Diabetes : ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ ಎಂಬ ಮಾತಿನಂತೆ ಸರಿಯಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಆದರೆ ಇತ್ತೀಚ್ಚಿನ ಆರೋಗ್ಯದ ವರದಿಯ ಪ್ರಕಾರ ಹೆಚ್ಚು ಜನರಲ್ಲಿ ಡಯಾಬಿಟಿಸ್ ಇರುವುದು ಪತ್ತೆಯಾಗಿದೆ. ಆದ್ದರಿಂದ ಅದನ್ನು ನಿಯಂತ್ರಣದಲ್ಲಿಡದಿದ್ದರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಭವಿಷ್ಯದಲ್ಲಿ ಎದುರಿಸಬೇಕಾಗುತ್ತದೆ. ಅದಕ್ಕಾಗಿ ಮಾತ್ರೆಯ ಜೊತೆಗೆ ಈ ರೀತಿಯ ಗಿಡ ಮೂಲಿಕೆಗಳನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು.
ಬೆಳಗಿನ ಜಾವ ಎದ್ದ ತಕ್ಷಣ ʼಅಮೃತ ಬಳ್ಳಿʼ ಎಲೆಯನ್ನು ಅಗಿದು ಸೇವಿಸಿದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ಮಾತ್ರೆ ತೆಗೆದುಕೊಳ್ಳುವವರು ಸಹ ಇದನ್ನು ಸೇವಿಸಬಹುದು.ಇದು ಆರೋಗ್ಯಕ್ಕೆ ಬಹಳ ಉಪಕಾರಿಯಾದ ಗಿಡ ಮೂಲಿಕೆಯಾಗಿದೆ. ಈ ಕಾಯಿಲೆಗೆ ಒಳಗಾದವರಿಗೆ ಹೆಚ್ಚು ಆಹಾರ ಸೇವಿಸುವಂತಿಲ್ಲ, ಸಕ್ಕರೆಯುತ ತಿಂಡಿ ತಿನಿಸುಗಳನ್ನು ತಿನ್ನುವಂತಿಲ್ಲ ಎಂದು ಹೇಳುತ್ತಾರೆ. ಹೌದು ಅವುಗಳನ್ನು ಪಾಲಿಸಲೇಬೇಕು ಅದು ಅನಿವಾರ್ಯ.
ಇದನ್ನೂ ಓದಿ-Easy Beauty tips : ಮುಖದ ಬ್ಯೂಟಿ ಕಣ್ಣಿನ ʼಡಾರ್ಕ್ ಸರ್ಕಲ್ʼನಿಂದ ಹಾಳಾಗುತ್ತಿದೆಯೇ..! ಹೀಗೆ ಮಾಡಿ
ಡಯಾಬಿಟಿಸ್ ರೋಗಿಗಳಿಗೆ ಹೆಚ್ಚಾಗಿ ಸುಸ್ತು, ಮತ್ತು ಮೂತ್ರಪಿಂಡ ಸಂಭಂದಿತ ತೊಂದರೆಗಳು ಉಂಟಾಗುವ ಸಂಭವಗಳಿರುತ್ತವೆ. ಆದ್ದರಿಂದ ಆದಷ್ಟು ವೈದ್ಯರು ನೀಡಿರುವ ಮಾತ್ರೆಗಳು ಹಾಗೂ ಸಲಹೆಗಳನ್ನು ಪಾಲಿಸಿ ಆರೋಗ್ಯವಾಗಿರಿ.
ಇದನ್ನೂ ಓದಿ-Summer skin health : ಬೇಸಿಗೆಯಲ್ಲೂ ನಿಮ್ಮ ಚರ್ಮ ಕಾಂತಿಯುತವಾಗಿರಬೇಕೆ..! ಈ ಫೇಶಿಯಲ್ಸ್ ಟ್ರೈ ಮಾಡಿ
Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.