Omicron ವಿರುದ್ದದ ಹೋರಾಟದಲ್ಲಿ ಸಹಾಯ ಮಾಡುತ್ತದೆ ಒಂದು ಚಮಚ ತುಪ್ಪ

ಕರೋನವೈರಸ್ ನ ವಿವಿಧ ರೂಪಾಂತರಗಳು ಜನರಲ್ಲಿ ಭೀತಿಯನ್ನು ಹೆಚ್ಚಿಸುತ್ತಿವೆ. ಹಾಗಂತ ಭಯಪಡುವ ಅಗತ್ಯವಿರುವುದಿಲ್ಲ. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಈ ವೈರಸ್ ಹರಡುವುದನ್ನು ತಡೆಯಬಹುದು. 

Written by - Ranjitha R K | Last Updated : Jan 3, 2022, 12:18 PM IST
  • Omicron ನಿಂದ ತುಂಬಾ ಭಯಪಡಬೇಕಿಲ್ಲ
  • ಆಹಾರದಲ್ಲಿ ತುಪ್ಪ ಮತ್ತು ಸಿಹಿ ಗೆಣಸು ಸೇರಿಸಿ
  • ಈ ಆಹಾರ ಪದಾರ್ಥಗಳಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
Omicron  ವಿರುದ್ದದ ಹೋರಾಟದಲ್ಲಿ ಸಹಾಯ ಮಾಡುತ್ತದೆ ಒಂದು ಚಮಚ ತುಪ್ಪ  title=
ಆಹಾರದಲ್ಲಿ ತುಪ್ಪ ಮತ್ತು ಸಿಹಿ ಗೆಣಸು ಸೇರಿಸಿ (file photo)

ನವದೆಹಲಿ : ಒಮಿಕ್ರಾನ್ (Omicron) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರಕಾರವು ನಿರಂತರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅಗತ್ಯವಿರುವ ಎಲ್ಲಾ ನಿರ್ಬಂಧಗಳನ್ನು (COVID Restriction) ವಿಧಿಸಲಾಗುತ್ತಿದೆ. ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸೂಚಿಸಲಾಗಿದೆ. ದೇಶದಲ್ಲಿ ಒಮಿಕ್ರಾನ್ ಆತಂಕ ದಿನೇ ದಿನೇ ಹೆಚ್ಚುತ್ತಲೇ ಇದೆ. ಅದಲ್ಲದೆ ಈಗ ಚಳಿಗಾಲ (Winter) ಬೇರೆ ನಡೆಯುತ್ತಿದೆ. ಕರೋನವೈರಸ್ ನ ವಿವಿಧ ರೂಪಾಂತರಗಳು ಜನರಲ್ಲಿ ಭೀತಿಯನ್ನು ಹೆಚ್ಚಿಸುತ್ತಿವೆ. ಹಾಗಂತ ಭಯಪಡುವ ಅಗತ್ಯವಿರುವುದಿಲ್ಲ. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಈ ವೈರಸ್ (Virus) ಹರಡುವುದನ್ನು ತಡೆಯಬಹುದು. ಇದೇ ರೀತಿಯ ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸುವುದು ಕೂಡಾ ಅಗತ್ಯ.  ಸೋಂಕಿನ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುವ ವಸ್ತುಗಳನ್ನು ಸೇವಿಸಿದರೆ, ಸೋಂಕನ್ನು ಕಡಿಮೆ ಮಾಡಬಹುದು. 

ನಿತ್ಯದ ಆಹಾರದಲ್ಲಿ ತುಪ್ಪವನ್ನು ಸೇರಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು : 
ಮೊದಲನೆಯದಾಗಿ, ಈ ವೈರಸ್ (Virus) ಅನ್ನು ಎದುರಿಸಲು, ನಾವು ನಮ್ಮ ಆಹಾರದಲ್ಲಿ 'ತುಪ್ಪ'ವನ್ನು (Ghee) ಸೇವಿಸಬೇಕು. ಆಯುರ್ವೇದದ ಪ್ರಕಾರ ತುಪ್ಪವು ಅತ್ಯಂತ ಸುಲಭವಾಗಿ ಜೀರ್ಣವಾಗುವ ಕೊಬ್ಬು. ತುಪ್ಪವು ನಿಮ್ಮನ್ನು ಬೆಚ್ಚಗಿಡುವುದರ ಜೊತೆಗೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಅಷ್ಟೇ ಅಲ್ಲ, ರೋಗನಿರೋಧಕ ಶಕ್ತಿಯನ್ನು (Immuniy) ಬಲಪಡಿಸುತ್ತದೆ. ತುಪ್ಪವು ಚರ್ಮದ ಬಿರುಕು ಮತ್ತು ಚರ್ಮ ಒಣಗುವುದನ್ನು ತಡೆಯುತ್ತದೆ. ಇದನ್ನು ರೊಟ್ಟಿ, ಬೇಳೆ, ಅಕ್ಕಿ ಅಥವಾ ತರಕಾರಿಗಳೊಂದಿಗೆ ಸೇವಿಸಬಹುದು. ಅದನ್ನು ಸೇವಿಸುವ ಮೂಲಕ, ಈ ವೈರಸ್ ವಿರುದ್ಧ ಹೋರಾಡಬಹುದು.

ಇದನ್ನೂ ಓದಿ : High BP Control : ಹೈ BP ಕಂಟ್ರೋಲ್ ಗೆ ಪರಿಣಾಮಕಾರಿ ಮನೆಮದ್ದ : ತಕ್ಷಣವೇ ಸಿಗಲಿದೆ ಪ್ರಯೋಜನ

ಗೆಣಸು ಕೂಡಾ ಪ್ರಯೋಜನಕಾರಿ : 
ಸಿಹಿ ಗೆಣಸು (sweet potato) ಚಳಿಗಾಲದಲ್ಲಿ ಹೆಚ್ಚಾಗಿ ಸಿಗುತ್ತದೆ. ಸಿಹಿ ಗೆಣಸು ತಿನ್ನುವುದರಿಂದ ಅನೇಕ ಪ್ರಯೋಜನಗಳಾಗುತ್ತವೆ. ಇದರಲ್ಲಿ ವಿಟಮಿನ್-ಎ ಇದೆ. ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ. ಇದು ಮಲಬದ್ಧತೆಯ (Constipation) ಸಮಸ್ಯೆಯನ್ನು ನಿವಾರಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ್-ಸಿ ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಸಿಹಿ ಗೆಣಸು ದಿನವಿಡೀ ದೇಹದಲ್ಲಿ ಬೀಟಾ ಕ್ಯಾರೋಟಿನ್ ಅನ್ನು ತುಂಬುತ್ತದೆ. ಇದನ್ನು ಹಾಲಿನೊಂದಿಗೆ (milk) ಸೇವಿಸಬಹುದು. ಇದನ್ನು ಸೇವಿಸುವುದರಿಂದ ಇದು ಓಮಿಕ್ರಾನ್ ವಿರುದ್ಧ ಹೋರಾಡಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಹಾಗಾಗಿ ನಿತ್ಯದ ಆಹಾರದಲ್ಲಿ ಸಿಹಿ ಗೆಣಸನ್ನು ಸೇರಿಸಿಕೊಳ್ಳಬೇಕು. ಇದಲ್ಲದೆ, ಈ ಸೋಂಕಿನ ಸಮಯದಲ್ಲಿ ಸಾಧ್ಯವಾದಷ್ಟು ಹಸಿರು ತರಕಾರಿಗಳನ್ನು (Green vegetables) ಸೇವಿಸಬೇಕು. ಸಾಧ್ಯವಾದಷ್ಟು ಹೊರಗಿನ ಆಹಾರವನ್ನು ತಪ್ಪಿಸಬೇಕು.

ಇದನ್ನೂ ಓದಿ : Honey Benefits : ಪ್ರತಿದಿನ ಹೊಕ್ಕಳಿಗೆ ಹಚ್ಚಿ ಸ್ವಲ್ಪ ಜೇನುತುಪ್ಪ : ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News