ಮಧುಮೆಹಿಗಳಿಗೆ ಮೂರು ಗಿಡಗಳು ವರದಾನವಿದ್ದಂತೆ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲು ಇವು ಅನುಮತಿಸುವುದಿಲ್ಲ!

Trees For Taming Diabetes: ಮಧುಮೇಹ ರೋಗಿಗಳು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಹಲವು ರೀತಿಯ ಔಓಷಧಿಗಳ ನೆರವು ಪಡೆದುಕೊಳ್ಳುತ್ತಾರೆ ಮತ್ತು ಇನ್ಸುಲಿನ್ ಚುಚ್ಚುಮದ್ದನ್ನು ಸಹ ಹಾಕಿಸಿಕೊಳ್ಳುತ್ತಾರೆ. ಆದರೆ ನೈಸರ್ಗಿಕ ವಿಧಾನಗಳ ಮೂಲಕವೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? (Health News In Kannada)  

Written by - Nitin Tabib | Last Updated : Nov 4, 2023, 10:28 PM IST
  • ಮಧುಮೇಹಕ್ಕೆ ಖಚಿತವಾದ ಚಿಕಿತ್ಸೆ ಕಂಡು ಹಿಡಿಯಲು ವೈದ್ಯಕೀಯ ಲೋಕ ಇನ್ನೂ ಪರದಾಡುತ್ತಿದೆ,
  • ಆದಾಗ್ಯೂ, ಆರೋಗ್ಯಕರ ಆಹಾರ ಮತ್ತು ಆಹಾರ ನಿಯಂತ್ರಣದ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
  • ಭಾರತದ ಖ್ಯಾತ ಆರೋಗ್ಯ ತಜ್ಞ ನಿಖಿಲ್ ವಾಟ್ಸ್ ಯಾವ ಹಸಿರು ಸಸ್ಯಗಳ ಸಹಾಯದಿಂದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು ಎಂಬುದನ್ನು ಹೇಳಿದ್ದಾರೆ.
ಮಧುಮೆಹಿಗಳಿಗೆ ಮೂರು ಗಿಡಗಳು ವರದಾನವಿದ್ದಂತೆ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲು ಇವು ಅನುಮತಿಸುವುದಿಲ್ಲ!  title=

ಬೆಂಗಳೂರು: ಮಧುಮೇಹ ರೋಗಿಗಳು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಹಲವು ರೀತಿಯ ಔಓಷಧಿಗಳ ನೆರವು ಪಡೆದುಕೊಳ್ಳುತ್ತಾರೆ ಮತ್ತು ಇನ್ಸುಲಿನ್ ಚುಚ್ಚುಮದ್ದನ್ನು ಸಹ ಹಾಕಿಸಿಕೊಳ್ಳುತ್ತಾರೆ. ಆದರೆ ನೈಸರ್ಗಿಕ ವಿಧಾನಗಳ ಮೂಲಕವೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಮಧುಮೇಹವು ಆನುವಂಶಿಕವಾಗಿರಬಹುದು, ಆದರೆ ಇದು ಸಾಮಾನ್ಯವಾಗಿ ಕೆಟ್ಟ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಸಂಭವಿಸುತ್ತದೆ. (Health News In Kannada)

ಈ ಹಸಿರು ಗಿಡಗಳ ಸಹಾಯದಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು
ಮಧುಮೇಹಕ್ಕೆ ಖಚಿತವಾದ ಚಿಕಿತ್ಸೆ ಕಂಡು ಹಿಡಿಯಲು ವೈದ್ಯಕೀಯ ಲೋಕ ಇನ್ನೂ ಪರದಾಡುತ್ತಿದೆ, ಆದಾಗ್ಯೂ, ಆರೋಗ್ಯಕರ ಆಹಾರ ಮತ್ತು ಆಹಾರ ನಿಯಂತ್ರಣದ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಭಾರತದ ಖ್ಯಾತ ಆರೋಗ್ಯ ತಜ್ಞ ನಿಖಿಲ್ ವಾಟ್ಸ್ ಯಾವ ಹಸಿರು ಸಸ್ಯಗಳ ಸಹಾಯದಿಂದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು ಎಂಬುದನ್ನು ಹೇಳಿದ್ದಾರೆ.

1. ಕರಿಬೇವಿನ ಎಲೆಗಳು
ಕರಿಬೇವಿನ ಎಲೆಗಳನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ; ವಿಟಮಿನ್ಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಇದರಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ. ಮಧುಮೇಹ ರೋಗಿಗಳು ಇದರ ಸದುಪಯೋಗ ಪಡೆಯಬೇಕೆಂದರೆ ಕರಿಬೇವಿನ ಸೊಪ್ಪಿನಿಂದ ಟೀ ತಯಾರಿಸಿ ಕುಡಿಯಬಹುದು.

2. ಅಮೃತ ಬಳ್ಳಿ
ಕರೋನಾ ಅವಧಿಯಲ್ಲಿ, ಈ ಗಿಡಮೂಲಿಕೆಯನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗುತ್ತಿತ್ತು, ಆದರೆ ನೀವು ಬೆಳಗ್ಗೆ  ಎದ್ದ ತಕ್ಷಣ ಗಿಲೋಯ್ ಅನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಕಷ್ಟು ಸಹಾಯ ಮಾಡುತ್ತದೆ ಎಂಬುದು ನಿಮಗೆ ತಿಳಿದಿರಲಿ. 

ಇದನ್ನೂ ಓದಿ-ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ಈ 1 ಪದಾರ್ಥ ಬೆರೆಸಿ ಸೇವಿಸಿ, ಕೆಲವೇ ದಿನಗಳಲ್ಲಿ ಸೊಂಟದ ಸೈಜ್ ನಾಲ್ಕು ಇಂಚು ಕಮ್ಮಿಯಾಗುತ್ತೆ!

3. ಬೇವು
ಪ್ರತಿ ವ್ಯಕ್ತಿಗೆ ಬೇವಿನ ಔಷಧೀಯ ಗುಣಗಳ ಬಗ್ಗೆ ತಿಳಿದಿದೆ. ಬೇವಿನ ಗಿಡ ಒಂದು ಆಯುರ್ವೇದ ಔಷಧಿಗಳ ನಿಧಿಯಾಗಿದೆ ಇದರ ಎಲೆಗಳು, ಹಣ್ಣುಗಳು, ಹೂವುಗಳು, ತೊಗಟೆ ಮತ್ತು ಮರವನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ನೀವು ಬೆಳಗ್ಗೆ ಎದ್ದ ನಂತರ ಇದರ ಹಸಿರು ಎಲೆಗಳನ್ನು ಅಗಿಯುತ್ತಿದ್ದರೆ, ಇದು ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಇದನ್ನೂ ಓದಿ-ಪುರುಷರೇ ಹುಷಾರ್...!ನಿಮ್ಮ ಮೊಬೈಲ್ ಫೋನ್ ನಿಮ್ಮನ್ನು ನಪುಂಸಕರನ್ನಾಗಿಸಬಹುದು, ಕಾರಣ ಇಲ್ಲಿದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News