ಊಟದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ಎದುರಾಗಲಿದೆ ಈ ಅಪಾಯ

ತಿನ್ನುವ ಆಹಾರದಲ್ಲಿ ಉಪ್ಪು ಕಡಿಮೆಯಿದ್ದರೂ ತಿನ್ನುವುದು ಕಷ್ಟ, ಹೆಚ್ಚಿದ್ದರೂ ಸಾಧ್ಯವಿಲ್ಲ. ಹೀಗಿರುವಾಗ, ನಾವು ಬಳಸುವ ಉಪ್ಪಿನ ಪ್ರಮಾಣವನ್ನು ಸಾಮಾನ್ಯವಾಗಿರಬೇಕು.

Written by - Ranjitha R K | Last Updated : Feb 7, 2022, 02:28 PM IST
  • ಹೆಚ್ಚು ಉಪ್ಪು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ
  • ಇದು ರಕ್ತದೊತ್ತಡವನ್ನು ಹೆಚ್ಚಿಸಬಹುದು
  • ಹೃದಯದ ಅಪಾಯ ಹೆಚ್ಚಾಗುತ್ತದೆ
ಊಟದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ಎದುರಾಗಲಿದೆ ಈ ಅಪಾಯ  title=
ಹೆಚ್ಚು ಉಪ್ಪು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ (file photo)

ನವದೆಹಲಿ : ಅತಿಯಾದರೆ ಅಮೃತವೂ ವಿಷವೇ. ಹೌದು ಯಾವುದೇ ವಸ್ತುವನ್ನು ಅತಿಯಾಗಿ ಸೇವಿಸಿದರೆ ಅದರ ಅನಾನುಕೂಲಗಳನ್ನು ಕೂಡಾ ಎದುರಿಸಲೇಬೇಕು. ಕೆಲವೊಮ್ಮೆ ಇದರಿಂದ  ಆರೋಗ್ಯವೂ ಹದಗೆಡಬಹುದು. ಈ ಮಾತು ಉಪ್ಪಿನ ವಿಷಯದಲ್ಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ತಿನ್ನುವ ಆಹಾರದಲ್ಲಿ ಉಪ್ಪು ಕಡಿಮೆಯಿದ್ದರೂ ತಿನ್ನುವುದು ಕಷ್ಟ, ಹೆಚ್ಚಿದ್ದರೂ ಸಾಧ್ಯವಿಲ್ಲ (side effects of excess salt). ಹೀಗಿರುವಾಗ, ನಾವು ಬಳಸುವ ಉಪ್ಪಿನ ಪ್ರಮಾಣವನ್ನು ಸಾಮಾನ್ಯವಾಗಿರಬೇಕು. ಏಕೆಂದರೆ ಇದನ್ನು ಹೆಚ್ಚು ತಿನ್ನುವುದರಿಂದ ಅನೇಕ ಅಪಾಯಗಳಿಗೆ ಕಾರನವಾಗಬಹುದು.  

ಅತಿಯಾದ ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ :
ಒಬ್ಬ ವ್ಯಕ್ತಿಯು ಹೆಚ್ಚು ಉಪ್ಪನ್ನು ಸೇವಿಸಿದರೆ, ಅಧಿಕ ರಕ್ತದೊತ್ತಡದ (High Blood pressure) ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಉಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ (Sodium)  ಕಂಡುಬರುತ್ತದೆ. ಇದು ಹೃದಯಾಘಾತದ (Heart Attack) ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ :  Weight Loss: ತೂಕ ಇಳಿಸಲು ದಕ್ಷಿಣ ಭಾರತದ ಆಹಾರ ಅತ್ಯುತ್ತಮ ಆಯ್ಕೆ

ಮೂಳೆಗಳು ದುರ್ಬಲವಾಗುತ್ತವೆ : 
ಹೆಚ್ಚು ಉಪ್ಪನ್ನು ತಿನ್ನುವುದೆಂದರೆ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ. ಉಪ್ಪಿನ ಮಿತಿ ಮೀರಿದ ಬಳಕೆ ಮೂಳೆಗಳು ದುರ್ಬಲಗೊಳ್ಳಲು ಕಾರಣವಾಗುತ್ತದೆ. ಇದರೊಂದಿಗೆ, ಕೀಲು ನೋವಿನ ಸಮಸ್ಯೆ (Joint Pain) ಬಾಧಿಸಲು ಆರಂಭವಾಗುತ್ತದೆ. 

ಕೂದಲು ಉದುರಲು ಆರಂಭವಾಗುತ್ತದೆ :
ಕೂದಲು ದುರ್ಬಲಗೊಳ್ಳುವ (Hair fall) ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಹೆಚ್ಚು ಉಪ್ಪನ್ನು ಸೇವಿಸುತ್ತಿದ್ದರೆ  ಆ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ.  ಹೀಗೆ ಮಾಡಿದರೆ, ಕೂದಲು ಉದುರುವಿಕೆಯ  ಸಮಸ್ಯೆ ಕಾಡುವುದಿಲ್ಲ. ಆದ್ದರಿಂದ ಸೀಮಿತ ಪ್ರಮಾಣದಲ್ಲಿ ಉಪ್ಪನ್ನು ಸೇವಿಸಲು ಪ್ರಯತ್ನಿಸಿ.

ಇದನ್ನೂ ಓದಿ : Health Benefits Of Kiwi: ಕಿವಿ ಹಣ್ಣಿನ ಸೇವನೆಯಿಂದ ಸಿಗುತ್ತೆ ಹಲವು ಪ್ರಯೋಜನ

ಕಿಡ್ನಿ ಸ್ಟೋನ್ ಅಪಾಯ ಹೆಚ್ಚುತ್ತದೆ :
ಹೆಚ್ಚು ಉಪ್ಪು ತಿಂದರೆ ಮೂತ್ರಪಿಂಡದ ಕಲ್ಲುಗಳ (Kidney Stone) ಅಪಾಯ ಹೆಚ್ಚಾಗುತ್ತದೆ.  ಹೆಚ್ಚು ಉಪ್ಪನ್ನು ತಿನ್ನುವುದರಿಂದ ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣವು ಹೆಚ್ಚಾಗುತ್ತದೆ. ಇದರಿಂದಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಕೂಡಾ ಹೆಚಾಗುತ್ತದೆ. ಅತಿಯಾಗಿ ಉಪ್ಪು ಸೇವಿಸಿದರೆ ದೇಹದ ಬೊಜ್ಜಿನ ಪ್ರಮಾಣವನ್ನು ಕೂಡಾ ಹೆಚ್ಚಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  TwitterFacebook  ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News