Buddha Purnima 2024: ಬುದ್ಧ ಪೂರ್ಣಿಮೆಯಂದು ಮಹಾ ಯೋಗ ನಿರ್ಮಾಣ, ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ

Buddha Purnima 2024: ಇಂದು ದೇಶಾದ್ಯಂತ ಶುಭ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಈ ದಿನ ಗುರು-ಶುಕ್ರರ ಸಂಯೋಗದಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದ್ದು, ಇದರಿಂದ ಕೆಲವು ರಾಶಿಯವರಿಗೆ ಬಂಗಾರದ ಸಮಯ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : May 23, 2024, 09:11 AM IST
  • ಈ ಬುದ್ಧ ಪೂರ್ಣಿಮೆಯ ದಿನ ವೃಷಭ ರಾಶಿಯಲ್ಲಿ ಗುರು-ಶುಕ್ರರ ಸಂಯೋಗ
  • ಗುರು-ಶುಕ್ರರ ಸಂಯೋಗದಿಂದ ಅತ್ಯಂತ ಮಂಗಳಕರ ಯೋಗ ನಿರ್ಮಾಣ
  • ಗುರು-ಶುಕ್ರರ ಯುತಿಯಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣ
Buddha Purnima 2024: ಬುದ್ಧ ಪೂರ್ಣಿಮೆಯಂದು ಮಹಾ ಯೋಗ ನಿರ್ಮಾಣ, ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ  title=

Mahayog On Buddha Purnima 2024: ವೈಶಾಖ ಮಾಸದ ಹುಣ್ಣಿಮೆಯನ್ನು ವೈಶಾಖ ಪೂರ್ಣಿಮಾ ಅಥವಾ ಬುದ್ಧ ಪೂರ್ಣಿಮಾ (Buddha Purnima) ಎಂದು ಕರೆಯಲಾಗುತ್ತದೆ. ಈ ವರ್ಷ 23 ಮೇ 2024, ಗುರುವಾರದಂದು ಬುದ್ದ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಬುದ್ಧನ ಜನನವಾಯಿತು ಎಂದು ಹೇಳಲಾಗುತ್ತದೆ. ಅಲ್ಲದೆ, ವೈಶಾಖ ಪೂರ್ಣಿಮಾ ದಿನದಂದು ಭಗವಾನ್ ಬುದ್ಧನು ಬೋಧಗಯಾದಲ್ಲಿ ಜ್ಞಾನೋದಯವನ್ನು ಪಡೆದರು ಎಂಬ ನಂಬಿಕೆಯೂ ಇದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬುದ್ಧ ಪೂರ್ಣಿಮೆಯ ದಿನ ವೃಷಭ ರಾಶಿಯಲ್ಲಿ ಗುರು-ಶುಕ್ರರ ಸಂಯೋಗದಿಂದ (Guru Shukra Yuti) ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಗಜಲಕ್ಷ್ಮಿ ಯೋಗ ರಚನೆಯಾಗುತ್ತಿದೆ. ಈ ಯೋಗದ ಪರಿಣಾಮ ಎಲ್ಲಾ 12 ರಾಶಿಯವರ ಜೀವನದ ಮೇಲೂ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೆ, ಇದು ನಾಲ್ಕು ರಾಶಿಯವರ ಜೀವನದಲ್ಲಿ ಬಂಗಾರದ ಸಮಯವನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಬುದ್ಧ ಪೂರ್ಣಿಮೆಯಂದು ಗಜಲಕ್ಷ್ಮಿ ರಾಜಯೋಗ: 4 ರಾಶಿಯವರಿಗೆ ಅದೃಷ್ಟ: 
ವೃಷಭ ರಾಶಿ: 

ಬುದ್ಧ ಪೂರ್ಣಿಮೆಯ ದಿನ ನಿರ್ಮಾಣವಾಗುತ್ತಿರುವ ಗಜಲಕ್ಷ್ಮಿ ರಾಜಯೋಗವು (Gajalakshmi Rajyoga) ವೃಷಭ ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳನ್ನು ತರಲಿದೆ. ಈ ಜನರು ವೃತ್ತಿ ಬದುಕಿನಲ್ಲಿ ಊಹಿಸಲೂ ಸಾಧ್ಯವಾಗದಷ್ಟು ಕೀರ್ತಿ, ಯಶಸ್ಸನ್ನು ಪಡೆಯುತ್ತಾರೆ. ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ. 

ಇದನ್ನೂ ಓದಿ- Buddha Purnima: ಬುದ್ಧ ಪೂರ್ಣಿಮೆಯಂದು ಈ ಕೆಲಸ ಮಾಡುವುದರಿಂದ ಪೂರ್ವಜರ ಆಶೀರ್ವಾದ, ಶುಭ ಫಲ

ಕರ್ಕಾಟಕ ರಾಶಿ: 
ಗಜಲಕ್ಷ್ಮಿ ರಾಜಯೋಗವು ಕರ್ಕಾಟಕ ರಾಶಿಯವರಿಗೆ ಕೆಲಸದಲ್ಲಿ ಪ್ರಮೋಷನ್, ವ್ಯವಹಾರದಲ್ಲಿ ಲಾಭವನ್ನು ನೀಡಲಿದೆ. ಕೌಟುಂಬಿಕ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳು ದೂರವಾಗಿ ಸುಖವಾದ ಜೀವನವನ್ನು ಅನುಭವಿಸುವಿರಿ. 

ಸಿಂಹ ರಾಶಿ: 
ಈ ವರ್ಷದ ಬುದ್ಧ ಪೂರ್ಣಿಮಾ ಸಿಂಹ ರಾಶಿಯವರಿಗೆ ಅದರಲ್ಲೂ ವಿಶೇಷವಾಗಿ ಈ ರಾಶಿಯ ವ್ಯಾಪಾರಸ್ಥರಿಗೆ ಹೆಚ್ಚು ಫಲಪ್ರದವಾಗಿದೆ. ಬಹಳ ಸಮಯದಿಂದ ಕಾಯುತ್ತಿದ್ದ ನಿಮ್ಮ ಕನಸೊಂದು ನನಸಾಗುವ ಸಮಯ. ಧನಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. 

ಇದನ್ನೂ ಓದಿ- ಬುದ್ಧ ಪೂರ್ಣಿಮಾ 2024: ಬುದ್ಧ ಪೂರ್ಣಿಮೆ ಯಾವಾಗ? ಸ್ನಾನ, ದಾನ & ಪೂಜಾ ಸಮಯ ತಿಳಿಯಿರಿ

ತುಲಾ ರಾಶಿ: 
ಬುದ್ಧ ಪೂರ್ಣಿಮೆಯ ದಿನ ನಿರ್ಮಾಣವಾಗುತ್ತಿರುವ ಗಜಲಕ್ಷ್ಮಿ ರಾಜಯೋಗವು ತುಲಾ ರಾಶಿಯವರಿಗೆ ದಿಢೀರ್ ಲಾಭವನ್ನು ತರಲಿದೆ. ಇದರಿಂದಾಗಿ ನಿಮ್ಮ ಬಹುತೇಕ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿವೆ. ವ್ಯಾಪಾರಸ್ಥರು ಬಂಪರ್ ಲಾಭವನ್ನು ನಿರೀಕ್ಷಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News