ದೀದಿಗೆ ಬಿಗ್ ಶಾಕ್: ಅಮಿತ್​ ಶಾ ನೇತೃತ್ವದಲ್ಲಿ 9 ಜನ TMC ಶಾಸಕರು ಬಿಜೆಪಿಗೆ!

ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ಪಣ ತೊಟ್ಟಂತ ಕಾಣುತ್ತೆ ಬಿಜೆಪಿ!

Last Updated : Dec 20, 2020, 09:00 PM IST
  • ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ಪಣ ತೊಟ್ಟಂತ ಕಾಣುತ್ತೆ ಬಿಜೆಪಿ!
  • ಬಂಗಾಳಕ್ಕೆ ಎರಡು ದಿನಗಳ ಪ್ರವಾಸಕ್ಕೆ ತೆರಳಿರುವ ಅಮಿತ್​ ಶಾ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಪಕ್ಷಾಂತರದ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ
  • ಇಂದು ಅವರ ಜೊತೆಗೆ ಮತ್ತೆ ಐವರು ಟಿಎಂಸಿ ಶಾಸಕರು ಸೇರಿದಂತೆ 9 ಶಾಸಕರು ಬಿಜೆಪಿ ಪಾಲು
ದೀದಿಗೆ ಬಿಗ್ ಶಾಕ್: ಅಮಿತ್​ ಶಾ ನೇತೃತ್ವದಲ್ಲಿ 9 ಜನ TMC ಶಾಸಕರು ಬಿಜೆಪಿಗೆ! title=

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ಬಿಜೆಪಿ ಪಣ ತೊಟ್ಟಂತೆ ಕಾಣುತ್ತಿದೆ. ಕಳೆದ ತಿಂಗಳು ಬಂಗಾಳಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ ಕಾರ್ಯಕರ್ತರ ಸಭೆ ನಡೆಸಿ ಭೂತ್​ ಮಟ್ಟದಿಂದ ಪಕ್ಷವನ್ನು ಬಲಪಡಿಸುವಂತೆ ಕಿವಿಮಾತು ಹೇಳಿದ್ದರು. ಇನ್ನೂ ನಿನ್ನೆಯಿಂದ ಮತ್ತೆ ಬಂಗಾಳಕ್ಕೆ ಎರಡು ದಿನಗಳ ಪ್ರವಾಸಕ್ಕೆ ತೆರಳಿರುವ ಅಮಿತ್​ ಶಾ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಪಕ್ಷಾಂತರದ ಬಿರುಗಾಳಿಯನ್ನೇ ಎಬ್ಬಿಸುತ್ತಿದ್ದಾರೆ. ಆಡಳಿತರೂಢ ಪಕ್ಷ ಸಚಿವ ಸುವೆಂಧು ಅಧಿಕಾರಿ ಈ ಹಿಂದೆಯೇ ಬಿಜೆಪಿ(BJP)ಗೆ ಸೇರ್ಪಡೆಯಾಗುವುದು ಖಚಿತವಾಗಿತ್ತು. ಆದರೆ, ಇಂದು ಅವರ ಜೊತೆಗೆ ಮತ್ತೆ ಐವರು ಟಿಎಂಸಿ ಶಾಸಕರು ಸೇರಿದಂತೆ 9 ಶಾಸಕರು ಬಿಜೆಪಿ ಪಾಲಾಗಿದ್ದಾರೆ. ಈ ಬೆಳವಣಿಗೆ ಚುನಾವಣೆ ಮೇಲೆ ಭಾರೀ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

4 ರಾಜ್ಯಗಳಲ್ಲಿ ಪಕ್ಷದ ಮೇಜರ್ ಸರ್ಜರಿಗೆ ಮುಂದಾದ ಕಾಂಗ್ರೆಸ್ ಹೈಕಮಾಂಡ್

ಪ್ರಭಾವಿ ಮುಖಂಡ ಮತ್ತು ಮಾಜಿ ಸಚಿವ ಸುವೇಂದು ಅಧಿಕಾರಿ ಸೇರಿದಂತೆ, 2018ರಲ್ಲಿ ಸಿಪಿಎಂ ತೊರೆದು ಟಿಎಂಸಿ ಸೇರಿದ್ದ ಶಾಸಕಿ ದೀಪಾಲಿ ಬಿಸ್ವಾಸ್ ಮತ್ತು ‌ಸಿಪಿಎಂ, ಸಿಪಿಐ ಹಾಗೂ ಕಾಂಗ್ರೆಸ್‌ನ ತಲಾ ಒಬ್ಬ ಶಾಸಕರು ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಮೇದಿನಿಪುರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬರ್ಧಮಾನ್‌ ಪೂರ್ವ ಕ್ಷೇತ್ರದ ಟಿಎಂಸಿ ಸಂಸದ ಸುನಿಲ್‌ ಮಂಡಲ್‌ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

'ಇನ್ನು 6 ತಿಂಗಳು ಮಾಸ್ಕ್ ಕಡ್ಡಾಯ, ಲಾಕ್‌ಡೌನ್‌ ಇಲ್ಲ'

ಈ ಕುರಿತು ಮಾತನಾಡಿರುವ ಪಕ್ಷಾಂತರಗೊಂಡ ಸುವೆಂಧು ಅಧಿಕಾರಿ, "ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇರಬೇಕು ಎಂದು ನಾನು ಬಯಸುತ್ತೇನೆ. ಇಲ್ಲದೇ ಇದ್ದರೆ ಪಶ್ಚಿಮ ಬಂಗಾಳಕ್ಕೆ ಉಳಿಗಾಲವಿಲ್ಲ. ಇಲ್ಲಿನ ಅರ್ಥ ವ್ಯವಸ್ಥೆ ಮುರಿದುಬಿದ್ದಿದೆ. ಉದ್ಯೋಗ ಇಲ್ಲ, ಎಲ್ಲೆಡೆ ಭ್ರಷ್ಟಾಚಾರ ಇದೆ. ಈ ಎಲ್ಲದರಿಂದ ಹೊರಗೆ ಬರಲು ಇರುವ ಏಕೈಕ ದಾರಿಯೆಂದರೆ ರಾಜ್ಯವನ್ನು ಮೋದಿ ಕೈಗೆ ನೀಡುವುದು" ಎಂದಿದ್ದಾರೆ.

'ಇಡೀ ದೇಶವೇ ರೈತರ ಬೆಂಬಲಕ್ಕೆ ನಿಂತಿರುವಾಗ ನೀವೇಗೆ ದಾಳಿ ಮಾಡುತ್ತೀರಿ?'

 

 

Trending News