18 ಶಾಸಕರ ಅನರ್ಹ ಪ್ರಕರಣದ ತೀರ್ಪು ಇಂದು ಪ್ರಕಟ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಸಿಎಂ ಪಳನಿಸ್ವಾಮಿ ಬಣ ವಿಲೀನದ ಬಳಿಕ, ದಿನಕರನ್ ಜೊತೆ ಗುರುತಿಸಿಕೊಂಡಿದ್ದ 18 ಶಾಸಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.

Last Updated : Oct 25, 2018, 07:50 AM IST
18 ಶಾಸಕರ ಅನರ್ಹ ಪ್ರಕರಣದ ತೀರ್ಪು ಇಂದು ಪ್ರಕಟ title=
File Images

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಸಿಎಂ ಪಳನಿಸ್ವಾಮಿ ಬಣ ವಿಲೀನದ ಬಳಿಕ, ದಿನಕರನ್ ಜೊತೆ ಗುರುತಿಸಿಕೊಂಡಿದ್ದ ಎಐಎಡಿಎಂಕೆ ಪಕ್ಷದ 18 ಶಾಸಕರನ್ನು ಅನರ್ಹಗೊಳಿಸಿದ್ದ ಪ್ರಕರಣದ ತೀರ್ಪು ಇಂದು ಪ್ರಕಟಗೊಳ್ಳಲಿದ್ದು, 18 ಶಾಸಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.

1986ರ ಪಕ್ಷಾಂತರ ವಿರೋಧಿ ಕಾಯಿದೆಯ ನಿಯಮಗಳಡಿ ಸಭಾಧ್ಯಕ್ಷರು 2017, ಸೆಪ್ಟೆಂಬರ್ ತಿಂಗಳಲ್ಲಿ 18 ಶಾಸಕರನ್ನು ಅನರ್ಹಗೊಳಿಸಿದ್ದರು. ನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಎಂ. ಸುಂದರ್ ಅವರು ಭಿನ್ನ ನಿಲುವು ತಳೆದ ಕಾರಣ ಶಾಸಕತ್ವ ಅನರ್ಹತೆ ಕುರಿತಾದ ಕೇಸನ್ನು ಸುಪ್ರೀಂಕೋರ್ಟ್ ಗೆ ವರ್ಗಾಯಿಸಬೇಕೆಂದು ಕೋರಿ ಎಐಎಡಿಎಂಕೆ ಪಕ್ಷದ 18 ಶಾಸಕರು ಸುಪ್ರೀಂಕೋರ್ಟ್ ಮೊರೆಹೊಗಿದ್ದರು.

ನಂತರ ಸುಪ್ರೀಂಕೋರ್ಟ್ ಎಂ. ಸತ್ಯನಾರಾಯಣನ್ ಅವರನ್ನು ಮೂರನೇ ನ್ಯಾಯಮೂರ್ತಿಯನ್ನಾಗಿ ನೇಮಿಸಿತ್ತು. ಇಂದು ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸಲಿದ್ದು, ಮೂರನೇ ನ್ಯಾಯಮೂರ್ತಿಗಳ ತೀರ್ಪಿನ ಮೇಲೆ 18 ಶಾಸಕರ ಭವಿಷ್ಯ ನಿಂತಿದೆ.
 

Trending News