Covid-19 ನಿಂದ ರಕ್ಷಣೆ ಪಡೆಯಲು ಡಬಲ್ ಮಾಸ್ಕ್ ಅನಿವಾರ್ಯವೇ? ಇಲ್ಲಿದೆ ಇದರ ಹಿಂದ ವಾಸ್ತವಿಕತೆ

How Important Wear Double Mask? - ಪ್ರಸ್ತುತ ದೇಶಾದ್ಯಂತ ಕೊರೊನಾ ವೈರಸ್ ತನ್ನ ರೌದ್ರನರ್ತನ ಮುಂದುವರೆಸಿದೆ. ಹೀಗಿರುವಾಗ ತಜ್ಞರು ಡಬಲ್ ಮಾಸ್ಕ್ ಧರಿಸುವ ಸಲಹೆ ನೀಡುತ್ತಿದ್ದಾರೆ. ಕೊರೊನಾ ಸೋಂಕನ್ನು ತಡೆಗಟ್ಟುವುದು ಇದರ ಹಿಂದಿನ ಉದ್ದೇಶ. ಇತ್ತೀಚೆಗಷ್ಟೇ ಈ ಕುರಿತು ಅಧ್ಯಯನವೊಂದನ್ನು ನಡೆಸಲಾಗಿದೆ.

Written by - Nitin Tabib | Last Updated : May 9, 2021, 09:05 PM IST
  • ಕೊರೊನಾ ವೈರಸ್ ನಿಂದ ರಕ್ಷಣೆ ಪಡೆಯಲು ಡಬಲ್ ಮಾಸ್ಕ್ ಎಷ್ಟು ಅವಶ್ಯಕ
  • ತಜ್ಞರು ಡಬಲ್ ಮಾಸ್ಕ್ ಧರಿಸುವ ಕುರಿತು ಹೇಳುವುದೇನು?
  • ಡಬಲ್ ಮಾಸ್ಕ್ ಧರಿಸಿದರೂ ಕೂಡ ಅದನ್ನು ಹೇಗೆ ಧರಿಸಬೇಕು?
Covid-19 ನಿಂದ ರಕ್ಷಣೆ ಪಡೆಯಲು ಡಬಲ್ ಮಾಸ್ಕ್ ಅನಿವಾರ್ಯವೇ? ಇಲ್ಲಿದೆ ಇದರ ಹಿಂದ ವಾಸ್ತವಿಕತೆ  title=
How Important Wear Double Mask (File Photo)

ನವದೆಹಲಿ: How Important Wear Double Mask - ಪ್ರಸ್ತುತ ದೇಶದಲ್ಲಿ ಕರೋನಾ (Coronavirus) ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಪ್ರತಿದಿನ 4 ಲಕ್ಷ ಕರೋನಾ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಜನರನ್ನು ತೊಂದರೆಗೆ ಸಿಲುಕಿಸಿದೆ. ಕರೋನಾ ಸೋಂಕನ್ನು ತಡೆಗಟ್ಟಲು, ಅನೇಕ ರಾಜ್ಯಗಳು ತಮ್ಮನ್ನು ತಾವು ಲಾಕ್ ಡೌನ್ ಮಾಡುವುದಾಗಿ ಘೋಷಿಸಿವೆ. ಈ ಸೋಂಕನ್ನು (Covid-19) ನಿಯಂತ್ರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ. ಇದೇ ವೇಳೆ ಡಬಲ್ ಮಾಸ್ಕ್ ಬಗ್ಗೆ ಅನೇಕ ಪೋಸ್ಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಹೀಗಿರುವಾಗ ಈ ಡಬಲ್ ಮಾಸ್ಕ್ ಹಿಂದಿನ ವಾಸ್ತವಿಕತೆ ಏನು ತಿಳಿದುಕೊಳ್ಳೋಣ ಬನ್ನಿ.

ಅಮೇರಿಕಾದಲ್ಲಿ ನಡೆದ ಅಧ್ಯಯನ
ಕೆಲ ದಿನಗಳ ಹಿಂದೆಯಷ್ಟೇ ಅಮೆರಿಕಾದಲ್ಲಿ ಈ ಕುರಿತು ಅಧ್ಯಯನವೊಂದನ್ನು ನಡೆಸಲಾಗಿದೆ. ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಅಂಡ್ ಪ್ರಿವೆಂಶನ್ (CDC) ಈ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ ಡಬಲ್ ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಸ್ ನ ಸೋಂಕನ್ನು ಶೇ.95 ರಷ್ಟು ತಡೆಗಟ್ಟಬಹುದು ಎಂದು ಹೇಳಲಾಗಿದೆ. ಒಂದು ವೇಳೆ ಎಲ್ಲರೂ ಡಬಲ್ ಮಾಸ್ಕ್ ಧರಿಸಿದರೆ ಸ್ಥಿತಿ ಇನ್ನಷ್ಟು ಸುಧಾರಿಸಲಿದೆ. ಈ ಅಧ್ಯಯನದ ಆಧಾರದ ಮೇಲೆ ತಜ್ಞರು ಜನರಿಗೆ ಡಬಲ್ ಮಾಸ್ಕ್ ಧರಿಸಲು ಮನವಿ ಕೂಡ ಮಾಡಿದ್ದರು. 

ಡಬಲ್ ಮಾಸ್ಕ್ ಹೇಗೆ ಧರಿಸಬೇಕು?
ಡಬಲ್ ಮಾಸ್ಕ್ (Double Mask) ಧರಿಸುವುದು ಹೇಗೆ ಎಂಬ ಕನ್ಫ್ಯೂಷನ್ ಹಲವು ಜನರಿಗೆ ಕಾಡುತ್ತದೆ. ಹಾಗಾದರೆ, ಬನ್ನಿ ಇದನ್ನು ಹೇಗೆ ಧರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ-ನಿಮ್ಮ ಕೈಯಲ್ಲೇ ಇದೆ ನಿಮ್ಮ ಆರೋಗ್ಯ ರಹಸ್ಯ, ಕೈ ಸ್ವಚ್ಛವಾಗಿಡಿ.

>> ಒಂದು ವೇಳೆ ನಿಮ್ಮ ಬಳಿ ಎರಡು ಸರ್ಜಿಕಲ್ ಮಾಸ್ಕ್ (Surgical Mask) ಇದ್ದರೆ, ಆ ಮಾಸ್ಕ್ ಗಳಿಂದ ನಿಮ್ಮ ಮೂಗು ಮತ್ತು ಬಾಯಿ ಕವರ್ ಆಗುವ ರೀತಿ ಅವುಗಳನ್ನು ಧರಿಸಿ. ಆದರೆ, ಎರಡು ಸರ್ಜಿಕಲ್ ಮಾಸ್ಕ್ ಧರಿಸುವ ಸಲಹೆಯನ್ನು ಸಾಮಾನ್ಯವಾಗಿ ನೀಡಲಾಗುವುದಿಲ್ಲ
>> ಒಂದು ವೇಳೆ ನಿಮ್ಮ ಬಳಿ ಒಂದು ಬಟ್ಟೆಯ ಮಾಸ್ಕ್ (Cloath Mask) ಹಾಗೂ ಒಂದು ಸರ್ಜಿಕಲ್ ಮಾಸ್ಕ್ ಇದ್ದರೆ, ಮೊದಲು ನೀವು ಸರ್ಜಿಕಲ್ ಮಾಸ್ಕ್ ಧರಿಸಿ ಮತ್ತು ಅದರ ಮೇಲೆ ಬಟ್ಟೆಯ ಮಾಸ್ಕ್ ಧರಿಸಿ.
>> ಒಂದು ವೇಳೆ ನೀವು N-95 ಮಾಸ್ಕ್ ಇದ್ದರೆ, ನೀವು ಡಬಲ್ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ.

ಇದನ್ನೂ ಓದಿ- Central Government : ಗ್ರಾಮೀಣ ಸಂಸ್ಥೆಗಳಿಗೆ '₹ 8,923 ಕೋಟಿ' ಆರ್ಥಿಕ ನೆರವು ಘೋಷಿಸಿದ ಕೇಂದ್ರ ಸರ್ಕಾರ!

ಈ ಸಂಗತಿಗಳನ್ನು ನೆನಪಿನಲ್ಲಿಡಿ
ನೀವೂ ಸರ್ಜಿಕಲ್ ಮಾಸ್ಕ್ ಅನ್ನು ಕೇವಲ ಒಂದು ಬಾರಿಗೆ ಮಾತ್ರ ಧರಿಸಬಹುದಾಗಿದೆ. ಬಳಕೆಯ ಬಳಿಕ ಅದನ್ನು ಸರಿಯಾಗಿ ಡಿಸ್ಪೋಸ್ ಮಾಡಿ. ಬಟ್ಟೆಯ ಮಾಸ್ಕ್ ಅನ್ನು ನೀವು ನಿತ್ಯ ಬಿಸಿನೀರಿನಲ್ಲಿ ತೊಳೆಯಬಹುದು. ಮಾಸ್ಕ್ ತೆಗೆಯುವಾಗ ಮಾತನಾಡುವುದನ್ನು ನಿಲ್ಲಿಸಿ. ಮಾಸ್ಕ್ ತೆಗೆದ ಬಳಿಕ ಕೈಗಳನ್ನು ಸ್ಯಾನಿಟೈಸ್ ಮಾಡಲು ಮರೆಯದಿರಿ.

ಇದನ್ನೂ ಓದಿ- Good News: Corona ಚಿಕಿತ್ಸೆಗಾಗಿ DRDO ಔಷಧಿ 2-DG ತುರ್ತು ಬಳಕೆಗೆ DGCI ಅನುಮತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News