Milk Benefits: ಕೀಲು ನೋವು ನಿವಾರಿಸಲು ಬಿಸಿ ಹಾಲಿನಲ್ಲಿ ಈ ವಸ್ತು ಬೆರೆಸಿ ಸೇವಿಸಿ.!

Hot Milk Benefits: ಹಾಲನ್ನು ಸಂಪೂರ್ಣ ಆಹಾರ ಎಂದು ಕರೆದರೆ ಅದು ತಪ್ಪಾಗುವುದಿಲ್ಲ, ಆದರೆ ಅದರೊಂದಿಗೆ ಬೆರೆಸಿದ ವಿಶೇಷ ಹಾಲಿನ ಉತ್ಪನ್ನವು ಪೌಷ್ಟಿಕಾಂಶದ ಮೌಲ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಇದು ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.  

Written by - Chetana Devarmani | Last Updated : Oct 15, 2022, 05:14 PM IST
  • ಹಾಲನ್ನು ಸಂಪೂರ್ಣ ಆಹಾರ ಎಂದು ಕರೆದರೆ ಅದು ತಪ್ಪಾಗುವುದಿಲ್ಲ
  • ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಹಾಲು ರಾಮಬಾಣವಿದ್ದಂತೆ
  • ಕೀಲು ನೋವು ನಿವಾರಿಸಲು ಬಿಸಿ ಹಾಲಿನಲ್ಲಿ ಈ ವಸ್ತು ಬೆರೆಸಿ ಸೇವಿಸಿ
Milk Benefits: ಕೀಲು ನೋವು ನಿವಾರಿಸಲು ಬಿಸಿ ಹಾಲಿನಲ್ಲಿ ಈ ವಸ್ತು ಬೆರೆಸಿ ಸೇವಿಸಿ.!   title=
ಹಾಲು

Hot Milk Benefits: ನಮ್ಮ ದೈನಂದಿನ ಜೀವನದಲ್ಲಿ ನಾವು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತೇವೆ. ಇದಕ್ಕೆ ಹಾಲು ರಾಮಬಾಣವಿದ್ದಂತೆ. ಬಹುತೇಕ ಎಲ್ಲಾ ರೀತಿಯ ಪೋಷಕಾಂಶಗಳು ಹಾಲಿನಲ್ಲಿ ಇರುತ್ತವೆ. ಅದಕ್ಕಾಗಿಯೇ ಇದಕ್ಕೆ ಸಂಪೂರ್ಣ ಆಹಾರ ಎಂದು ಕರೆಯುತ್ತಾರೆ. ಭಾರತದ ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಅವರು ದಿನಕ್ಕೆ 2 ಲೋಟ ಹಾಲು ಕುಡಿದರೆ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು, ಹಾಗೆಯೇ ಬಿಸಿ ಹಾಲಿಗೆ ತುಪ್ಪವನ್ನು ಬೆರೆಸಿ ಕುಡಿದರೆ ಅದರ ಪೌಷ್ಟಿಕಾಂಶದ ಮೌಲ್ಯವು ತುಂಬಾ ಹೆಚ್ಚಾಗುತ್ತದೆ ಎನ್ನುತ್ತಾರೆ. ಬಿಸಿ ಹಾಲು ಮತ್ತು ದೇಸಿ ತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ನಮಗೆ ಸಿಗುವ ಲಾಭಗಳೇನು ಎಂಬುದನ್ನು ತಿಳಿಯೋಣ.

ಇದನ್ನೂ ಓದಿ : Diabetes : ಮಧುಮೇಹಿಗಳು ಊಟದ ನಂತರ ಈ ಸಣ್ಣ ಕೆಲಸ ಮಾಡಿ, ಚಮತ್ಕಾರ ನೋಡಿ!

ಬಿಸಿ ಹಾಲು ಮತ್ತು ತುಪ್ಪ ಕುಡಿಯುವುದರಿಂದ ಆಗುವ ಪ್ರಯೋಜನಗಳು : 

1. ಕೀಲು ನೋವು ನಿವಾರಣೆ : ಕೀಲು ನೋವು ನಿಮಗೆ ಆಗಾಗ್ಗೆ ತೊಂದರೆ ನೀಡುತ್ತಿದ್ದರೆ, ನೀವು ಬಿಸಿ ಹಾಲು ಮತ್ತು ತುಪ್ಪವನ್ನು ಬೆರೆಸಿ ಕುಡಿಯಬಹುದು. ವಾಸ್ತವವಾಗಿ, ಹಾಲು ಉರಿಯೂತವನ್ನು ಸಹ ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಹಾಲಿನಲ್ಲಿ ಕ್ಯಾಲ್ಸಿಯಂ ಇದೆ. ಈ ಕಾರಣದಿಂದಾಗಿ ನಮ್ಮ ಮೂಳೆಗಳು ಬಲವಾಗಿರುತ್ತವೆ.

2. ಉತ್ತಮ ನಿದ್ದೆ : ರಾತ್ರಿ ಮಲಗುವ ಮುನ್ನ ಹಾಲಿನೊಂದಿಗೆ ತುಪ್ಪವನ್ನು ಬೆರೆಸಿ ಕುಡಿಯುವುದು ಒಳ್ಳೆಯದು, ಏಕೆಂದರೆ ಇದು ನಮ್ಮ ಮೆದುಳಿನ ನರಗಳನ್ನು ಶಾಂತಗೊಳಿಸುತ್ತದೆ. ಅದೇ ಸಮಯದಲ್ಲಿ, ತುಪ್ಪದ ಸೇವನೆಯು ಒತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಶಾಂತ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Hair Care Tips: ಕೂದಲು ವೇಗವಾಗಿ ಬೆಳೆಯಲು ಈ ತರಕಾರಿಗಳನ್ನು ಸೇವಿಸಿ

3. ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ : ಹಾಲು ಮತ್ತು ತುಪ್ಪದ ಸಂಯೋಜನೆಯು ನಮ್ಮ ಹೊಟ್ಟೆಗೆ ತುಂಬಾ ಒಳ್ಳೆಯದು. ಇದನ್ನು ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳು ಬಿಡುಗಡೆಯಾಗುತ್ತವೆ. ಇದು ಜೀರ್ಣಕ್ರಿಯೆಯನ್ನು ಇನ್ನಷ್ಟು ಸುಧಾರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಜೀರ್ಣ, ಮಲಬದ್ಧತೆ, ಗ್ಯಾಸ್ಟ್ರಿಕ್‌ ನಂತಹ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ.

4. ಚರ್ಮಕ್ಕೆ ಪ್ರಯೋಜನಕಾರಿ : ನೀವು ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಬಯಸಿದರೆ, ಒಂದು ಲೋಟ ಬೆಚ್ಚಗಿನ ಹಾಲಿಗೆ ಒಂದು ಚಮಚ ದೇಸಿ ತುಪ್ಪ ಸೇರಿಸಿ ಕುಡಿಯಿರಿ. ಇದು ನಮ್ಮ ಚರ್ಮವನ್ನು ನೈಸರ್ಗಿಕವಾಗಿ ತೇವಗೊಳಿಸುತ್ತದೆ. ವಯಸ್ಸಾದ ಮತ್ತು ಶುಷ್ಕತೆಯ ಸಮಸ್ಯೆಯಿಂದ ಬಳಲುತ್ತಿರುವವರು ಈ ಪಾನೀಯವನ್ನು ಕುಡಿಯಬೇಕು.

(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News