ಸೂಪ್, ಜ್ಯೂಸ್ ಬದಲಿಗೆ ಒಂದೇ ಒಂದು ಕಪ್ ತಿಳಿ ಸಾರು ಕುಡಿಯಿರಿ.! ಬದಲಾವಣೆ ನೋಡಿ

ತಿಳಿಸಾರು ಹೊಟ್ಟೆಯಲ್ಲಿ ಸರಾಗವಾಗಿ ಕರಗುತ್ತದೆ. ಸಣ್ಣ ಮಕ್ಕಳಿಗೆ ಇದನ್ನು ಸಾಕಷ್ಟು ಕುಡಿಸಬಹುದು. ಇದರಿಂದ ಅಗತ್ಯ ಪೋಷಕಾಂಶಗಳು ಸುಲಭವಾಗಿ ಸಿಗುತ್ತವೆ. ಕುಡಿಯಲು ಕೂಡಾ ಟೇಸ್ಟ್ ಇರುವುದರಿಂದ ಮಕ್ಕಳು ಹೀಕರಿಸುವುದಿಲ್ಲ. 

Written by - Ranjitha R K | Last Updated : Apr 19, 2021, 09:02 AM IST
  • ತಿಳಿಸಾರು ಅಥವಾ ದಾಲ್ ಬೇಯಿಸಿದ ನೀರು ಆರೋಗ್ಯಕ್ಕೆ ತುಂಬಾ ಹಿತಕಾರಿ
  • ಇದರಲ್ಲಿ ಸಾಕಷ್ಟು ಪೌಷ್ಟಿಕಾಂಶಗಳೂ ಇರುತ್ತವೆ, ದೇಹಕ್ಕೂ ಕ್ಷೇಮ
  • ತಿಳಿಸಾರಿನ ಲಾಭ ಏನು, ಮಾಡೋದು ಹೇಗೆ ತಿಳಿಯಿರಿ
ಸೂಪ್, ಜ್ಯೂಸ್ ಬದಲಿಗೆ ಒಂದೇ ಒಂದು ಕಪ್ ತಿಳಿ ಸಾರು ಕುಡಿಯಿರಿ.! ಬದಲಾವಣೆ ನೋಡಿ title=
ತಿಳಿಸಾರು ಅಥವಾ ದಾಲ್ ಬೇಯಿಸಿದ ನೀರು ಆರೋಗ್ಯಕ್ಕೆ ತುಂಬಾ ಹಿತಕಾರಿ (file photo)

ನವದೆಹಲಿ : ಬೇಳೆ ಅಥವಾ ದಾಲ್ (Dal) ಆರೋಗ್ಯದ ವಿಚಾರದಲ್ಲಿ ಅತ್ಯಂತ ಲಾಭದಾಯಕವಾಗಿದೆ.  ನಮ್ಮ ಊಟ ತಿಂಡಿಯಲ್ಲಿ ಸಾಮಾನ್ಯವಾಗಿ ದಾಲ್ ಇರಲೇ ಬೇಕು.  ಭಾರತೀಯ ಆಹಾರ ಪದ್ದತಿಯಲ್ಲಿ ದಾಲ್ ಅಥವಾ ಬೇಳೆಗೆ  ವಿಶೇಷ ಮಹತ್ವವಿದೆ. ದಾಲ್ಅಷ್ಟೇ ಅಲ್ಲ, ದಾಲ್ ಮಾಡಿದ ನೀರು (Dal water)ಇದ್ಯಲ್ಲ, ಅಂದರೆ ತಿಳಿಸಾರು ಅದು ಕೂಡಾ ಅಷ್ಟೇ ಪೌಷ್ಟಿಕಾಂಶ ಹೊಂದಿರುತ್ತದೆ.  ಯಾರಿಗಾದರೂ ದಾಲ್ ತಿನ್ನುವುದು ಇಷ್ಟ ಇಲ್ಲದೇ ಹೋದರೆ, ಬೇಳೆ ಸಾರು ಅಥವಾ ತಿಳಿಸಾರನ್ನು ಘಮಘಮಿಸಿ ಕುಡಿಸಬಹುದು.. ಅಥವಾ ಸೂಪ್ ರೂಪದಲ್ಲಿ ಸೇವಿಸಬಹುದು.   ನಾಲಗೆಗೆ ಅದರ ರುಚಿಯೇ ಬೇರೆ..ದೇಹಕ್ಕೆ ಆಗುವ ಲಾಭಗಳೇ ವಿಶೇಷ. ತಿಳಿಸಾರಿನ ಆರೋಗ್ಯ ಲಾಭ ಏನೇನು ನೋಡೋಣ

1. ತಿಳಿಸಾರು ಸುಲಭವಾಗಿ ಜೀರ್ಣವಾಗುತ್ತದೆ:
ತಿಳಿಸಾರು ಹೊಟ್ಟೆಯಲ್ಲಿ ಸರಾಗವಾಗಿ ಕರಗುತ್ತದೆ. ಸಣ್ಣ ಮಕ್ಕಳಿಗೆ (Kids) ಇದನ್ನು ಸಾಕಷ್ಟು ಕುಡಿಸಬಹುದು. ಇದರಿಂದ ಅಗತ್ಯ ಪೋಷಕಾಂಶಗಳು ಸುಲಭವಾಗಿ ಸಿಗುತ್ತವೆ. ಕುಡಿಯಲು ಕೂಡಾ ಟೇಸ್ಟ್ ಇರುವುದರಿಂದ ಮಕ್ಕಳು ಹೀಕರಿಸುವುದಿಲ್ಲ. 

ಇದನ್ನೂ ಓದಿ : Clove Health Benefits - ನಿತ್ಯ ರಾತ್ರಿ ಮಲಗುವ ಮುನ್ನ ಬಿಸಿನೀರಿನಲ್ಲಿ ಎರಡು ಲವಂಗ ಸೇವಿಸಿ, ಸಿಗಲಿವೆ ಈ ಆರೋಗ್ಯಕರ ಲಾಭಗಳು

2. ಭರ್ಜರಿ ಫೈಬರ್ ಸಿಗುತ್ತದೆ:
ಬೇಳೆ ಸಾರು ಅಥವಾ ತಿಳಿಸಾರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್ (Fiber) ಕಂಡು ಬರುತ್ತದೆ. ಹಾಗಾಗಿ ಸುಲಭದಲ್ಲಿ ಜೀರ್ಣವಾಗುವುದರ ಜೊತೆಗೆ ಮಲಬದ್ದತೆ (Constipation), ಗ್ಯಾಸ್, ಆಸಿಡಿಟಿ ಮುಂತಾದ ಸಮಸ್ಯೆಗಳೂ ದೂರವಾಗುತ್ತದೆ. ಏನಾದರೂ ತಿಂದಾಕ್ಷಣ ವಾಂತಿಯಾಗುವ ಲಕ್ಷಣಗಳಿದ್ದರೆ ದಾಲ್ ನೀರು ಅಥವಾ ತಿಳಿಸಾರು ಕುಡಿಯಬಹುದು. 

3. ತೂಕ ಇಳಿಸಲು ನೆರವಾಗುತ್ತದೆ:
ತಿಳಿಸಾರಿನಲ್ಲಿ ಕ್ಯಾಲರಿ ಇಲ್ಲ ಎನ್ನುವಷ್ಟು ಕಡಿಮೆ. ಆದರೆ, ಪ್ರೊಟೀನ್ (Protein) ಸಾಕಷ್ಟುಪ್ರಮಾಣದಲ್ಲಿ ಸಿಗುತ್ತದೆ.  ಎರಡು ಅಥವಾ ಮೂರು ಬೌಲ್ ಬೇಳೆ ಸಾರು ಕುಡಿದರೆ ಹೊಟ್ಟೆ ಫುಲ್ ಆಗಿ ಬಿಡುತ್ತದೆ.  ಹಾಗಾಗಿ, ಇದು ತೂಕ ಇಳಿಸುವಲ್ಲಿ (Weight Loss) ಮುಖ್ಯ ಪಾತ್ರ ವಹಿಸುತ್ತದೆ. 

ಇದನ್ನೂ ಓದಿ : ಸೌತೆಕಾಯಿ ತಿನ್ನುವ ಮೊದಲು ಈ ವಿಷಯ ನಿಮಗೆ ತಿಳಿದಿರಲಿ

4. ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡುತ್ತದೆ : 
ಬೇಳೆ ಸಾರಿನಲ್ಲಿ ಕರಗುವ ಫೈಬರ್ ಅಂಶ ಸಾಕಷ್ಟು ಇರುತ್ತದೆ. ಹಾಗಾಗಿ ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲನ್ನು (cholesterol) ಕಂಟ್ರೋಲ್ ಮಾಡುತ್ತದೆ.  ಇದರಿಂದ ಹೃದ್ರೋಗ, ಸ್ಟ್ರೋಕ್ ಮುಂತಾದ ಕಾಯಿಲೆಗಳಅಪಾಯ ಬಹಳ ಕಡಿಮೆ ಇರುತ್ತದೆ. 

5.  ಸಾಕಷ್ಟು ಎನರ್ಜಿ ಸಿಗುತ್ತದೆ :
ನಿಮ್ಮಲ್ಲಿ ಎನರ್ಜಿ ಸಾಕಷ್ಟು ಕಡಿಮೆ ಇದೆ ಎಂದು ಅನ್ನಿಸಿದರೆ ಗ್ಲುಕೋಸ್, ಎಲೆಕ್ಟ್ರಾಲ್ ನೀರು ಕುಡಿಯುವ ಬದಲು ಬೇಳೆ ಸಾರು ಕುಡಿಯಿರಿ. ಇದರಿಂದ ದೇಹಕ್ಕ ತತ್ ಕ್ಷಣದ ಶಕ್ತಿ ಸಿಗುತ್ತದೆ. 
ತಿಳಿಸಾರು ಮಾಡೋದು ಹೇಗೆ.? ತಿಳಿಯಿರಿ. ಇದು ಮಾಡೋದು ತುಂಬಾ ಸಿಂಪಲ್. ಫಟಾಫಟ್ ಮಾಡಿಬಿಡಬಹುದು. 

ಇದನ್ನೂ ಓದಿ : Dry Grapes Benefits: ಒಣದ್ರಾಕ್ಷಿ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಎಷ್ಟು ಗೊತ್ತಾ?

ಬೇಕಾದ ಸಾಮಾಗ್ರಿ.
1. ತೊಗರಿಬೇಳೆ 2-3 ಕಪ್
2. ಅರಸಿಣ – 1 ಚಿಟಿಕೆ
3. 2-3 ಕಪ್ ನೀರು
4. ರುಚಿಗೆ ತಕ್ಕಷ್ಟು ಉಪ್ಪು

ತಿಳಿಸಾರು ಮಾಡೋದು ತುಂಬಾ ಸುಲಭ.  ತೊಗರಿಬೇಳೆಯನ್ನು (Toor dal) ಚೆನ್ನಾಗಿ ತೊಳೆಯಿರಿ.  ಬಳಿಕ ಕುಕರ್ ಗೆ ನೀರು ಹಾಕಿ. ಎಲ್ಲಾ ತೊಗರಿಬೇಳೆ ಹಾಕಿ. ಅರಸಿಣ (Turmeric) ಹಾಕಿ. ಎಷ್ಟು ಬೇಕನಿಸುತ್ತದೆಯೋ ಅಷ್ಟು ಉಪ್ಪು ಹಾಕಿ. ನಾಲ್ಕು ಸಿಟಿ ಬರುವ ತನಕ ಕುಕರ್ ನಲ್ಲಿ ಬೇಯಿಸಿ. ಕುಕರ್ ತಣ್ಣಗಾದ ಬಳಿಕ ಮೇಲ್ಭಾಗದ ತಿಳಿಸಾರನ್ನು ಬೇರೊಂದು ಪಾತ್ರೆಗೆ ಸುರಿಯಿರಿ. ಕುಕರ್ ನಲ್ಲಿ ಕೇವಲ ಬೆಂದ ದಾಲ್ ಅಷ್ಟೇ ಉಳಿಯುತ್ತದೆ. ಅದನ್ನು ನೀವು ಬೇರೆ ರೀತಿಯಲ್ಲಿ ಬಳಸಬಹುದು.  ಬೇರೊಂದು ಪಾತ್ರೆಯಲ್ಲಿರುವ ಘಮ ಘಮ ತಿಳಿಸಾರು ಈಗ ಸೇವನೆಗೆ ಸಿದ್ದವಾಗಿರುತ್ತದೆ.  ಅಗತ್ಯವೆನಿಸಿದರೆ ಅದಕ್ಕೆ ತುಪ್ಪ ಅಥವಾ ಲಿಂಬೆ ರಸ (Lemon) ಸೇರಿಸಬಹುದು. 

ಇದನ್ನೂ ಓದಿ : ಒಣಕೆಮ್ಮು ಟೆನ್ಶನ್ ಬಿಡಿ. ಟ್ರೈ ಮಾಡಿ ನೋಡಿ ಈ ಐದು ಮನೆಮದ್ದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News