Year Ender 2019: ಪ್ರಧಾನಿ ಮೋದಿಯವರ 4 ವಿಭಿನ್ನ ಹೆಜ್ಜೆಗಳು!

2019 ರ ವರ್ಷವು ಒಂದರ್ಥದಲ್ಲಿ ರಾಜಕೀಯ ಕ್ರಾಂತಿಯ ವರ್ಷ. ಇದು ಲೋಕಸಭಾ ಚುನಾವಣಾ ವರ್ಷವಾಗಿತ್ತು, ಅಂತಹ ಪರಿಸ್ಥಿತಿಯಲ್ಲಿ, ಜನವರಿ ತಿಂಗಳಿನಿಂದ ಡಿಸೆಂಬರ್ ವರೆಗೆ ಅನೇಕ ರಾಜಕೀಯ ಘಟನೆಗಳು ಬರೀ ನಮ್ಮ ದೇಶದ ಮೇಲಲ್ಲ, ಜಗತ್ತಿನ ಮೇಲೆ ಪರಿಣಾಮ ಬೀರಿದವು. 2019 ರಲ್ಲಿ ಪಿಎಂ ನರೇಂದ್ರ ಮೋದಿ ಅವರು ಇಂತಹ ಅನೇಕ ಕೆಲಸಗಳನ್ನು ಮಾಡಿದ್ದಾರೆ.

Last Updated : Dec 28, 2019, 09:40 AM IST
Year Ender 2019: ಪ್ರಧಾನಿ ಮೋದಿಯವರ 4 ವಿಭಿನ್ನ ಹೆಜ್ಜೆಗಳು! title=

ನವದೆಹಲಿ: ಭಾರತದ ರಾಜಕೀಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ವ್ಯಕ್ತಿ ದೇಶದ ಪ್ರಧಾನಿ ನರೇಂದ್ರ ಮೋದಿ(Narendra Modi). ಈ ವರ್ಷ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ರಾಜಕಾರಣಿ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ. ಮೋದಿಯವರು ಗೇಮ್ ಚೇಂಜರ್ ಆಗಿ ಹೊರಹೊಮ್ಮಿದರು. ಅವರು ಐತಿಹಾಸಿಕ ಮತ್ತು ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಂಡರು ಮತ್ತು ಅವರು ತೋರಿಸಿದ ಅತ್ಯಂತ ಅದ್ಭುತ ಮತ್ತು ನಂಬಲಾಗದ ನಾಯಕತ್ವದ ಸಾಮರ್ಥ್ಯವನ್ನು ವರ್ಷದ ಆರಂಭದಿಂದ ಕೊನೆಯವರೆಗೆ ಚರ್ಚಿಸಲಾಯಿತು.

19 ರ ರಾಜಕೀಯದಲ್ಲಿ 'ಇಪ್ಪತ್ತು' ಸಾಬೀತುಪಡಿಸಿದವರು ಯಾರು?
ಈ ವರ್ಷ, ಜನರು ಪಿಎಂ ಮೋದಿಯವರನ್ನು ಪ್ರೇರಕರಾಗಿ ನೋಡಿದಾಗ, ಹುತಾತ್ಮರ ಬಗ್ಗೆ ಅವರ ಗೌರವವನ್ನು ನೋಡಿದ ದೇಶವೂ ಭಾವುಕತೆಯಿಂದ ಕೂಡಿತ್ತು. 2019ರ ಈ ವರ್ಷದಲ್ಲಿ ಯಾವುದೇ ರಾಜಕಾರಣಿಯ ಹೆಸರು ಹೆಚ್ಚು ಪ್ರಸಿದ್ಧವಾಗಿದ್ದರೆ ಅದು ನರೇಂದ್ರ ದಾಮೋದರ್ ದಾಸ್ ಮೋದಿ.

2019 ರ ಚುನಾವಣಾ ವರ್ಷವಾಗಿತ್ತು, ಏಪ್ರಿಲ್ ನಿಂದ ಮೇ ವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ವಿರೋಧಿಗಳನ್ನು ಸೋಲಿಸಿ ನರೇಂದ್ರ ಮೋದಿ ಮತ್ತೊಮ್ಮೆ ದೊಡ್ಡ ನಾಯಕರಾಗಿ ಹೊರಹೊಮ್ಮಿದರು. ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಭಾರಿ ಸಾರ್ವಜನಿಕ ಬೆಂಬಲ ಸಿಕ್ಕಿತು. ಆ ಕಾರಣದಿಂದಾಗಿ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತು.

ಸೆಪ್ಟೆಂಬರ್ 6, 2019
ಭಾರತ ಬಾಹ್ಯಾಕಾಶದಲ್ಲಿ ಇತಿಹಾಸವನ್ನು ಸೃಷ್ಟಿಸಿತು. ಮಿಷನ್ ಚಂದ್ರಯಾನ್ -2 ರಲ್ಲಿ 135 ಕೋಟಿ ಭಾರತೀಯರೊಂದಿಗೆ ಬೆಂಗಳೂರಿನ ಇಸ್ರೋ ನಿಯಂತ್ರಣ ಕೊಠಡಿಯ ಮೇಲೆ ಇಡೀ ಜಗತ್ತು ಕಣ್ಣಿಟ್ಟಿತ್ತು. ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ಪ್ರಧಾನಿ ಮೋದಿ ಅವರೇ ಇಸ್ರೋ ನಿಯಂತ್ರಣ ಕೊಠಡಿಯಲ್ಲಿ ಹಾಜರಿದ್ದರು. ಪಿಎಂ ಮೋದಿ ರಾತ್ರಿಯಿಡೀ ಎಚ್ಚರವಾಗಿರುತ್ತಿದ್ದರು ಮತ್ತು ಎಲ್ಲರಂತೆ ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಅವರೂ ಕೂಡ ಕಾತರರಾಗಿದ್ದರು. ಮಿಷನ್ ಯಶಸ್ವಿಯಾಗದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳನ್ನು ಪ್ರೋತ್ಸಾಹಿಸಿದರು.

ಮರುದಿನ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಇಸ್ರೋ ಪ್ರಧಾನ ಕಚೇರಿಯಿಂದ ಹೊರಬರಲು ಮುಂದಾದಾಗ ಇಸ್ರೋ ಅಧ್ಯಕ್ಷ ಕೆ.ಕೆ. ಶಿವನ್ ಕಣ್ತುಂಬಿ ಬಂದಿತು. ಈ ಸಂದರ್ಭದಲ್ಲಿ ತಬ್ಬಿಕೊಂಡು ಪಿಎಂ ಮೋದಿ ಶಿವನ್ ಅವರನ್ನು ಸಮಾಧಾನ ಪಡಿಸಿದರು. ವಿಜ್ಞಾನಿಗಳು ಎಂದಿಗೂ ವಿಫಲರಾಗುವುದಿಲ್ಲ ಎಂದು ಪ್ರಧಾನಿ ಅವರಲ್ಲಿ ವಿಶ್ವಾಸ ತುಂಬಿದರು.

ಫೆಬ್ರವರಿ 15, 2019
ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಸೈನಿಕರು ಸಾವನ್ನಪ್ಪಿದರು. ಇದರಿಂದಾಗಿ ಇಡೀ ದೇಶ ದುಃಖದಲ್ಲಿ ಮುಳುಗಿತ್ತು. ಹುತಾತ್ಮ ಯೋಧರ ಪಾರ್ಥೀವ ಶರೀರವನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ತಂದಾಗ ಪಿಎಂ ಮೋದಿ ಅವರೇ ಅಲ್ಲಿದ್ದರು. ಅವರು ಹುತಾತ್ಮರನ್ನು ಪ್ರದಕ್ಷಿಣೆ ಹಾಕಿ ಅವರಿಗೆ ಗೌರವ ಸಲ್ಲಿಸಿದರು. ಈ ಸಮಯದಲ್ಲಿ, ಅವರು ತಮ್ಮ ಎರಡೂ ಕೈಗಳನ್ನು ಕಟ್ಟಿದ್ದರು. ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಪಿಎಂ ಮೋದಿ, ದಾಳಿಯ ಅಪರಾಧಿಗಳಿಗೆ ಖಂಡಿತವಾಗಿಯೂ ಶಿಕ್ಷೆಯಾಗುತ್ತದೆ ಎಂದು ಹೇಳಿದರು. ಸೈನಿಕರ ಪ್ರತಿ ಹನಿ ರಕ್ತಕ್ಕೂ ನಾವು ಸೇಡು ತೀರಿಸಿಕೊಳ್ಳುತ್ತೇವೆ ಎಂದಿದ್ದರು. ಅದರಂತೆ ಭಯೋತ್ಪಾದಕರ ಶಿಬಿರ ಬಾಲಕೋಟ್ ಮೇಲೆ ದಾಳಿ ನಡೆಸುವ ಮೂಲಕ ಪ್ರಧಾನಿ ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ.

ದೇಶದ ಹಿತದೃಷ್ಟಿಯಿಂದ ಕಾಶ್ಮೀರದ ಕುರಿತ ಕ್ರಾಂತಿಕಾರಿ ನಿರ್ಧಾರ:
ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಮೊದಲ ಅವಧಿಯ ಪ್ರಮುಖ ಕಾರ್ಯಸೂಚಿಯಿಂದ 370 ನೇ ವಿಧಿಯನ್ನು ತೆಗೆದುಹಾಕುವ ಮೂಲಕ  ಪ್ರಧಾನಿ ನರೇಂದ್ರ ಮೋದಿ ಈ ವರ್ಷ ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ. 5 ಆಗಸ್ಟ್ 2019 ರಂದು ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಇದು ಮಾತ್ರವಲ್ಲ, ಎಲ್ಲಾ ಟೀಕೆಗಳ ಹೊರತಾಗಿಯೂ, ಅವರು ಕಾಶ್ಮೀರವನ್ನು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದಿಂದ ಮುಕ್ತಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. 370 ನೇ ವಿಧಿಯನ್ನು ಏಕೆ ತೆಗೆದುಹಾಕಬೇಕು ಎಂದು ಅವರು ಸ್ವತಃ ರಾಷ್ಟ್ರಕ್ಕೆ ವಿವರಿಸಿದರು.

ಭಾರತದ ಅತ್ಯಂತ 'ಉದಾರವಾದಿ' ಪ್ರಧಾನಿ
ಡಿಸೆಂಬರ್ 26ರಂದು ವರ್ಷದ ಕೊನೆಯ ಸೂರ್ಯಗ್ರಹಣವಿತ್ತು. ಪಿಎಂ ಮೋದಿ ಅವರು ಸೂರ್ಯಗ್ರಹಣವನ್ನು ವೀಕ್ಷಿಸುತ್ತಿರುವ ತಮ್ಮ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್ ಬಳಕೆದಾರರು ತಮ್ಮ ಫೋಟೋದಲ್ಲಿ ಈಗ ಮಿಮ್ ರಚನೆಯಾಗಲಿದೆ ಎಂದು ಬರೆದಿದ್ದಾರೆ.

Trending News