ಆರೋಗ್ಯಯುತವಾಗಿ ದೇಹದ ತೂಕ ಇಳಿಸಬೇಕೆ? ಇಲ್ಲಿದೆ ಪರಿಹಾರ...

ಸಾಮಾನ್ಯ ಕಾಫಿಯನ್ನು ಪ್ರತಿನಿತ್ಯ ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮ ಉಂಟಾಗಬಹುದು. ಆದರೆ, ಗ್ರೀನ್ ಕಾಫಿ ಕುಡಿಯುವುದರಿದ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ.

Last Updated : Nov 9, 2018, 04:57 PM IST
ಆರೋಗ್ಯಯುತವಾಗಿ ದೇಹದ ತೂಕ ಇಳಿಸಬೇಕೆ? ಇಲ್ಲಿದೆ ಪರಿಹಾರ... title=

ನವದೆಹಲಿ: ನೀವು ದಪ್ಪಗಿದ್ದೀರಾ? ಆರೋಗ್ಯಯುತವಾಗಿ ತೂಕ ಇಳಿಸುವುದು ಹೇಗೆ ಎಂಬುದರ ಬಗ್ಗೆ ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಪ್ರತಿನಿತ್ಯ ಒಂದು ಕಪ್ ಗ್ರೀನ್ ಕಾಫಿ ಸೇವಿಸಿ... ನೆನಪಿರಲಿ, ಇದು ಗ್ರೀನ್ ಟೀ ಅಲ್ಲ, ಗ್ರೀನ್ ಕಾಫಿ! 

ಸ್ಥೂಲಕಾಯತೆ ಎಂಬುದು ಇಂದು ಪ್ರತಿಯೊಬ್ಬರನ್ನೂ ಕಾಡುತ್ತಿರುವ ಸಮಸ್ಯೆ. ಈ ಒಂದು ಸಮಸ್ಯೆಯಿಂದ ದೇಹದಲ್ಲಿ ಅನೇಕ ರೋಗಗಳು ಉಲ್ಬಣಿಸುತ್ತವೆ. ಇದು ಮನುಷ್ಯನ ದೈಹಿಕ ಆರೋಗ್ಯವನ್ನಷ್ಟೇ ಅಲ್ಲದೆ, ಮಾನಸಿಕ ಆರೋಗ್ಯವನ್ನೂ ಹಾಳು ಮಾಡುತ್ತದೆ. ಹೀಗಾಗಿ ಅತಿ ವೇಗವಾಗಿ ದೇಹದ ತೂಕ ಇಳಿಸಲು   ಜನರು ಜಿಮ್ ಗೆ ಹೋಗುವುದು, ದುಬಾರಿ ಮಾತ್ರೆಗಳನ್ನು ಸೇವಿಸುವುದು, ಡಯಟ್ ಮಾಡುವುದು ಹೀಗೆ ಮನಸ್ಸಿಗೆ ತೋಚಿದಂತೆ ಅವೈಜ್ಞಾನಿಕವಾಗಿ, ಅನೈಸರ್ಗಿಕವಾಗಿ ತೂಕ ಇಳಿಸುವ ಮಾರ್ಗಗಳ ಮೊರೆ ಹೋಗುತ್ತಾರೆ. ಆದರೆ ಇವುಗಳಿಂದ ಅಡ್ಡಪರಿಣಾಮಗಳೇ ಜಾಸ್ತಿ. ಹಾಗಾಗಿ ಪ್ರತಿನಿತ್ಯ ಗ್ರೀನ್ ಕಾಫಿ ಕುಡಿಯಲು ಆರಂಭಿಸಿ, ತೂಕ ಕಡಿಮೆಮಾಡಿಕೋಳ್ಳಿ...

ಗ್ರೀನ್ ಕಾಫಿಯಲ್ಲಿದೆ ಅತಿ ಹೆಚ್ಚು ಪೌಷ್ಟಿಕಾಂಶ
ಗ್ರೀನ್ ಕಾಫಿಯಲ್ಲಿ ಅತಿಹೆಚ್ಚು ವಿಟಮಿನ್ ಮತ್ತು ಖನಿಜಾಂಶಗಳಿದ್ದು, ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಹಾಗೆಯೇ ದೇಹದ ತೂಕ ಹೆಚ್ಚುವುದನ್ನೂ ನಿಯಂತ್ರಣಗೊಳಿಸುತ್ತದೆ. 

ಮಧುಮೇಹ ನಿಯಂತ್ರಿಸಲೂ ಗ್ರೀನ್ ಕಾಫಿ ಸಹಕಾರಿ
ಮದುಮೇಹ ಅಥವಾ ಡಯಾಬಿಟಿಸ್ ನಿಂದ ಬಳಲುತ್ತಿರುವವರು, ಡಯಾಬಿಟಿಸ್ ನಿಯಂತ್ರಣಕ್ಕೆ ಮಾತ್ರೆಗಳನ್ನು ಸೇವಿಸುವ ಬದಲು ಗ್ರೀನ್ ಕಾಫಿ ಸೇವಿಸಿ. ಇದು ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿ ಇರಿಸುವುದಲ್ಲದೆ ರಕ್ತದೊತ್ತಡವನ್ನೂ ಸಮತೋಲನದಲ್ಲಿರಿಸುತ್ತದೆ.

ಗ್ರೀನ್ ಕಾಫಿಯಲ್ಲಿ ಅತಿಹೆಚ್ಚು ಪೌಷ್ಟಿಕಾಂಶ, ಖನಿಜಾಂಶ ಮತ್ತು ಆಂಟಿ ಆಕ್ಸಿಡೆಂಟ್ ಇರುವುದರಿಂದ ಎಲ್ಲ ರೀತಿಯ ಸೊಂಕುಗಳಿಂದ ದೇಹವನ್ನು ರಕ್ಷಿಸುತ್ತದೆ. ಸಾಮಾನ್ಯ ಕಾಫಿಯನ್ನು ಪ್ರತಿನಿತ್ಯ ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮ ಉಂಟಾಗಬಹುದು. ಆದರೆ, ಗ್ರೀನ್ ಕಾಫಿ ಕುಡಿಯುವುದರಿದ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ. ಏಕೆಂದರೆ ಕಾಫಿಯಲ್ಲಿರುವಂತೆ ಗ್ರೀನ್ ಕಾಫಿಯಲ್ಲಿ ಕೆಫ್ಹೀನ್ ಅಂಶ ಇಲ್ಲ. 

ಅಷ್ಟೇ ಅಲ್ಲದೆ, ಗ್ರೀನ್ ಕಾಫಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ಕೂಡ ನಿಯಂತ್ರಣದಲ್ಲಿರುತ್ತದೆ. ಜತೆಗೆ ರಕ್ತದಲ್ಲಿನ ಪ್ಲೇಟ್ ಲೇಟ್ ವೃದ್ಧಿಗೂ ಗ್ರೀನ್ ಕಾಫಿ ಸಹಕಾರಿ.
 

Trending News