ಮುಂಜಾನೆ ಬ್ಲಡ್ ಶುಗರ್ ಹೆಚ್ಚಾಗಿರುವುದಕ್ಕೆ ಮುಖ್ಯ ಮೂರು ಕಾರಣಗಳು !

Blood Sugar  rise In The Morning : ದೇಹದಲ್ಲಿ ಮುಂಜಾನೆ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ.ಇದು ನಮ್ಮ ದೇಹದಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿದೆ. ಬೆಳಗ್ಗಿನ ಹೊತ್ತಿನಲ್ಲಿಯೇ ಬ್ಲಡ್ ಶುಗರ್ ಹೆಚ್ಚಾಗುವುದರ ಹಿಂದೆಯೂ ಕಾರಣವಿದೆ. 

Written by - Ranjitha R K | Last Updated : Apr 16, 2024, 05:37 PM IST
  • ಬೆಳಿಗ್ಗಿನ ರಕ್ತ ಪರೀಕ್ಷೆಯನ್ನೇ ಮಾಡಿಸುವಂತೆ ಹೇಳಲಾಗುತ್ತದೆ.
  • ಬೆಳಗ್ಗಿನ ಪರೀಕ್ಷೆಯ ವರದಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.
  • ಬೆಳಗ್ಗಿನ ಹೊತ್ತಿನಲ್ಲಿಯೇ ಬ್ಲಡ್ ಶುಗರ್ ಹೆಚ್ಚಾಗುವುದರ ಹಿಂದೆಯೂ ಕಾರಣವಿದೆ
ಮುಂಜಾನೆ ಬ್ಲಡ್ ಶುಗರ್ ಹೆಚ್ಚಾಗಿರುವುದಕ್ಕೆ ಮುಖ್ಯ ಮೂರು ಕಾರಣಗಳು ! title=

Blood Sugar  rise In The Morning : ಮಧುಮೇಹ ರೋಗಿಗಳು ಶುಗರ್ ಟೆಸ್ಟ್ ಮಾಡಿಸಿಕೊಳ್ಳುವಾಗ ಬೆಳಿಗ್ಗಿನ ರಕ್ತ ಪರೀಕ್ಷೆಯನ್ನೇ ಮಾಡಿಸುವಂತೆ  ಹೇಳಲಾಗುತ್ತದೆ. ಯಾರದ್ದೇ ಆಗಲಿ ಶುಗರ್ ಟೆಸ್ಟ್ ಮಾಡಿಸುವಾಗ ಬೆಳಗ್ಗಿನ ಪರೀಕ್ಷೆಯ ವರದಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.ಈ ಪರೀಕ್ಷೆಗಳನ್ನು ಮಧ್ಯಾಹ್ನ, ಸಂಜೆ ಅಥವಾ ರಾತ್ರಿಯ ವೇಳೆಯಲ್ಲಿ ನಡೆಸುವಂತಿಲ್ಲ. ದೇಹದಲ್ಲಿ ಮುಂಜಾನೆ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ.ಇದು ನಮ್ಮ ದೇಹದಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿದೆ. ಬೆಳಗ್ಗಿನ ಹೊತ್ತಿನಲ್ಲಿಯೇ ಬ್ಲಡ್ ಶುಗರ್ ಹೆಚ್ಚಾಗುವುದರ ಹಿಂದೆಯೂ ಕಾರಣವಿದೆ. 

ದೇಹದಲ್ಲಿ ಕೆಲ ಬದಲಾವಣೆಗಳು ಸಂಭವಿಸುತ್ತವೆ : 
ನಮ್ಮ ದೇಹದಲ್ಲಿ ಬೆಳಿಗ್ಗೆ ಕೆಲವು ಹಾರ್ಮೋನುಗಳು ಬದಲಾಗುತ್ತವೆ.ಮಧುಮೇಹ ಇರಲಿ ಅಥವಾ ಇಲ್ಲದಿರಲಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಮಧುಮೇಹದಿಂದ ಬಳಲುತ್ತಿಲ್ಲವಾದಾಗ, ದೇಹವು ಅನೇಕ ವಿಷಯಗಳನ್ನು ಸಮತೋಲನಗೊಳಿಸಲು ಹೆಚ್ಚು ಇನ್ಸುಲಿನ್ ಅನ್ನು ಸ್ರವಿಸುತ್ತದೆ.ಆದರೆ, ಮಧುಮೇಹದಿಂದ ಬಳಲುತ್ತಿದ್ದರೆ ಎಷ್ಟೇ ಕಟ್ಟುನಿಟ್ಟಾದ ಡಯಟ್ ಚಾರ್ಟ್ ಅನ್ನು ಅನುಸರಿಸಿದರೂ,ರಾತ್ರಿಯ ಊಟ ಮತ್ತು ಉಪಹಾರದ ನಡುವೆ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.ಈ ರೋಗಿಗಳ ದೇಹದಲ್ಲಿ ಇನ್ಸುಲಿನ್ ಸಾಮಾನ್ಯವಾಗಿ ಕೆಲಸ ಮಾಡುವುದಿಲ್ಲ.ರಾತ್ರಿಯಲ್ಲಿ ಬಿಡುಗಡೆಯಾಗುವ ಎಪಿನ್‌ಫ್ರಿನ್, ಗ್ಲುಕಗನ್ ಮತ್ತು ಕಾರ್ಟಿಸೋಲ್‌ನಂತಹ ಬೆಳವಣಿಗೆಯ ಹಾರ್ಮೋನ್‌ಗಳು ನಿಮ್ಮ ದೇಹದ ಇನ್ಸುಲಿನ್ ಪ್ರತಿರೋಧವನ್ನು ಬಲಪಡಿಸುತ್ತದೆ.ಇದರಿಂದ ದೇಹದಲ್ಲಿ  ಸಕ್ಕರೆ ಮಟ್ಟ ಖಂಡಿತವಾಗಿಯೂ ಹೆಚ್ಚುತ್ತದೆ. 

ಇದನ್ನೂ ಓದಿ : ಈ ಆಹಾರವನ್ನು ಫ್ರಿಜ್ ನಲ್ಲಿಟ್ಟು ಬಿಸಿ ಮಾಡಿ ತಿಂದರೆ ವಿಷದಂತೆ ಕೆಲಸ ಮಾಡುತ್ತದೆ !

ಈ ಮೂರು ಕಾರಣಗಳಿಂದ ಬೆಳಿಗ್ಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಾಗುತ್ತದೆ : 
1. ಒಂದೋ ಔಷಧಿಯನ್ನು ಹೆಚ್ಚು ತೆಗೆದುಕೊಂಡಿರುತ್ತೀರಿ, ಇಲ್ಲ ಕಡಿಮೆ ಸೇವಿಸಿರುತ್ತೀರಿ.   
2. ರಾತ್ರಿಗೂ ಮುನ್ನ ದೇಹದಲ್ಲಿ ಸಾಕಷ್ಟು ಪ್ರಮಾಣದ ಇನ್ಸುಲಿನ್ ಕೊರತೆ.
3. ನೀವು ಮಲಗುವ ಮುನ್ನ ಕೆಲವು ಸಿಹಿ ಪದಾರ್ಥಗಳನ್ನು ಸೇವಿಸಿರಬಹುದು.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಹೇಗೆ? :  
ನಿಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದರೆ,ಅಸಡ್ಡೆ ಮಾಡಬೇಡಿ. ಇದರಿಂದ ಮೂತ್ರಪಿಂಡದ ಕಾಯಿಲೆ ಮತ್ತು ಹೃದಯಾಘಾತದಂತಹ ಅನೇಕ ಕಾಯಿಲೆಗಳ ಅಪಾಯ ಕೂಡಾ ಹೆಚ್ಚಾಗುತ್ತದೆ.ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನುವ  ಮಾಹಿತಿ ಕೂಡಾ ನಿಮಗಿರಬೇಕು. 

ಇದನ್ನೂ ಓದಿ : ಗ್ಯಾಸ್ಟ್ರಿಕ್, ಎದೆಯುರಿ ಸಮಸ್ಯೆಯಿಂದ ಪರಿಹಾರಕ್ಕಾಗಿ ಬೇಸಿಗೆಯಲ್ಲಿ ತಪ್ಪದೇ ಸೇವಿಸಿ ಈ 5 ತರಕಾರಿ

-ಸಂಜೆ ಲಘುವಾಗಿ ತಿನ್ನಿ. ರಾತ್ರಿ 8 ರಿಂದ 9 ಗಂಟೆಯೊಳಗೆ ಊಟ ಮಾಡಿ.
-ಊಟದ ನಂತರ ತಕ್ಷಣ ಮಲಗಬೇಡಿ, ಬದಲಿಗೆ ವಾಕ್ ಮಾಡಿ. 
-ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳಬೇಡಿ. ಯಾವ ಔಷಧಿಯು ಸಕ್ಕರೆಯನ್ನು ಹೆಚ್ಚಿಸುತ್ತದೆ ಎನ್ನುವ ಜ್ಞಾನ ನಮಗೆ ಇರುವುದಿಲ್ಲ. 
-ರಾತ್ರಿ ವೇಳೆ ಸಿಹಿ ತಿನ್ನದಿರಲು ಪ್ರಯತ್ನಿಸಿ. 
-ರಾತ್ರಿ ಮಲಗುವ ಮುನ್ನ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಯುಕ್ತ ತಿಂಡಿಗಳನ್ನು ಸೇವಿಸಿ.

(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News