Fitness Tips: ಫಿಟ್ ಆಗಿರಬೇಕೆ? ಹಾಗಿದ್ದರೆ ನಿಮ್ಮ ಈ ತಪ್ಪುಗಳನ್ನು ಇಂದಿನಿಂದಲೇ ಸರಿಪಡಿಸಿಕೊಳ್ಳಿ

Fitness Tips:  ಫಿಟ್ ಆಗಿರಲು ಯಾರು ತಾನೇ ಇಷ್ಟಪಡುವುದಿಲ್ಲ, ಆದರೆ ಕೆಲವೊಮ್ಮೆ ನಾವು ನಮಗರಿವಿಲ್ಲದೆಯೇ ಮಾಡುವ ಕೆಲವು ತಪ್ಪುಗಳಿಂದಾಗಿ ನಮ್ಮ ಕಠಿಣ ಪರಿಶ್ರಮವು ಫಲ ನೀಡುವುದಿಲ್ಲ. ಹೌದು, ನಮ್ಮ ಜೀವನದಲ್ಲಿ ಸರಿಯಾದ ಆಹಾರ ಪದ್ಧತಿ, ವ್ಯಾಯಾಮ ಸೇರಿದಂತೆ ಎಲ್ಲವನ್ನೂ ಅಳವಡಿಸಿಕೊಂಡರೂ ಸಹ ಫಿಟ್ ಆಗಿರುವುದಿಲ್ಲ. ಇದಕ್ಕೆ ನಮ್ಮ ಕೆಲವು ತಪ್ಪುಗಳೇ ಕಾರಣ.

Written by - Yashaswini V | Last Updated : Jan 4, 2022, 10:12 AM IST
  • ಮನಸ್ಸಿಲ್ಲದೆ ವ್ಯಾಯಾಮ ಮಾಡಬೇಡಿ
  • ಉತ್ತಮ ಆಹಾರ ಅತ್ಯಗತ್ಯ
  • ಫಿಟ್ ಆಗಿರಬೇಕಿದ್ದರೆ ಈ ಮೂರು ತಪ್ಪುಗಳನ್ನು ಮಾಡಬೇಡಿ
Fitness Tips: ಫಿಟ್ ಆಗಿರಬೇಕೆ? ಹಾಗಿದ್ದರೆ ನಿಮ್ಮ ಈ ತಪ್ಪುಗಳನ್ನು ಇಂದಿನಿಂದಲೇ ಸರಿಪಡಿಸಿಕೊಳ್ಳಿ title=
Fitness Tips

Fitness Tips: ಕೊರೊನಾ ವೈರಸ್‌ನ ಹೊಸ ರೂಪಾಂತರದಿಂದ ಎಲ್ಲರೂ ತೊಂದರೆಗೀಡಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನಜೀವನ ನಿರಂತರವಾಗಿ ದುಸ್ತರವಾಗುತ್ತಿದೆ. ಹೆಚ್ಚುತ್ತಿರುವ ಸಾಂಕ್ರಾಮಿಕ ಭೀತಿಯ ಅವಧಿಯಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಿನ ಸಂಗತಿಯಾಗಿದೆ. ಆದರೆ, ದಿನಚರಿಯಲ್ಲಿ ಸಣ್ಣಪುಟ್ಟ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ದೇಹವನ್ನು ಒಳಗಿನಿಂದ ಫಿಟ್ ಮಾಡಿಕೊಳ್ಳಬಹುದು. ಉತ್ತಮ ಆಹಾರದ ಜೊತೆಗೆ ವ್ಯಾಯಾಮದ ಮೂಲಕ ನಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬಹುದು. ಆದರೆ ಕೆಲವೊಮ್ಮೆ ಈ ಸಮಯದಲ್ಲಿ ನಾವು ಇಂತಹ ಸಣ್ಣ ತಪ್ಪುಗಳನ್ನು ಮಾಡುತ್ತೇವೆ, ಅದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಆಹಾರ ಮತ್ತು ವ್ಯಾಯಾಮದ ಸಮಯದಲ್ಲಿ ನಾವು ನಮಗರಿವಿಲ್ಲದೆಯೇ ಮಾಡುವಂತಹ ಕೆಲವು ಸಣ್ಣ ಮತ್ತು ಪ್ರಮುಖ ತಪ್ಪುಗಳ ಬಗ್ಗೆ ನಿಗಾವಹಿಸುವುದು ಅತ್ಯಗತ್ಯ. 

ಪೌಷ್ಟಿಕಾಂಶವಿಲ್ಲದೆ ಏನನ್ನೂ ತಿನ್ನಬೇಡಿ:
ಮೊದಲನೆಯದಾಗಿ, ಪೌಷ್ಠಿಕಾಂಶವಿಲ್ಲದೆ ಏನನ್ನೂ ತಿನ್ನಬೇಡಿ. ವರದಿಯ ಪ್ರಕಾರ, ಹಿಂದಿನ ಜನರು ತಮ್ಮ ಆಹಾರದಲ್ಲಿ (Diet) ತುಪ್ಪವನ್ನು ಸೇರಿಸುತ್ತಿರಲಿಲ್ಲ, ಆದರೆ ಈಗ ಜನರು ಕಾಫಿಯ ಮೇಲೂ ತುಪ್ಪವನ್ನು ಹಾಕಿ ಸವಿಯುತ್ತಾರೆ. ಅದೇ ರೀತಿ ಹಿಂದಿನವರು ರೊಟ್ಟಿಗೆ ತುಪ್ಪ ಹಾಕುತ್ತಿರಲಿಲ್ಲ. ಈಗ ಜನ ತುಪ್ಪ ಇಲ್ಲದೆ ರೊಟ್ಟಿಯನ್ನೂ ತಿನ್ನುವುದಿಲ್ಲ. ಅಂದರೆ ಆಹಾರಕ್ಕೆ ಸಂಬಂಧಿಸಿದ ಈ ಟ್ರೆಂಡ್ ಗಳು ಬರುತ್ತಲೇ ಇರುತ್ತವೆ. ಕಾಲಕ್ಕೆ ತಕ್ಕಂತೆ ಬದಲಾಗುವ ವಿಷಯಗಳಲ್ಲಿ ಸತ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಾವು ನಮ್ಮ ಪೋಷಣೆಗೆ ಗಮನ ಕೊಡಬೇಕು. ನಮ್ಮ ಆಹಾರದಲ್ಲಿ ಯಾವಾಗಲೂ ಸಾಂಪ್ರದಾಯಿಕ ಆಹಾರಗಳಾದ ರಾಗಿ-ಬೆಣ್ಣೆ, ತುಪ್ಪ-ರೊಟ್ಟಿ ಮತ್ತು ಅನ್ನವನ್ನು ಸೇರಿಸಿಕೊಳ್ಳಬೇಕು.

ಇದನ್ನೂ ಓದಿ- ನಿಮಗೆ ದಪ್ಪ, ಉದ್ದ ಕೂದಲು ಬೇಕೆ? ಹಾಗಿದ್ರೆ, ಈ ಟಿಪ್ಸ್ ಅನುಸರಿಸಿ!

ಮನಸ್ಸಿಲ್ಲದೆ ವ್ಯಾಯಾಮ ಮಾಡಬೇಡಿ:
ಎರಡನೆಯದಾಗಿ, ನಾವು ವ್ಯಾಯಾಮದ ಬಗ್ಗೆ ಹೇಳುವುದಾದರೆ, ಕೆಲವರು ಅದನ್ನು ಶಿಕ್ಷೆಯಾಗಿ ತೆಗೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಹೆಚ್ಚಿನ ಜನರು ತಮ್ಮ ಸ್ಥೂಲಕಾಯದ (Obesity) ಬಗ್ಗೆ ತುಂಬಾ ಚಿಂತಿತರಾಗುತ್ತಾರೆ, ಅವರು ಹೆಚ್ಚು ಹೆಚ್ಚು ವ್ಯಾಯಾಮವನ್ನು ಪ್ರಾರಂಭಿಸುತ್ತಾರೆ. ಅದಾಗ್ಯೂ, ಅವರು ತೂಕವನ್ನು ಕಳೆದುಕೊಳ್ಳುವುದಿಲ್ಲ. ವಾಸ್ತವವಾಗಿ, ನೀವು ಶಿಕ್ಷೆಯಾಗಿ ವ್ಯಾಯಾಮ ಮಾಡುವವರೆಗೆ, ನೀವು ಯಾವುದೇ ಫಲಿತಾಂಶವನ್ನು ಪಡೆಯುವುದಿಲ್ಲ. ವ್ಯಾಯಾಮವನ್ನು ಆನಂದಿಸಬೇಕು, ಆಗ ಮಾತ್ರ ನಿಮ್ಮ ತೂಕವನ್ನು ಕಡಿಮೆ ಮಾಡುವಲ್ಲಿ ನೀವು ಯಶಸ್ವಿಯಾಗಬಹುದು. 

ಇದನ್ನೂ ಓದಿ- Turmeric side Effects : ಇವರು ಅಪ್ಪತಪ್ಪಿ ಕೂಡ ಸೇವಿಸಬಾರದು 'ಅರಿಶಿನ ಪುಡಿ' : ಇದರಿಂದ ಆರೋಗ್ಯಕ್ಕೆ ತಪ್ಪಿದಲ್ಲ ಸಮಸ್ಯೆ 

ಮದುವೆಯ ನಂತರ ಹೆಂಡತಿಯನ್ನು ಪ್ರೇರೇಪಿಸಿ:
ಸಾಮಾನ್ಯವಾಗಿ ಮದುವೆಯ ನಂತರ ಪ್ರತಿಯೊಬ್ಬರ ಜೀವನವೂ ಬದಲಾಗುತ್ತದೆ, ಆದರೆ ಮಹಿಳೆಯರ ಜೀವನವು ಬಹುತೇಕ ಬದಲಾಗುತ್ತದೆ. ಹೊಸ ಸಂಸಾರ, ಪತಿ, ಮನೆಯ ಜವಾಬ್ದಾರಿ ಸೇರಿದಂತೆ ಎಲ್ಲ ಕೆಲಸಗಳಲ್ಲಿ ಮಹಿಳೆ ನಿರತಳಾಗುತ್ತಾಳೆ. ಇದರೊಂದಿಗೆ ಆಕೆ ತನಗೆ ಸಮಯ ಕೊಡುವುದನ್ನೇ ಮರೆತುಬಿಡುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ಅದು ಆಕೆಯ ಮೇಲೆ ಒಂದು ರೀತಿಯ ನಕಾರಾತ್ಮಕ ಪರಿಣಾಮ ಬೀರಲು ಆರಂಭಿಸುತ್ತದೆ. ಹಾಗಾಗಿ, ಮದುವೆಯ ನಂತರ ಪತಿಯು ತನ್ನ ಪತ್ನಿಯನ್ನು ಫಿಟ್ನೆಸ್ ಬಗ್ಗೆ ಗಮನಹರಿಸುವಂತೆ ಪ್ರೇರೇಪಿಸಬೇಕು. ಜೊತೆಗೆ ಪತಿ ತನ್ನ ಹೆಂಡತಿಯನ್ನು ವ್ಯಾಯಾಮ ಮಾಡಲು ಬೆಂಬಲಿಸುವುದು ಅವಶ್ಯಕ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News