1992 Babri Masjid demolition case: ನನಗೆ ಗಲ್ಲುಶಿಕ್ಷೆ ವಿಧಿಸಿದರೂ ಕೂಡ ಅದು ಆಶೀರ್ವಾದವಿದ್ದಂತೆ- ಉಮಾ ಭಾರತಿ

1992 ರ ಬಾಬರಿ ಮಸೀದಿ ಉರುಳಿಸುವಿಕೆಯ ಪ್ರಕರಣದ ತೀರ್ಪು ಪರವಾಗಿರುತ್ತೋ ಇಲ್ಲವೋ ಎನ್ನುವುದು ಮುಖ್ಯವಲ್ಲ ಎಂದು ಬಿಜೆಪಿ ನಾಯಕಿ ಹೇಳಿದರು. ಈ ಪ್ರಕರಣದಲ್ಲಿ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಲಾಗಿರುವ ಬಿಜೆಪಿ ನಾಯಕರಲ್ಲಿ ಉಮಾ ಭಾರತಿ, ಎಲ್.ಕೆ.ಅಡ್ವಾಣಿ ಮತ್ತು ಮುರ್ಲಿ ಮನೋಹರ್ ಜೋಶಿ ಸೇರಿದ್ದಾರೆ.

Last Updated : Jul 25, 2020, 04:32 PM IST
1992 Babri Masjid demolition case: ನನಗೆ ಗಲ್ಲುಶಿಕ್ಷೆ ವಿಧಿಸಿದರೂ ಕೂಡ ಅದು ಆಶೀರ್ವಾದವಿದ್ದಂತೆ- ಉಮಾ ಭಾರತಿ  title=
file photo

ನವದೆಹಲಿ: 1992 ರ ಬಾಬರಿ ಮಸೀದಿ ಉರುಳಿಸುವಿಕೆಯ ಪ್ರಕರಣದ ತೀರ್ಪು ಪರವಾಗಿರುತ್ತೋ ಇಲ್ಲವೋ ಎನ್ನುವುದು ಮುಖ್ಯವಲ್ಲ ಎಂದು ಬಿಜೆಪಿ ನಾಯಕಿ ಹೇಳಿದರು. ಈ ಪ್ರಕರಣದಲ್ಲಿ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಲಾಗಿರುವ ಬಿಜೆಪಿ ನಾಯಕರಲ್ಲಿ ಉಮಾ ಭಾರತಿ, ಎಲ್.ಕೆ.ಅಡ್ವಾಣಿ ಮತ್ತು ಮುರ್ಲಿ ಮನೋಹರ್ ಜೋಶಿ ಸೇರಿದ್ದಾರೆ.

'ನನ್ನ ಹೇಳಿಕೆಗಾಗಿ ನನ್ನನ್ನು ನ್ಯಾಯಾಲಯ ಕರೆದಿದೆ ಮತ್ತು ನಿಜ ಏನು ಎಂದು ನಾನು ನ್ಯಾಯಾಲಯಕ್ಕೆ ಹೇಳಿದ್ದೇನೆ. ತೀರ್ಪು ಏನೆಂಬುದು ನನಗೆ ಅಪ್ರಸ್ತುತವಾಗುತ್ತದೆ. ನನ್ನನ್ನು ಗಲ್ಲು ಶಿಕ್ಷೆಗೆ ಕಳುಹಿಸಿದರೆ ನಾನು ಆಶೀರ್ವದಿಸಲ್ಪಡುತ್ತೇನೆ. ನಾನು ಜನಿಸಿದ ಸ್ಥಳ ಸಂತೋಷಪಡುತ್ತದೆ”ಎಂದು ಉಮಾ ಭಾರತಿ ತಿಳಿಸಿದರು. ಬಿಜೆಪಿ ನಾಯಕ ಈ ತಿಂಗಳ ಆರಂಭದಲ್ಲಿ ಲಕ್ನೋದಲ್ಲಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ (92) ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರೆ, ಮುರಳಿ ಮನೋಹರ್ ಜೋಶಿ ಅವರು ಗುರುವಾರ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಧ್ವನಿಮುದ್ರಣ ಮಾಡಿದ್ದಾರೆ.

ಕಳೆದ ವರ್ಷ, ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಹಿಂದೂ ಮತ್ತು ಮುಸ್ಲಿಮರು ಹಕ್ಕು ಸಾಧಿಸಿದ 2.77 ಎಕರೆ ಭೂಮಿಯನ್ನು ದೇವಾಲಯ ನಿರ್ಮಾಣಕ್ಕಾಗಿ ಸರ್ಕಾರ ನಡೆಸುವ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ತೀರ್ಪು ನೀಡಿತು. ಮುಸ್ಲಿಮರಿಗಾಗಿ ಅಯೋಧ್ಯೆಯ ಮತ್ತೊಂದು ಸ್ಥಳದಲ್ಲಿ ಐದು ಎಕರೆ ಜಾಗವನ್ನು ಉನ್ನತ ನ್ಯಾಯಾಲಯ ಘೋಷಿಸಿತ್ತು. ಸಿಬಿಐ ನ್ಯಾಯಾಲಯ, ದೈನಂದಿನ ವಿಚಾರಣೆಯ ಮೂಲಕ, ವಿಚಾರಣೆಯನ್ನು ಪೂರ್ಣಗೊಳಿಸಿ ಆಗಸ್ಟ್ 31 ರೊಳಗೆ ತನ್ನ ತೀರ್ಪನ್ನು ನೀಡಬೇಕಾಗುತ್ತದೆ.

 

Trending News