Vitamin D ಕೊರತೆ ಮಾತ್ರವಲ್ಲ, ಇದು ಹೆಚ್ಚಾದರೂ ಅಪಾಯ!

Vitamin D Overdose Effect: ಯಾವುದೇ ವ್ಯಕ್ತಿ ಆರೋಗ್ಯವಂತನಾಗಿರಲು ವಿಟಮಿನ್ ಡಿ ಬಹಳ ಮುಖ್ಯ. ವಿಟಮಿನ್ ಡಿ ಕೊರತೆಯು ಹಲವು ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬುದು ಸಾಮಾನ್ಯವಾಗಿ ತಿಳಿದಿರುವ ವಿಚಾರ. ಆದರೆ, ವಿಟಮಿನ್ ಡಿ ಹೆಚ್ಚಾದರೂ ಕೂಡ ಅಪಾಯಕಾರಿಯೇ ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Jan 19, 2023, 02:25 PM IST
  • ಸೂರ್ಯನ ಕಿರಣಗಳು ವಿಟಮಿನ್ ಡಿಯ ಅತ್ಯುತ್ತಮ ಮೂಲವಾಗಿದೆ.

    ಅದಲ್ಲದೆ, ಕೆಲವು ಆಹಾರ ಪೂರಕಗಳಿಂದಲೂ ವಿಟಮಿನ್ ಡಿ ಅನ್ನು ವೃದ್ಧಿಸಿಕೊಳ್ಳಬಹುದು.
  • ಹಾಗಂತ, ವಿಟಮಿನ್ ಡಿ ಯ ಆಹಾರ ಮತ್ತು ಪೂರಕವನ್ನು ದೀರ್ಘ ಸಮಯದವರೆಗೆ ಒಟ್ಟಿಗೆ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.
Vitamin D ಕೊರತೆ ಮಾತ್ರವಲ್ಲ, ಇದು ಹೆಚ್ಚಾದರೂ ಅಪಾಯ! title=
Vitamin D Overdose

Vitamin D Overdose Effect: ಉತ್ತಮ ಆರೋಗ್ಯ ಕಾಯ್ದುಕೊಳ್ಳುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮೂಳೆಗಳನ್ನು ಬಲಪಡಿಸಲು ಸ್ನಾಯುಗಳ ಬೆಳವಣಿಗೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಡಿ ಕೊರತೆಯು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂತೆಯೇ ವಿಟಮಿನ್ ಡಿ ಹೆಚ್ಚಾದರೂ ಕೂಡ ಕೆಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಎಂದು ನಿಮಗೆ ತಿಳಿದಿದೆಯೇ?

ಹೌದು, ದೇಹದಲ್ಲಿ ವಿಟಮಿನ್ ಡಿ ಪ್ರಮಾಣ ಹೆಚ್ಚಾದರೂ ಕೂಡ ಅನಾರೋಗ್ಯಕ್ಕೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು. ವಾಸ್ತವವಾಗಿ, ಸೂರ್ಯನ ಕಿರಣಗಳು ವಿಟಮಿನ್ ಡಿಯ ಅತ್ಯುತ್ತಮ ಮೂಲವಾಗಿದೆ. ಅದಲ್ಲದೆ, ಕೆಲವು ಆಹಾರ ಪೂರಕಗಳಿಂದಲೂ ವಿಟಮಿನ್ ಡಿ ಅನ್ನು ವೃದ್ಧಿಸಿಕೊಳ್ಳಬಹುದು. ಹಾಗಂತ, ವಿಟಮಿನ್ ಡಿ ಯ ಆಹಾರ ಮತ್ತು ಪೂರಕವನ್ನು ದೀರ್ಘ ಸಮಯದವರೆಗೆ ಒಟ್ಟಿಗೆ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. 

ಇದನ್ನೂ ಓದಿ- ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಈ ಆಹಾರಗಳನ್ನು ತಪ್ಪದೇ ಸೇವಿಸಿ

ವಿಟಮಿನ್ ಡಿ ಪೂರಕಗಳ ಮಿತಿ ಮೀರಿದ ಸೇವನೆಯಿಂದ ಯಾವ ಸಮಸ್ಯೆಗಳು ಉಂಟಾಗಬಹುದು ತಿಳಿಯಿರಿ:-
ತೀವ್ರ ತಲೆನೋವು:

ವೈದ್ಯರ ಪ್ರಕಾರ, ವಿಟಮಿನ್ ಡಿ ಪೂರಕಗಳ ಅಧಿಕ ಸೇವನೆಯು ತೀವ್ರವಾದ ತಲೆನೋವಿಗೆ ಕಾರಣವಾಗಬಹುದು.

ವಾಂತಿ:
ವಿಟಮಿನ್ ಡಿ ಪೂರಕಗಳ ಅಧಿಕ ಸೇವನೆಯಿಂದಾಗಿ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ರಂಜಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಅದು ವಾಕರಿಕೆ, ವಾಂತಿಯಂತಹ ಸಮಸ್ಯೆಗಳನ್ನು ಕೂಡ ಹೆಚ್ಚಿಸಬಹುದು. 

ಹೊಟ್ಟೆ ನೋವು:
ವಿಟಮಿನ್ ಡಿ ಪೂರಕಗಳ ಅತಿಯಾದ ಸೇವನೆಯಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಇದು ಹೊಟ್ಟೆ ನೋವಿಗೂ ಕಾರಣವಾಗಬಹುದು. 

ಇದನ್ನೂ ಓದಿ- ನೀವು ತುಂಬಾ ಸಣ್ಣಗಿದ್ದೀರಾ! ತೂಕ ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ

ಕಿಡ್ನಿ ಸ್ಟೋನ್:
ಮಿತಿಮೀರಿದ ವಿಟಮಿನ್ ಡಿ ಪೂರಕಗಳ ಸೇವನೆಯು  ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಮೂತ್ರಪಿಂಡಗಳಲ್ಲಿ ಕಲ್ಲಿನ ಸಮಸ್ಯೆ ಕಾಣಿಸಿಕೊಳ್ಳಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News