ದಟ್ಟ ಮಂಜು: ಮುಜಾಫರಪುರದಲ್ಲಿ ವಾಹನಗಳ ಡಿಕ್ಕಿ, ಓರ್ವ ಸಾವು, 15 ಮಂದಿಗೆ ಗಾಯ

ಶುಕ್ರವಾರ ಬೆಳಿಗ್ಗೆ ಮುಜಫ‌ರಪುರ ರಾಷ್ಟ್ರೀಯ ಹೆದ್ದಾರಿ 28ರಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.   

Last Updated : Jan 4, 2019, 04:01 PM IST
ದಟ್ಟ ಮಂಜು: ಮುಜಾಫರಪುರದಲ್ಲಿ ವಾಹನಗಳ ಡಿಕ್ಕಿ, ಓರ್ವ ಸಾವು, 15 ಮಂದಿಗೆ ಗಾಯ title=
Pic: ANI

ಮುಜಾಫರಪುರ: ಬಿಹಾರದ ಮುಜಫ‌ರಪುರ ದಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ ರಸ್ತೆ ಕಾಣದೆ ಹಲವು ವಾಹನಗಳು ಒಂದರ ಹಿಂದೊಂದು ಗುದ್ದಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಮಡಿ ತೀವ್ರ ಗಾಯಗೊಂಡಿದ್ದಾರೆ. 

ಶುಕ್ರವಾರ ಬೆಳಿಗ್ಗೆ ಮುಜಫ‌ರಪುರ ರಾಷ್ಟ್ರೀಯ ಹೆದ್ದಾರಿ 28ರಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. 

ದೆಹಲಿಯ ಹೊರವಲಯದ ಖಂಜ್ವಾಲಾ-ಬವಾನ ರಸ್ತೆಯಲ್ಲಿ ಗುರುವಾರ ಮುಂಜಾನೆ ಇಂತಹದೇ ಘಟನೆ ನಡೆದು 25ಕ್ಕೂ ಹೆಚ್ಚು ವಾಹನಗಳು ಘರ್ಷಣೆಯಾಗಿ ಹಲವರು ಗಾಯಗೊಂಡಿದ್ದರು. 
 

Trending News