Independence Day 2023: ಧಾರವಾಡದ ಮತ್ತೊಂದು ಸಂಸ್ಥೆಗೆ ಸಿಕ್ತು ರಾಷ್ಟ್ರಧ್ವಜ ತಯಾರಿಸುವ ಅವಕಾಶ

Independence Day 2023: ಧಾರವಾಡದ ಮತ್ತೊಂದು ಸಂಸ್ಥೆಗೆ ಇಡೀ ದೇಶಕ್ಕೆ ಖಾದಿಯ ರಾಷ್ಟ್ರಧ್ವಜ ತಯಾರಿಸಿ ಕೊಡುವ ಅವಕಾಶ ದೊರಕಿದೆ. 

Written by - Yashaswini V | Last Updated : Aug 11, 2023, 11:39 AM IST
  • ಇಡೀ ದೇಶಕ್ಕೆ ಖಾದಿಯ ರಾಷ್ಟ್ರಧ್ವಜ ತಯಾರಿಸಿ ಕೊಡುವ ಅವಕಾಶ ಧಾರವಾಡದ ಮತ್ತೊಂದು ಸಂಸ್ಥೆಗೆ
  • ಇಷ್ಟು ದಿನ ಬೆಂಗೇರಿಯ ಖಾದಿ ಸಂಘದಲ್ಲಿ ಮಾತ್ರ ತಯಾರಾಗುತ್ತಿದ್ದ ರಾಷ್ಟ್ರ ಧ್ವಜ
  • ಈಗ ಗರಗ ಕ್ಷೇತ್ರಿಯ ಸಂಘಕ್ಕೂ (ಖಾದಿ ಸಂಘ)ಕ್ಕೂ ಸಿಕ್ಕ ಅಧಿಕೃತ ಮಾನ್ಯತೆ
Independence Day 2023: ಧಾರವಾಡದ ಮತ್ತೊಂದು ಸಂಸ್ಥೆಗೆ ಸಿಕ್ತು ರಾಷ್ಟ್ರಧ್ವಜ ತಯಾರಿಸುವ ಅವಕಾಶ  title=

Independence Day 2023: ಭಾರತದ 76ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ  ಇಡೀ ದೇಶಕ್ಕೆ ಖಾದಿಯ ರಾಷ್ಟ್ರಧ್ವಜ ತಯಾರಿಸಿ ಕೊಡುವ ಅವಕಾಶ ಇದೀಗ ಧಾರವಾಡದ ಮತ್ತೊಂದು ಸಂಸ್ಥೆಗೂ ಲಭಿಸಿದೆ.  ಧಾರವಾಡ ಜಿಲ್ಲೆಯ ಗರಗ ಗ್ರಾಮದ ಗರಗ ಕ್ಷೇತ್ರೀಯ ಸೇವಾ ಸಂಘ ಇದೀಗ ಭಾರತದ ಖಾದಿ ರಾಷ್ಟ್ರಧ್ವಜ ತಯಾರಿಸಾಲು ಅಧಿಕೃತ ಮಾನ್ಯತೆಯನ್ನು ಪಡೆದಿದೆ. 

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಮಾನ್ಯತೆ ಪಡೆದಿರುವ ಗರಗ ಸೇವಾ ಸಂಘ 1974ರಿಂದ ರಾಷ್ಟ್ರ ಧ್ವಜಕ್ಕೆ ಬೇಕಾದ ಬಟ್ಟೆ ಮಾತ್ರ ತಯಾರಿಸಿ ಕೊಡುತ್ತಿತ್ತು. ಗರಗ ಸೇವಾ ಸಂಘ  ಇಷ್ಟು ದಿನಗಳ ಕಾಲ ರಾಷ್ಟ್ರಧ್ವಜಕ್ಕೆ ಬಟ್ಟೆ ನೇಯ್ದು, ಅಶೋಕ ಚಕ್ರದ ಬಣ್ಣ ಮತ್ತು ಮುದ್ರಣಕ್ಕಾಗಿ ಮುಂಬೈನ ಖಾದಿ ಡೈಯರ್‌ಗಳು ಮತ್ತು ಪ್ರಿಂಟರ್‌ಗಳಿಗೆ ಕಳುಹಿಸಿ ನಂತರ ಧ್ವಜಗಳನ್ನು ಮಾರಾಟ ಮಾಡುತ್ತಿತ್ತು. ಇದೀಗ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ಬಟ್ಟೆ ನೇಯ್ಗೆ ಮತ್ತು ಸ್ವಂತವಾಗಿ ಬಣ್ಣ ಮತ್ತು ಮುದ್ರಣ ಮಾಡಲು ಪರವಾನಗಿ ನೀಡಿದೆ. 

ಇದನ್ನೂ ಓದಿ- ವಿಜಯಪುರ ಜಿಲ್ಲೆಗೆ ಕಾಲಿಟ್ಟ ಮದ್ರಾಸ್ ಐ ಸೊಂಕು!

ಸಂಘವು ಭಾರತೀಯ ಗುಣಮಟ್ಟಗಳ ಬ್ಯೂರೋದಿಂದ ಗುರುತಿಸಲ್ಪಟ್ಟ ಧಾರವಾಡ ಜಿಲ್ಲೆಯ ಎರಡನೇ ಘಟಕವಾಗಿದೆ. ಇಷ್ಟು ದಿನ ಬೆಂಗೇರಿಯ ಖಾದಿ ಸಂಘದಲ್ಲಿ ಮಾತ್ರ ತಯಾರಾಗುತ್ತಿದ್ದ ರಾಷ್ಟ್ರ ಧ್ವಜ ಇನ್ನು ಮುಂದೆ  ಗರಗ ಕ್ಷೇತ್ರೀಯ ಸೇವಾ ಸಂಘ(ಖಾದಿ ಸಂಘ)ದಲ್ಲೂ ತಯಾರಾಗಲಿದೆ. 

ಇದನ್ನೂ ಓದಿ- ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಸಾವು ಪ್ರಕರಣ

ಕೇಂದ್ರ ಖಾದಿ ಆಯೋಗದ ಸೂಚನೆಯಂತೆ ಇಲ್ಲಿ ಸದ್ಯಕ್ಕೆ 2 ಅಡಿ x3 ಅಡಿ ಉದ್ದದ ಧ್ವಜಗಳನ್ನು ತಯಾರಿಸಲಿದ್ದು, ಮುಂದಿನ  ಜೂನ್‌ ವೇಳೆಗೆ 3x4.5 ಅಡಿ ಹಾಗೂ 4x6 ಅಡಿ ಉದ್ದದ ಧ್ವಜ ತಯಾರಿಸಲು ಪರವಾನಗಿ ಪಡೆಯಲಾಗುವುದು ಎಂದು ಸಂಘದ ಅಧ್ಯಕ್ಷ ಈಶ್ವರಪ್ಪ ಇಟಗಿ ಮಾಹಿತಿ ಹಂಚಿಕೊಂಡಿದ್ದಾರೆ. 

ಗರಗ ಕ್ಷೇತ್ರೀಯ ಸೇವಾ ಸಂಘವು 320 ಕಾರ್ಮಿಕರು ಮತ್ತು 15 ವಿದ್ಯುತ್ ಹೊಲಿಗೆ ಯಂತ್ರಗಳನ್ನು ಹೊಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News