚ್ಚು ಒತ್ತಡಕ್ಕೊಳಗಾಗದೆ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ ಮತ್ತು ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಿ. ಕೇವಲ ಕೊಲೆಸ್ಟ್ರಾಲ್‌ಗಿಂತ ಒಟ್ಟಾರೆ ಉತ್ತಮ ಆರೋಗ್ಯದ ಮೇಲೆ ಕೇಂದ್ರೀಕರಿಸಿ.
6. ಔಷಧದ ಸರಿಯಾದ ಡೋಸೇಜ್
ಕೆಲವು ಜನರು ಸ್ಟ್ಯಾಟಿನ್‍ಗಳ ಸರಿಯಾದ ಡೋಸೇಜ್ ತೆಗೆದುಕೊಳ್ಳುವುದಿಲ್ಲ. ಯಾರೇ ಆಗಲಿ ನಿಯಮಿತವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಬೇಕು ಮತ್ತು ವರದಿಯೊಂದಿಗೆ ವೈದ್ಯರನ್ನು ಸಂಪರ್ಕಿಸಬೇಕು. ಕೊಲೆಸ್ಟ್ರಾಲ್ ಮಟ್ಟಕ್ಕೆ ಅನುಗುಣವಾಗಿ ವೈದ್ಯರು ನಿರ್ದಿಷ್ಟ ಸಮಯದ ನಂತರ ಸ್ಟ್ಯಾಟಿನ್ ಪ್ರಮಾಣವನ್ನು ಬದಲಾಯಿಸಬಹುದು.
ಇದನ್ನೂ ಓದಿ: Rice water: ಅನ್ನದ ಗಂಜಿಯ ಆರೋಗ್ಯ ಗುಟ್ಟು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತೆ!
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.