ಲಕ್ನೋ: ಮದುವೆಯಿಂದ ಹಿಂದಿರುಗುತ್ತಿದ್ದ ವೇಳೆ ಕಾಲುವೆಗೆ ಬಿದ್ದ ವಾಹನ, 6 ಮಕ್ಕಳು ಸತ್ತಿರುವ ಶಂಕೆ

ಲಖನೌದ ನಾಗರಂ ಪೊಲೀಸ್ ಠಾಣೆಯ ಪಟ್ವಾ ಖೇಡಾ ಗ್ರಾಮದ ಬಳಿಯ ಇಂದಿರಾ ಕಾಲುವೆಯಲ್ಲಿ ಈ ದೊಡ್ಡ ಅಪಘಾತ ಸಂಭವಿಸಿದೆ. ಪೊಲೀಸ್ ಪಡೆ ಮತ್ತು ಎನ್‌ಡಿಆರ್‌ಎಫ್ ತಂಡ ಘಟನಾ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

Last Updated : Jun 20, 2019, 10:07 AM IST
ಲಕ್ನೋ: ಮದುವೆಯಿಂದ ಹಿಂದಿರುಗುತ್ತಿದ್ದ ವೇಳೆ ಕಾಲುವೆಗೆ ಬಿದ್ದ ವಾಹನ, 6 ಮಕ್ಕಳು ಸತ್ತಿರುವ ಶಂಕೆ title=

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಇಂದಿರಾ ಕಾಲುವೆಯ ಬಳಿ ದೊಡ್ಡ ಅಪಘಾತ ಸಂಭವಿಸಿದೆ. ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದ ವೇಳೆ ವಾಹನ ಕೆರೆಗೆ ಬಿದ್ದಿದೆ. ಈ ಅವಧಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 29 ಜನರು ಇದ್ದರು ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಈ ಅಪಘಾತದಲ್ಲಿ ಕಾಲುವೆಯಲ್ಲಿ ಅರ್ಧ ಡಜನ್ ಮಕ್ಕಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಲಖನೌದ ನಾಗರಂ ಪೊಲೀಸ್ ಠಾಣೆಯ ಪಟ್ವಾ ಖೇಡಾ ಗ್ರಾಮದ ಬಳಿಯ ಇಂದಿರಾ ಕಾಲುವೆಯಲ್ಲಿ ಈ ದೊಡ್ಡ ಅಪಘಾತ ಸಂಭವಿಸಿದೆ. ಪೊಲೀಸ್ ಪಡೆ ಮತ್ತು ಎನ್‌ಡಿಆರ್‌ಎಫ್ ತಂಡ ಘಟನಾ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

ಇಲ್ಲಿಯವರೆಗೆ ಕಾಲುವೆಯಲ್ಲಿ ಅರ್ಧ ಡಜನ್ ಮಕ್ಕಳು ಕಾಣೆಯಾಗಿದ್ದಾರೆ. ಪೊಲೀಸ್ ಮತ್ತು ಎಸ್‌ಡಿಆರ್‌ಎಫ್ ತಂಡ ಮಕ್ಕಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಅಪಘಾತಕ್ಕೀಡಾದವರೆಲ್ಲರೂ ಬರಾಬಂಕಿಯ ಲೋನಿ ಕತ್ರ ಪೊಲೀಸ್ ಠಾಣೆಯ ಸರೈ ಪಾಂಡೆ ಗ್ರಾಮದ ನಿವಾಸಿಗಳು ಎಂದು ಹೇಳಲಾಗುತ್ತಿದೆ.

ಇಂದು ಮುಂಜಾನೆ ಈ ಅಪಘಾತ ಸಂಭವಿಸಿದ್ದು ವಾಹನದಲ್ಲಿದ್ದ ಎಲ್ಲಾ ಮಹಿಳೆಯರು ಮತ್ತು ಪುರುಷರು ಸೇರಿದಂತೆ 22 ಮಂದಿಯನ್ನು ರಕ್ಷಿಸಲಾಗಿದೆ, ಆದರೆ ಮಕ್ಕಳು ಮಾತ್ರ ಈವರೆಗೂ ಪತ್ತೆಯಾಗಿಲ್ಲ ಎನ್ನಲಾಗಿದೆ.
 

Trending News