ಜೋಧ್ಪುರ: ರಾಜಸ್ಥಾನದ ಜೋಧ್‌ಪುರ-ಜೈಸಲ್ಮೇರ್ ರಸ್ತೆಯಲ್ಲಿ ಬೊಲೆರೊ ಕ್ಯಾಂಪರ್, ಮಿನಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ 13 ಮಂದಿ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ. ಈ ಅಪಘಾತದಲ್ಲಿ 8 ಜನರಿಗೆ ಗಂಭೀರ ಗಾಯಗಳಾಗಿವೆ.
ಕೂಡಲೇ ಸ್ಥಳಕ್ಕಾಗಮಿಸಿದ ಸಮೀಪದ ಗ್ರಾಮಸ್ಥರು ಗಾಯಾಳುಗಳನ್ನು ಜೋಧಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಪೋಲೀಸರು ಪರಿಶೀಲನೆ ನಡೆಸುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ.
Rajasthan: 13 people die in a collision between a bus and a camper vehicle on Jaisalmer - Jodhpur Road near Dhadhaniya village in Jodhpur. 8 injured have been referred to a hospital in Jodhpur. Police is present at the spot, investigation is underway. pic.twitter.com/byxjDlH2Hd
— ANI (@ANI) September 27, 2019
ಘಟನೆ ಬಗ್ಗೆ ಮಾಹಿತಿ ನೀಡಿರುವ ಬಾಲೇಶರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ದೇವೇಂದ್ರ ಅವರು, ಮಿನಿಬಸ್ ಟೈರ್ ಒಡೆದ ಪರಿಣಾಮ ನಿಯಂತ್ರಣ ಕಳೆದುಕೊಂಡು ಮಹೀಂದ್ರಾ ಬೊಲೆರೊ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, "ರಾಷ್ಟ್ರೀಯ ಹೆದ್ದಾರಿ 125 ರಲ್ಲಿ ಜೋಧ್‌ಪುರದ ಬಾಲೇಸರ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಲವರಿಗೆ ಪ್ರಾಣಹಾನಿಯಾಗಿದೇ. ಮೃತ ಕುಟುಂಬದವರಿಗೆ ನನ್ನ ಸಂತಾಪಗಳು. ಈ ನಷ್ಟವನ್ನು ಭರಿಸುವ ಶಕ್ತಿಯನ್ನು ಆ ದೇವರು ಅವರಿಗೆ ನೀಡಲಿ. ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಈ ಭಯಾನಕ ನಷ್ಟವನ್ನು ಭಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
Extremely pained by the loss of lives in a terrible road accident in Balesar, #Jodhpur on NH 125. My thoughts are with the bereaved families. May God give them strength to bear this terrible loss. Hope and pray those injured recover soon. #Rajasthan
— Ashok Gehlot (@ashokgehlot51) September 27, 2019