7ನೇ ವೇತನ ಆಯೋಗ: ಕೇಂದ್ರ ಸರ್ಕಾರದ ಈ ನೌಕರರಿಗೆ ವಿಶೇಷ ಭತ್ಯೆ ಹೆಚ್ಚಳ!

ಸರ್ಕಾರಿ ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುವ ನೂರಾರು ಸಿಹಿತಿಂಡಿ ತಯಾರಕರು ಮತ್ತು ಸಹಾಯಕ ಸಿಹಿತಿಂಡಿ ತಯಾರಕರಿಗೆ 7 ನೇ ವೇತನ ಆಯೋಗದ ಶಿಫಾರಸಿನಂತೆ 1,000 ರೂ.ಗಳ ಅಡುಗೆ ಭತ್ಯೆ ನೀಡಲು ಸರ್ಕಾರ ನಿರ್ಧರಿಸಿದೆ. 

Updated: Oct 4, 2019 , 08:12 AM IST
7ನೇ ವೇತನ ಆಯೋಗ: ಕೇಂದ್ರ ಸರ್ಕಾರದ ಈ ನೌಕರರಿಗೆ ವಿಶೇಷ ಭತ್ಯೆ ಹೆಚ್ಚಳ!

ನವದೆಹಲಿ: ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳಿಗೂ ಮುನ್ನ, ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ವಿಶೇಷ ಉಡುಗೊರೆ ನೀಡಿದೆ. 

ಸರ್ಕಾರಿ ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುವ ನೂರಾರು ಸಿಹಿತಿಂಡಿ ತಯಾರಕರು ಮತ್ತು ಸಹಾಯಕ ಸಿಹಿತಿಂಡಿ ತಯಾರಕರಿಗೆ 7 ನೇ ವೇತನ ಆಯೋಗದ ಶಿಫಾರಸಿನಂತೆ 1,000 ರೂ.ಗಳ ಅಡುಗೆ ಭತ್ಯೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಹೆಚ್ಚಳವು ಅಕ್ಟೋಬರ್ 1, 2019 ರಿಂದ ಜಾರಿಯಾಗಿದ್ದು, ಸರ್ಕಾರ ಈಗಾಗಲೇ ತನ್ನ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶದ ಪ್ರಕಾರ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಶಾಸನಬದ್ಧವಲ್ಲದ ವಿಭಾಗೀಯ ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುವ ನೂರಾರು ಸಹಾಯಕ ಅಡುಗೆಯವರಿಗೆ ಅಪಾಯ ಭತ್ಯೆ ನೀಡಬೇಕು. ಅದರಂತೆ 7ನೇ ವೇತನ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರದ ಈ ಉದ್ಯೋಗಿಗಳು 1 ಜನವರಿ 2016 ರಿಂದ ಇದರ ಲಾಭವನ್ನು ಪಡೆಯುತ್ತಿದ್ದಾರೆ.

ಇದೇ ವೇಳೆ ಮಾತನಾಡಿರುವ ಎಜಿ ಆಫೀಸ್ ಬ್ರದರ್‌ಹುಡ್ ಪ್ರಯಾಗರಾಜ್‌ನ ಮಾಜಿ ಅಧ್ಯಕ್ಷ ಹರಿಶಂಕರ್ ತಿವಾರಿ, ಆಯೋಗವು ಮೂಲ ವೇತನವನ್ನು ಅನೇಕ ಪಟ್ಟು ಹೆಚ್ಚಿಸಿದೆ. ಹಾಗಾಗಿ ಇತರ ಭತ್ಯೆಗಳನ್ನು ತೆಗೆದುಹಾಕಲಾಗಿದೆ ಎಂದಿದ್ದಾರೆ.

ಆದಾಗ್ಯೂ, ನಂತರ ಸರ್ಕಾರವು ನೌಕರರ ಬೇಡಿಕೆಯ ಮೇರೆಗೆ ಕೆಲವು ಭತ್ಯೆಗಳನ್ನು ಪುನರಾರಂಭಿಸಿದೆ. ಈ ಭತ್ಯೆಗಳನ್ನು ಬೋನಸ್ ಮತ್ತು ಇತರ ಪ್ರಯೋಜನಗಳ ರೂಪದಲ್ಲಿ ನೀಡಲಾಗುತ್ತಿದೆ. ಅದರಂತೆ ಸರ್ಕಾರ ಈಗ ನೀಡುತ್ತಿರುವ 1,000 ರೂ.ಗಳ ಅಡುಗೆ ಭತ್ಯೆ ಕೂಡ ಅಪಾಯಕ್ಕೆ ಸಂಬಂಧಿಸಿದ ಭತ್ಯೆಯಾಗಿದೆ ಎಂದು ಹರಿಶಂಕರ್ ತಿವಾರಿ ಹೇಳಿದರು.