ಮಣ್ಣು ತಿನ್ನದೇ ಬದುಕಿರಲಾರ ಈ 99 ರ ವಯೋವೃದ್ದ!

   

Last Updated : Jan 19, 2018, 03:28 PM IST
ಮಣ್ಣು ತಿನ್ನದೇ ಬದುಕಿರಲಾರ ಈ 99 ರ ವಯೋವೃದ್ದ! title=
Photo Courtesy:ANI

ನವದೆಹಲಿ: ಜಾರ್ಖಂಡ್ ನ ಸಾಹೇಬಗಂಜ್ ಜಿಲ್ಲೆಯ ನಿವಾಸಿಯಾಗಿರುವ  ಕಾರು ಪಾಸ್ವಾನ್ ಪ್ರತಿದಿನ ಒಂದು ಕಿಲೋ ಮಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿದ್ದಾನೆ.

1919ರಲ್ಲಿ ಜನಿಸಿರುವ ಕಾರು ಪಾಸ್ವಾನ್  ತಾನು ಹನ್ನೊಂದು ವರ್ಷದವನಾಗಿದ್ದಾಗ ಮಣ್ಣನ್ನು ತಿನ್ನುವ ರೂಡಿಯನ್ನು ಬೆಳೆಸಿಕೊಂಡಿದ್ದಾನೆ ಎಂದ ಹೇಳಿಕೊಂಡಿರುವ ಅವನು ತನ್ನ ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟು ಈ ರೀತಿ ಅಭ್ಯಾಸಕ್ಕೆ ಅಂಟಿಕೊಂಡಿದ್ದಾನೆ ಎಂದು ಹೇಳಲಾಗಿದೆ. 

ಎಎನ್ಐಗೆ ಪ್ರತಿಕಯಿಸಿರುವ ಅವನು "ನನ್ನ 10 ಮಕ್ಕಳನ್ನು ಸಾಕಬೇಕಾದ ಅನಿವಾರ್ಯತೆಯಿಂದಾಗಿ ನನಗೆ ಸಾಯುವ ಹಾಗೆ ಆಗಿತ್ತು ಆದ್ದರಿಂದಾಗಿ ನಾನು ಈ ಮಣ್ಣನು ತಿನ್ನುವ ಅಭ್ಯಾಸವನ್ನು ರೂಡಿಮಾಡಿಕೊಂಡೆ ಎಂದರಲ್ಲದೆ ಈ ಇದನ್ನು ಬಿಡಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
 
ಕಾರು ಪಾಸ್ವಾನ್ ನ ಹಿರಿಯ ಮಗ ರಾಮ ಪಾಸ್ವಾನ್  ಹೇಳುವಂತೆ ಹಲವು ಸಾರಿ ನಮ್ಮ ತಂದೆಯವರಿಗೆ ಇದನ್ನು ಬಿಡಿಸಲು ಪ್ರಯತ್ನಪಟ್ಟರೂ ಸಹಿತ ಅವರು ನಮ್ಮನ್ನು ಕೇಳುತ್ತಿಲ್ಲ,ಅಲ್ಲಿ ಇಲ್ಲಿ ಸಿಗುವ ಮಣ್ಣಿನ ಹೆಂಟೆಯನ್ನು ತಿಂದು ಆರೋಗ್ಯವಾಗಿದ್ದಾರೆ ಎಂದರು. ಆಶ್ಚರ್ಯವೆಂದರೆ  ಈ ರೀತಿಯ ಅಭ್ಯಾಸಕ್ಕೆ ಸಾಬೌರ್ ಕೃಷಿ ವಿದ್ಯಾಲಯ 2015 ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.

 

Trending News