ಬೆಂಗಳೂರು : ಎಲ್ಲಾ ಸಮಯದಲ್ಲೂ ಎಲ್ಲರಿಗಿಂತ ಹೆಚ್ಚು ದುಡಿಯುವವರು ಅಮ್ಮಂದಿರು (Super Mom’s). ದಿನದ 24 ಗಂಟೆಯೂ ಅವರಿಗೆ ಸಾಕಾಗುವುದಿಲ್ಲ. ಗಂಡ, ಮಕ್ಕಳು, ಅತ್ತೆ, ಮಾವ, ಸಂಬಂಧಿಗಳು ಜೊತೆಗೆ ಕೆಲಸಕ್ಕೆ ಹೋಗುತ್ತಿದ್ದರಂತೂ ಮುಗಿಯಿತು. ಬೆಳಗ್ಗೆ 6 ಗಂಟೆಗೆ ಎದ್ದರೆ ರಾತ್ರಿ 11 ಆದರೂ ಅವರ ಕೆಲಸ ಮುಗಿಯುವುದಿಲ್ಲ. ಇದರ ಜೊತೆ ಪಿರಿಯಡ್ಸ್ (Periods), ಪ್ರೆಗ್ನೆನ್ಸಿ (Pregnency) ಅಥವಾ ಮೆನೊಪಾಸ್ (Menopass) ಬಂದರೆ, ಅವು ನರಕಯಾತನೆಯ ದಿನಗಳು. ಅಮ್ಮಂದಿರ ಪರಿಶ್ರಮ ಯಾರಿಗೂ ಗೊತ್ತಾಗುವುದೇ ಇಲ್ಲ. ಇಂಥ ಸೂಪರ್ ಅಮ್ಮಂದಿರು ದಿನದ 24 ಗಂಟೆ ಚೈತನ್ಯದ ಚಿಲುಮೆಗಳಾಗಿರಬೇಕಾದರೆ ಅವರು ಯಾವ ಆಹಾರ ತಿನ್ನಬೇಕು. ನೀವು ಅಮ್ಮನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ದಯವಿಟ್ಟು ಅವರಿಗೆ ಈ ಆರು ಸೂಪರ್ ಫುಡ್ (Super Food)ತಿನ್ನಲು ಹೇಳಿ. ಅಮ್ಮನ ಎನರ್ಜಿ ಮತ್ತು ಆರೋಗ್ಯ ತುಂಬಾ ಚೆನ್ನಾಗಿರುತ್ತದೆ .
1. ಊಟದ ಜೊತೆಗಿಷ್ಟು ಮೊಸರು :
ಎಲ್ಲಾ ವಯಸ್ಸಿಯನ ಮಹಿಳೆಯರು ನಿತ್ಯವೂ ಬೇಕಾದಷ್ಟು ಪ್ರಮಾಣದಲ್ಲಿ ಮೊಸರು (Curd) ತಿನ್ನಲೇ ಬೇಕು. ಆಹಾರ ತಜ್ಞರ ಪ್ರಕಾರ ಮೊಸರಿನಲ್ಲಿ ಸ್ತನ ಕ್ಯಾನ್ಸರ್ (Breast Cancer) ತಡೆಯುವ ಶಕ್ತಿ ಇದೆ. ಇದಕ್ಕೆ ಪುಷ್ಟಿಯೂ ಸಿಕ್ಕಿದೆ. ಇಷ್ಟೇ ಅಲ್ಲ ಹೊಟ್ಟೆ ಸಂಬಂಧಿ ಹಲವು ಕಾಯಿಲೆಗಳಿಗೆ ಮೊಸರು ರಾಮಬಾಣ. ಮೊಸರು ಅಲ್ಸರ್ (Ulcer), ವೆಜಿನಲ್ ಇನ್ ಫೆಕ್ಷನ್ ಗಳಿಂದ (Veginal Infection) ನಿಮ್ಮನ್ನು ರಕ್ಷಿಸುತ್ತದೆ. ಮೊಸರಿನಲ್ಲಿ ಬೇಕಾದಷ್ಟು ಕ್ಯಾಲ್ಸಿಯಂ (Calcium) ಇದೆ. ಹಾಗಾಗಿ ಇದು ನಿಮ್ಮ ಮೂಳೆಯನ್ನು (Bone) ಬಲಗೊಳಿಸುತ್ತದೆ.
ಇದನ್ನೂ ಓದಿ : Weight Loss ಮಾಡಲು ದೇಸಿ ತುಪ್ಪವನ್ನು ಈ ರೀತಿ ಬಳಸಿ
2. ಮೀನು ತಿಂದರೆ ತುಂಬಾ ಒಳ್ಳೆಯದು.!
ಶಾಖಾಹಾರಿಗಳಿಗೆ ಮೀನು (Fish) ಹಿಡಿಸದೇ ಇರಬಹುದು. ಆದರೆ, ಮೀನಿನಲ್ಲಿ ಒಮೆಗಾ 3 (Omega 3) ಫ್ಯಾಟಿ ಆಸಿಡ್ ಭರ್ಜರಿಯಾಗಿ ಸಿಗುತ್ತದೆ. ಇದರಲ್ಲಿ
ಐಕೋಸಾಪೆಂಟಾನೊಯಿಕ್ ಆಮ್ಲ (EPA) ಮತ್ತು ಡೊಕೊಸಾಹೆಕ್ಸಾನೊಯಿಕ್ ಆಮ್ಲ (DHA) ಸಮೃದ್ಧವಾಗಿರುತ್ತದೆ. ಇದು ಹೃದ್ರೋಗ (Heart disease), ಪಾರ್ಶವಾಯು(stroke), ಹೈಪರ್ ಟೆನ್ಶನ್ (Hypertension), ಡಿಪ್ರೆಶನ್ (Depression), ಕೀಲು ನೋವು ಮೊದಲಾದ ಗಂಭೀರ ರೋಗಗಳಿಂದ ರಕ್ಷಿಸುತ್ತದೆ. ಅಲ್ಙೈಮರ್ ಕಾಯಿಲೆಯಿಂದಲೂ ಇದು ನಮ್ಮನ್ನು ದೂರ ಇಡುತ್ತದೆ. ಬೂತಾಯಿ (Sardine), ಬಂಗುಡೆ (Mackerel) , ಸಾಲ್ಮನ್ ಮೀನುಗಳನ್ನು ಹೆಚ್ಚಾಗಿ ತಿನ್ನಲು ಹೇಳುತ್ತಾರೆ ಆಹಾರ ಪಂಡಿತರು. ವಾರಕ್ಕೆ ಮೂರು ಸಲವಾದರೂ ಮೀನು ತಿನ್ನಬೇಕಂತೆ.
3. ಬೀನ್ಸ್ ಭರ್ಜರಿಯಾಗಿ ತಿನ್ನಿ.!
ಬೀನ್ಸ್ (Beans) ಲಾಭವೆಂದರೆ ಇದರಲ್ಲಿ ಫ್ಯಾಟ್ ಕಡಿಮೆ ಇರುತ್ತದೆ, ಆದರೆ ಪ್ರೊಟೀನ್ (Protein) ಮತ್ತು ಫೈಬರ್ (Fiber) ಬೇಕಾದಷ್ಟು ಸಿಗುತ್ತದೆ. ಇದರ ಇನ್ನೊಂದು ಪ್ರಯೋಜನವೆಂದರೆ ಸ್ತನ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಮಹಿಳೆಯರು ಬೀನ್ಸ್ ನ್ನು ಹೆಚ್ಚು ಹೆಚ್ಚಾಗಿ ತಿನ್ನಬೇಕು ಎಂದು ಆರೋಗ್ಯ ಪಂಡಿತರು ಸಲಹೆ ನೀಡುತ್ತಾರೆ. ಯಾಕೆಂದರೆ, ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಜೊತೆಗೆ ಮೊನೊಪಾಸ್ ಗೆ ಕಾರಣವಾಗುವ ಹಾರ್ಮೋನುಗಳಲ್ಲಿ ಸ್ಥಿರತೆಯನ್ನು ತರುತ್ತದೆ.
ಇದನ್ನೂ ಓದಿ : ಮಕ್ಕಳಿಗೆ ಈ 5 ಆಹಾರಗಳನ್ನು ತಿನ್ನಿಸಿ, ಮೆದುಳು ಕಂಪ್ಯೂಟರಿಗಿಂತ ಶಾರ್ಪ್ ಆಗುತ್ತೆ..!
4. ಹಾಲು ಮತ್ತು ಕಿತ್ತಳೆ ರಸ:
ನಿಮಗೆ ಗೊತ್ತಿರಬಹುದು. ತುಂಬಾ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ ಕಂಡು ಬರುತ್ತದೆ. ಹಾಲು (Milk)ಮತ್ತು ಕಿತ್ತಳೆ ರಸದಲ್ಲಿ (Orange Juice) ನಿಮಗೆ ವಿಟಮಿನ್ ಡಿ ಸಮೃದ್ದಿಯಾಗಿ ಸಿಗುತ್ತದೆ. ವಿಟಮಿನ್ ಡಿ (Vitamin D) ಮೂಳೆಗಳ ಬೆಳವಣಿಗೆಗೆ ತುಂಬಾ ಒಳ್ಳೆಯದು. ಜೊತೆಗೆ ಸ್ತನ, ಹೊಟ್ಟೆ ಮತ್ತು ಅಂಡಾಶಯದಲ್ಲಿ ಗೆಡ್ಡೆ ಬೆಳೆಯುವುದನ್ನು ತಪ್ಪಿಸುತ್ತದೆ.
5. ಟೊಮ್ಯಾಟೋ :
ಪೋಷಕಾಂಶಗಳ ಸಮೃದ್ದತೆಯ ವಿಚಾರದಲ್ಲಿ ಟೊಮ್ಯಾಟೋವನ್ನು (Tomato) ಪವರ್ ಹೌಸ್ ಎನ್ನುತ್ತಾರೆ. ಯಾಕೆಂದರೆ ಇದರಲ್ಲಿ ಲೈಕೋಪಿನ್ ಎಂಬ ಪೋಷಕಾಂಶ ಹೇರಳವಾಗಿ ಸಿಗುತ್ತದೆ. ಪರಿಣಿತರ ಪ್ರಕಾರ ಲೈಕೋಪಿನ್ ಸ್ತನಕ್ಯಾನ್ಸರ್ ಬಾರದಂತೆ ತಡೆಯುತ್ತದೆ. ಇಷ್ಟೇ ಅಲ್ಲ ಇದೊಂದು ಉತ್ತಮ ಅಂಟಿಅಕ್ಸಿಡೆಂಟ್ ಕೂಡಾ. ಇದು ಮಹಿಳೆಯರಲ್ಲಿ ಹೃದ್ರೋಗದ ವಿರುದ್ಧ ಹೋರಾಡುತ್ತದೆ. ಇನ್ನೊಂದು ವಿಶೇಷವೆಂದರೆ ಟೊಮ್ಯಾಟೋ ಹೆಚ್ಚು ತಿಂದರೆ ನಿಮಗೆ ವಯಸ್ಸಾಗಿದ್ದು ನಿಮ್ಮ ಮುಖದಲ್ಲಿ ಗೊತ್ತಾಗಲ್ಲ. ಅಂದರೆ ಏಜಿಂಗ್ ಸಮಸ್ಯೆಯನ್ನು ತಪ್ಪಿಸುತ್ತದೆ.
ಇದನ್ನೂ ಓದಿ : Face fat ; ಯಂಗ್ ಆಗಿ ಕಾಣಬೇಕಾ..? ನಿಮ್ಮ ಮುದ್ದಿನ ಮುಖಕ್ಕೂ ಸ್ವಲ್ಪ ಟೈಂ ಕೊಡಿ..! ಫಿಟ್ ಇಡಿ
6. ಬೆರಿ ಹಣ್ಣು ಅಥವಾ ನೇರಳೆ :
ನೇರಳೆ, ಸ್ಟ್ರಾಬೆರಿ ಮುಂತಾದ ಬೆರಿ ಪ್ರಬೇಧದ ಹಣ್ಣುಗಳಲ್ಲಿ (Berry Fruits) ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲ ಪೋಷಕಾಂಶಗಳು ಬೇಕಾದಷ್ಟಿರುತ್ತವೆ. ಸ್ತನ ಕ್ಯಾನ್ಸರ್ ಮತ್ತು ಉದರ ಕ್ಯಾನ್ಸರ್ ಗೆ ಇದು ರಾಮಬಾಣ. ಬೆರಿ ಹಣ್ಣುಗಳಲ್ಲಿ ವಿಟಮಿನ್ ಸಿ (Vitamin C), ಪಾಲಿಕ್ ಆಮ್ಲ ಸಮೃದ್ಧವಾಗಿರುತ್ತದೆ. ಹಾಗಾಗಿ ಗರ್ಭಿಣಿಯರಿಗೆ ಇದು ಅತ್ಯುತ್ತಮ ಫುಡ್. ಮಹಿಳೆಯರಲ್ಲಿ ಯೂರಿನರಿ ಟ್ರ್ಯಾಕ್ಟ್ (Urinary Tract) ಸೊಂಕಿನಿಂದ ರಕ್ಷಿಸುತ್ತದೆ. ಮತ್ತೊಂದು ವಿಶೇಷವೆಂದರೆ ಬೆರಿ ಹಣ್ಣುಗಳನ್ನು ತಿಂದರೆ ಮುಪ್ಪು ಬೇಗ ಆವರಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.