ನವದೆಹಲಿ : ಹೆಚ್ಚಿನ ಜನರು ತಮ್ಮ ದಿನವನ್ನು ಒಂದು ಕಪ್ ಚಹಾದೊಂದಿಗೆ ಪ್ರಾರಂಭಿಸುತ್ತಾರೆ, ಆದರೆ ಕೆಲವೊಮ್ಮೆ ನಿಮ್ಮ ನೆಚ್ಚಿನ ಚಹಾವು ಕಲಬೆರಕೆಯಾಗಬಹುದು ಎಂದರೆ ನಂಬುತ್ತೀರಾ?. ಹೌದು ನಂಬಲೇಬೇಕು. ಬಣ್ಣ ಪದಾರ್ಥಗಳು ಮತ್ತು ಹಾಳಾದ ಟೀ ಪುಡಿ ಚಹಾದಲ್ಲಿ ಕಲಬೆರಕೆ ಮಾಡಲಾಗುತ್ತದೆ. ಇದು ನಿಮ್ಮ ಬಾಯಿಯ ರುಚಿಯನ್ನು ಹಾಳುಮಾಡುವುದಲ್ಲದೆ, ಇಂತಹ ಚಹಾವನ್ನು ಪ್ರತಿದಿನ ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವೂ ಚಹಾವನ್ನು ಕುಡಿಯಲು ಬಯಸಿದರೆ, ನಿಮ್ಮ ಚಹಾ ಪುಡಿ ಶುದ್ಧವಾಗಿದೆಯೇ ಅಥವಾ ಅದರಲ್ಲಿ ಕಲಬೆರಕೆ ಮಾಡಲಾಗಿದೆಯೇ ಎಂದು ತಿಳಿಯುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
ಕಲಬೆರಕೆ ಚಹಾ ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ
ಕೆಟ್ಟ ಚಹಾ ಪುಡಿ(Tea Powder) ಮತ್ತು ಬಣ್ಣ ಪದಾರ್ಥಗಳು ಚಹಾದ ಪುಡಿಯಲ್ಲಿ ಕಲಬೆರಕೆ ಮಾಡಲಾಗುತ್ತದೆ. ಈ ಪುಡಿಯನ್ನ ಒಮ್ಮೆ ಬಳಸಿದ ನಂತರ, ಮತ್ತೊಮ್ಮೆ ಬಳಸಲಾಗುತ್ತದೆ. ಸಂಸ್ಕರಿಸಿದ ಮತ್ತು ಬಣ್ಣದ ಚಹಾದ ಕಲಬೆರಕೆಯನ್ನು ಸಹ ಚಹಾ ಪುಡಿಯಲ್ಲಿ ಮಾಡಲಾಗುತ್ತದೆ. ಇದು ಲಿವರ್ ಡಿಸಾರ್ಡರ್ಸ್ ಮತ್ತು ಇತರ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ : Black Garlic Benefits : ನಿಮಗೆಷ್ಟು ಗೊತ್ತು 'ಕಪ್ಪು ಬೆಳ್ಳುಳ್ಳಿ' ಬಗ್ಗೆ? ಇದರ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ
ಅಸಲಿ ಮತ್ತು ನಕಲಿ ಚಹಾ ಗುರುತಿಸುವುದು ಹೇಗೆ?
ಚಹಾದಲ್ಲಿ ಹಾಳಾದ ಪುಡಿ ಕಲಬೆರಕೆ(Adulteration in Tea)ಯನ್ನು ನೀವು ಹೇಗೆ ಗುರುತಿಸಬಹುದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಟ್ವಿಟ್ಟರ್ ನಲ್ಲಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.
Detecting Exhausted Tea Leaves Adulteration in Tea Leaves#DetectingFoodAdulterants_11#AzadiKaAmritMahotsav@jagograhakjago @mygovindia @MIB_India @PIB_India @MoHFW_INDIA pic.twitter.com/BqCcT9X8SO
— FSSAI (@fssaiindia) October 21, 2021
- ಮೊದಲು ಫಿಲ್ಟರ್ ಪೇಪರ್ ತೆಗೆದುಕೊಳ್ಳಿ.
- ಈಗ ಚಹಾ ಪುಡಿಯನ್ನ ಫಿಲ್ಟರ್ ಪೇಪರ್ ಮೇಲೆ ಹರಡಿಟ್ಟುಕೊಳ್ಳಿ.
- ಫಿಲ್ಟರ್ ಪೇಪರ್(Filter Paper) ಒದ್ದೆಯಾಗುವಂತೆ ಸ್ವಲ್ಪ ನೀರು ಚಿಮುಕಿಸಿ.
- ಈಗ ಫಿಲ್ಟರ್ ಪೇಪರ್ ಅನ್ನು ಟ್ಯಾಪ್ ನೀರಿನಲ್ಲಿ ತೊಳೆಯಿರಿ. ಚಹಾ ಪುಡಿಯನ್ನ ತೆಗೆದುಹಾಕಲಾಗುತ್ತದೆ ಮತ್ತು ಚಹಾವು ಕಲಬೆರಕೆಯಾಗಿದ್ದರೆ ಫಿಲ್ಟರ್ ಪೇಪರ್ನಲ್ಲಿ ನೀವು ಕಲೆಗಳನ್ನು ಕಾಣಬಹುದು.
ಕೆಟ್ಟ ಚಹಾ ಪುಡಿಯಿಂದ ಫಿಲ್ಟರ್ ಪೇಪರ್ನ ಬಣ್ಣವು ಕಂದು ಬಣ್ಣದಿಂದ ಕಪ್ಪು ಬಣ್ಣಕ್ಕೆ(Block Colors) ಕೂಡ ತಿರುಗಬಹುದು.
ಚಹಾ ಪುಡಿ ಶುದ್ಧವಾಗಿದ್ದರೆ, ಫಿಲ್ಟರ್ ಪೇಪರ್ ಮೇಲೆ ಯಾವುದೇ ಕಲೆ ಕಾಣಿಸುವುದಿಲ್ಲ.
ಇದನ್ನೂ ಓದಿ : ಗ್ರೀನ್ ಟೀ ಕುಡಿಯುವ ಅಭ್ಯಾಸ ನಿಮಗೂ ಇದೆಯೇ ? ಹಾಗಿದ್ದರೆ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು
ಚಹಾ ಕುಡಿಯುವ ಪ್ರಯೋಜನಗಳು
ಅನೇಕ ಅಧ್ಯಯನಗಳ ಪ್ರಕಾರ, ಒಂದು ನಿರ್ದಿಷ್ಟ ಪ್ರಮಾಣದ ಚಹಾವನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯ(Health)ಕ್ಕೆ ಪ್ರಯೋಜನವಾಗುತ್ತದೆ. ಚಹಾದಲ್ಲಿ ಫ್ಲೇವೊನೈಡ್ಗಳು ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಇದ್ದು, ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಚಹಾ ಕುಡಿಯುವುದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ರಕ್ತನಾಳಗಳ ಕಾರ್ಯಚಟುವಟಿಕೆಯನ್ನು ಸುಧಾರಿಸಲು ಸಹಕಾರಿಯಾಗಿದೆ, ಆದರೆ ನಿಮ್ಮ ಚಹಾದ ಪುಡಿಯಲ್ಲಿ ಕಲಬೆರಕೆ ಇದ್ದರೆ ನಿಮಗೆ ಈ ಪ್ರಯೋಜನಗಳು ಸಿಗುವುದಿಲ್ಲ, ಆದ್ದರಿಂದ ನೀವು ಚಹಾದಲ್ಲಿನ ಕಲಬೆರಕೆಯನ್ನು ಪರೀಕ್ಷಿಸುವುದು ಮುಖ್ಯವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ