Sputnik Light Update: ಭಾರತದಲ್ಲಿ ತಯಾರಾದ ರಷ್ಯನ್ ಕರೋನಾ ಲಸಿಕೆ ಸ್ಪುಟ್ನಿಕ್ ಲೈಟ್ ರಫ್ತಿಗೆ ಸರ್ಕಾರದ ಅನುಮತಿ

Sputnik Light Vaccine: ಭಾರತದಲ್ಲಿ ತಯಾರಿಸಲಾದ ರಷ್ಯಾದ ಸಿಂಗಲ್ ಡೋಸ್ಕೋವಿಡ್ -19  ವಿರೋಧಿ ಲಸಿಕೆ ಸ್ಪುಟ್ನಿಕ್ ಲೈಟ್ ರಫ್ತು ಮಾಡಲು ಸರ್ಕಾರ ಅನುಮತಿ  ಅನುಮತಿ ನೀಡಿದೆ. ಆದರೆ ಭಾರತದಲ್ಲಿ ತುರ್ತು ಬಳಕೆಗೆ ಇದಕ್ಕೆ ಇನ್ನೂ ಅನುಮತಿ ನೀಡಲಾಗಿಲ್ಲ ಎಂಬುದು ಗಮನಾರ್ಹ.

Written by - Nitin Tabib | Last Updated : Oct 10, 2021, 07:27 PM IST
  • Sputnik Light ಲಸಿಕೆಯ ರಫ್ತಿಗೆ ಕೇಂದ್ರ ಸರ್ಕಾರದ ಅನುಮತಿ
  • ಭಾರತದಲ್ಲಿ ಈ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿಲ್ಲ.
  • '4 ಮಿಲಿಯನ್ ಡೋಸ್ ಸ್ಪುಟ್ನಿಕ್ ಲೈಟ್ ಅನ್ನು ರಷ್ಯಾಕ್ಕೆ ರಫ್ತು ಮಾಡಲು ಭಾರತೀಯ ಔಷಧ ಕಂಪನಿ ಹೆಟೆರೊ ಬಯೋಫಾರ್ಮಾಗೆ ಸರ್ಕಾರ ಅನುಮತಿ ನೀಡಿದೆ
Sputnik Light Update: ಭಾರತದಲ್ಲಿ ತಯಾರಾದ ರಷ್ಯನ್ ಕರೋನಾ ಲಸಿಕೆ ಸ್ಪುಟ್ನಿಕ್ ಲೈಟ್ ರಫ್ತಿಗೆ ಸರ್ಕಾರದ ಅನುಮತಿ title=
Sputnik Light Update (File Photo)

ನವದೆಹಲಿ: Sputnik Light Vaccine - ಭಾರತದಲ್ಲಿ ಉತ್ಪಾದನೆದೊಂದ  ರಷ್ಯಾದ ಸಿಂಗಲ್ ಡೋಸ್ ಕೋವಿಡ್ -19 (Covid-19) ಲಸಿಕೆ ಸ್ಪುಟ್ನಿಕ್ ಲೈಟ್ ರಫ್ತು (Sputnik Light Export) ಮಾಡಲು ಸರ್ಕಾರ (Central Government) ಅನುಮತಿ ನೀಡಿದೆ. ಈ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆಗಾಗಿ ಇನ್ನೂ ಅನುಮೋದಿಸಲಾಗಿಲ್ಲ. ಭಾರತೀಯ ಔಷಧೀಯ ಕಂಪನಿ ಹೆಟೆರೊ ಬಯೋಫಾರ್ಮಾ ಲಿಮಿಟೆಡ್ (Hetero Biopharma Limited) ಗೆ 4 ಮಿಲಿಯನ್ ಡೋಸ್ ಸ್ಪುಟ್ನಿಕ್ ಲೈಟ್ ರಷ್ಯಾಕ್ಕೆ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ವಿಷಯಕ್ಕೆ ಸಂಬಂಧಿದ ಮೂಲಗಳು ವರದಿ ಮಾಡಿವೆ. 

ಸ್ಪುಟ್ನಿಕ್ ಲೈಟ್ (Sputnik Light) ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಲಸಿಕೆಯ ಘಟಕ -1 ಅನ್ನು ಹೋಲುತ್ತದೆ. ಭಾರತದ ಔಷಧ ನಿಯಂತ್ರಕವು ಏಪ್ರಿಲ್‌ನಲ್ಲಿ ಸ್ಪುಟ್ನಿಕ್ ವಿ ಯ ತುರ್ತು ಬಳಕೆಯನ್ನು ಅನುಮೋದಿಸಿದೆ. ನಂತರ ಇದನ್ನು ಭಾರತದ  ಕೋವಿಡ್ -19 ವಿರೋಧಿ ಲಸಿಕೆ ಕಾರ್ಯಕ್ರಮದಲ್ಲಿ ಬಳಸಲಾಗುತ್ತಿದೆ.

ಭಾರತದಲ್ಲಿ ಔಷಧ ನಿಯಂತ್ರಕದಿಂದ ತುರ್ತು ಬಳಕೆಗಾಗಿ ಲಸಿಕೆಯನ್ನು ಅನುಮೋದಿಸುವವರೆಗೂ ಹೆಟೆರೊ ಬಯೋಫಾರ್ಮಾ ತಯಾರಿಸಿದ ಸ್ಪುಟ್ನಿಕ್ ಲೈಟ್ ಅನ್ನು ರಷ್ಯಾಕ್ಕೆ ರಫ್ತು ಮಾಡಲು ಅನುಮತಿ ನೀಡುವಂತೆ ರಷ್ಯಾದ ರಾಯಭಾರಿ ನಿಕೋಲಾಯ್ ಕುಡ್ಶೇವ್ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ-Sputnik Light Vaccine: ದೇಶಕ್ಕೆ ಯಾವಾಗ ಸಿಗಲಿದೆ ಸಿಂಗಲ್ ಡೋಸ್ ಲಸಿಕೆ ಸ್ಪುಟ್ನಿಕ್? ಅದರ ಬೆಲೆ ಎಷ್ಟು?

ಈ ಕುರಿತು ಹೇಳಿಕೆ ನೀಡಿರುವ ಬಲ್ಲ ಮೂಲವೊಂದು, '4 ಮಿಲಿಯನ್ ಡೋಸ್ ಸ್ಪುಟ್ನಿಕ್ ಲೈಟ್ ಅನ್ನು ರಷ್ಯಾಕ್ಕೆ ರಫ್ತು ಮಾಡಲು ಭಾರತೀಯ ಔಷಧ ಕಂಪನಿ ಹೆಟೆರೊ ಬಯೋಫಾರ್ಮಾಗೆ ಸರ್ಕಾರ ಅನುಮತಿ ನೀಡಿದೆ. ಇದೆ ವಾರದಲ್ಲಿ ನಡೆದ ವಿಸ್ತೃತ  ಚರ್ಚೆಗಳ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಹೇಳಿದೆ.

ಇದನ್ನೂ ಓದಿ-ಕೋವಿಶೀಲ್ಡ್ ನ ಒಂದೇ ಡೋಸ್ ಸಾಕಾ? ಎರಡನೇ ಡೋಸ್ ಅಗತ್ಯವಿಲ್ಲವೇ ?

Sputnik Light ಸಿಂಗಲ್ ಶಾಟ್ ವ್ಯಾಕ್ಸಿನ್ ಆಗಿದೆ
ಇದುವರೆಗೆ ಭಾರತದಲ್ಲಿ ಎರಡು ಡೋಸ್ ಸ್ಪುಟ್ನಿಕ್ ವಿ ಲಸಿಕೆಯನ್ನು  ಮಾತ್ರ ಬಳಸಲಾಗುತ್ತಿದ್ದರೆ, ಸ್ಪುಟ್ನಿಕ್ ಲೈಟ್ ಒಂದು ಶಾಟ್ ಲಸಿಕೆಯಾಗಿದೆ. ಅನೇಕ ಅಧ್ಯಯನಗಳಲ್ಲಿ, ವಿಜ್ಞಾನಿಗಳು ಕೂಡ ಈ ಲಸಿಕೆ ಅತ್ಯಂತ ಪರಿಣಾಮಕಾರಿ ಎಂದು ಹೇಳಿದ್ದಾರೆ.

ಮೇ 2021ರಲ್ಲಿ ಮೊದಲ ಬಾರಿಗೆ ರಶಿಯಾ ಒಕ್ಕೂಟದ ಆರೋಗ್ಯ ಸಚಿವಾಲಯ, ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಪಿಡೆಮಿಯಾಲಾಜಿ ಅಂಡ್ ಮೈಕ್ರೋ ಬಯಾಲಾಜಿ ಹಾಗೂ ರಶಿಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಗಳು ಸಿಂಗಲ್ ಶಾಟ್ ಸ್ಪುಟ್ನಿಕ್ ಲೈಟ್ ಲಸಿಕೆಯ ಕುರಿತು ಘೋಷಣೆ ಮಾಡಿದ್ದವು ಎಂಬುದು ಇಲ್ಲಿ ಉಲ್ಲೇಖನೀಯ. ಬಳಿಕ ಜುಲೈ ನಲ್ಲಿ ಪ್ಯಾನ್ ಏಷ್ಯಾ ಬಯೋಟೆಕ್ ಕಂಪನಿಗೆ ಸ್ಪುಟ್ನಿಕ್ ಲೈಟ್ ಲಸಿಕೆಯ ಲೈಸನ್ಸ್ ದೊರೆತಿದೆ. ಹಿಮಾಚಲ ಪ್ರದೇಶದ ಬದ್ದಿ ಪಟ್ಟಣದಲ್ಲಿ ಈ ಲಸಿಕೆಯ ಉತ್ಪಾದನೆ ನಡೆಯುತ್ತಿದೆ.

ಇದನ್ನೂ ಓದಿ- Sputnik V Vaccines : ಭಾರತಕ್ಕೆ ತಲುಪಿದ 3 ಮಿಲಿಯನ್ ಸ್ಪುಟ್ನಿಕ್ V ಲಸಿಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News