"ನಾನು ಪಾರ್ವತಿ ಅವತಾರ ಶಿವನನ್ನು ಮದುವೆಯಾಗಲು ಬಂದಿರುವೆ" ಭಾರತ-ಚೀನಾ ಗಡಿಯಲ್ಲಿ ಮಹಿಳೆಯ ಹೈಡ್ರಾಮ!

ಪಿಟಿಐ ವರದಿ ಪ್ರಕಾರ, ನಿರ್ಬಂಧಿತ ಪ್ರದೇಶದಿಂದ ಹರ್ಮಿಂದರ್ ಕೌರ್ ಅವರನ್ನು ಹಿಂತಿರುಗಿ ಕರೆತರಲು ಹೋದ ಪೊಲೀಸ್ ತಂಡಕ್ಕೂ ನಿರಾಸೆಯಾಗಿದೆ. ತನ್ನನ್ನು ಕರೆದುಕೊಂಡು ಹೋಗುವಂತೆ ಒತ್ತಾಯಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ ಎಂದು ಪಿಥೋರಗಢ ಎಸ್‌ಪಿ ಲೋಕೇಂದ್ರ ಸಿಂಗ್ ಹೇಳಿದ್ದಾರೆ. ಇದೀಗ ಆಕೆಯನ್ನು ಕರೆತರಲೆಂದು ಪೊಲೀಸರು ದೊಡ್ಡ ತಂಡವನ್ನೇ ಕಳುಹಿಸಿದ್ದಾರೆ ಎನ್ನಲಾಗಿದೆ.  

Written by - Bhavishya Shetty | Last Updated : Jul 19, 2022, 08:51 AM IST
  • ನಾಭಿಧಾಂಗ್‌ನ ನಿರ್ಬಂಧಿತ ಪ್ರದೇಶದಲ್ಲಿ ಮಹಿಳೆಯೊಬ್ಬಳ ಹೈಡ್ರಾಮ
  • ನಾನು ಪಾರ್ವತಿ ಅವತಾರ, ಶಿವನನ್ನು ಮದುವೆಯಾಗುವುದಾಗಿ ಹೇಳಿಕೆ
  • ಅಲಿಗಂಜ್ ಪ್ರದೇಶದ ನಿವಾಸಿಯಾಗಿರುವ ಹರ್ಮಿಂದರ್‌ ಕೌರ್‌ ಎಂಬ ಮಹಿಳೆ
"ನಾನು ಪಾರ್ವತಿ ಅವತಾರ ಶಿವನನ್ನು ಮದುವೆಯಾಗಲು ಬಂದಿರುವೆ" ಭಾರತ-ಚೀನಾ ಗಡಿಯಲ್ಲಿ ಮಹಿಳೆಯ ಹೈಡ್ರಾಮ! title=
India China Border

ಭಾರತ ಚೀನಾ ಗಡಿಯ ಪಕ್ಕದಲ್ಲಿರುವ ನಾಭಿಧಾಂಗ್‌ನ ನಿರ್ಬಂಧಿತ ಪ್ರದೇಶದಲ್ಲಿ ಮಹಿಳೆಯೊಬ್ಬಳು ಹೈಡ್ರಾಮ ನಡೆಸಿದ್ದಾಳೆ. ಆಕೆಯನ್ನು ಅಲ್ಲಿಂದ ಕರೆತರಲು ಹೋದ ಪೊಲೀಸರಿಗೂ ಆಕೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಇಷ್ಟಕ್ಕೂ ಆ ಮಹಿಳೆ ಮಾಡಿದ್ದೇನು ಎಂದರೆ ನಿಮಗೆ ಶಾಕ್‌ ಆಗಬಹುದು. 

ಉತ್ತರ ಪ್ರದೇಶದ ಅಲಿಗಂಜ್ ಪ್ರದೇಶದ ನಿವಾಸಿಯಾಗಿರುವ ಹರ್ಮಿಂದರ್‌ ಕೌರ್‌ ಎಂಬ ಮಹಿಳೆ ಎಸ್‌ಡಿಎಂ ಧಾರ್ಚುಲಾ ನೀಡಿದ 15 ದಿನಗಳ ಅನುಮತಿಯ ಮೇರೆಗೆ ತನ್ನ ತಾಯಿಯ ಜೊತೆಗೆ ಭಾರತ-ಚೀನಾ ಗಡಿಯ ಪಕ್ಕದಲ್ಲಿರುವ ನಾಭಿಧಾಂಗ್‌ನ ನಿರ್ಬಂಧಿತ ಪ್ರದೇಶಕ್ಕೆ ತೆರಳಿದ್ದರು. ಆದರೆ ಅನುಮತಿಯ ಅವಧಿ ಮುಗಿದರೂ ಆಕೆ ಹಿಂತಿರುಗಲು ಒಪ್ಪುತ್ತಿಲ್ಲ. ಇದಕ್ಕೆ ಕಾರಣ ಆಕೆ ನೀಡುತ್ತಿರುವ ಹೇಳಿಕೆ. "ನಾನು ಪಾರ್ವತಿಯ ಅವತಾರ, ಕೈಲಾಸ ಪರ್ವತದ ಮೇಲೆ ವಾಸಿಸುವ ಶಿವನನ್ನು ಹೊರತಾಗಿ ನಾನು ಯಾರನ್ನೂ ವಿವಾಹವಾಗುವುದಿಲ್ಲ" ಎಂದು ಹೇಳುತ್ತಿದ್ದಾಳೆ. 

ಇದನ್ನೂ ಓದಿ: Gold Price Today : ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ಬೆಲೆ ?

ಪಿಟಿಐ ವರದಿ ಪ್ರಕಾರ, ನಿರ್ಬಂಧಿತ ಪ್ರದೇಶದಿಂದ ಹರ್ಮಿಂದರ್ ಕೌರ್ ಅವರನ್ನು ಹಿಂತಿರುಗಿ ಕರೆತರಲು ಹೋದ ಪೊಲೀಸ್ ತಂಡಕ್ಕೂ ನಿರಾಸೆಯಾಗಿದೆ. ತನ್ನನ್ನು ಕರೆದುಕೊಂಡು ಹೋಗುವಂತೆ ಒತ್ತಾಯಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ ಎಂದು ಪಿಥೋರಗಢ ಎಸ್‌ಪಿ ಲೋಕೇಂದ್ರ ಸಿಂಗ್ ಹೇಳಿದ್ದಾರೆ. ಇದೀಗ ಆಕೆಯನ್ನು ಕರೆತರಲೆಂದು ಪೊಲೀಸರು ದೊಡ್ಡ ತಂಡವನ್ನೇ ಕಳುಹಿಸಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದ ಅಲಿಗಂಜ್ ಪ್ರದೇಶದ ನಿವಾಸಿಯಾಗಿರುವ ಕೌರ್‌, ಎಸ್‌ಡಿಎಂ ಧಾರ್ಚುಲಾ ನೀಡಿದ 15 ದಿನಗಳ ಅನುಮತಿಯ ಮೇರೆಗೆ ತನ್ನ ತಾಯಿಯೊಂದಿಗೆ ಹೋಗಿದ್ದಳು. ಆದರೆ ಮೇ 25 ರಂದು ಅವರ ಅನುಮತಿ ಅವಧಿ ಮುಗಿದಿದೆ. ಆದರೂ ಸಹ ನಿರ್ಬಂಧಿತ ಪ್ರದೇಶವನ್ನು ತೊರೆಯಲು ಆಕೆ ನಿರಾಕರಿಸಿದ್ದು, ಇದೀಗ ಇಂತಹ ಹೇಳಿಕೆ ನೀಡುತ್ತಿದ್ದಾಳೆ ಎಂದು ಎಸ್‌ಪಿ ಹೇಳಿದರು.

ನಿರ್ಬಂಧಿತ ಪ್ರದೇಶದಿಂದ ಮಹಿಳೆಯನ್ನು ಕರೆತರಲು ಧಾರ್ಚುಲಾದಿಂದ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ ಮತ್ತು ಓರ್ವ ಇನ್ಸ್‌ಪೆಕ್ಟರ್‌ ಒಳಗೊಂಡ ಮೂರು ಸದಸ್ಯರ ಪೊಲೀಸ್ ತಂಡವನ್ನು ಕಳುಹಿಸಲಾಯಿತು. ಆದರೆ ಅವರು ಅವಳನ್ನು ಮರಳಿ ಕರೆತರುವಲ್ಲಿ ಯಶಸ್ವಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

"ನಾವು ಶುಕ್ರವಾರದಂದು ಮಹಿಳೆಯನ್ನು ಕರೆತರಲು ವೈದ್ಯಕೀಯ ಸಿಬ್ಬಂದಿ ಸೇರಿದಂತೆ 12 ಸದಸ್ಯರ ದೊಡ್ಡ ಪೊಲೀಸ್ ತಂಡವನ್ನು ಕಳುಹಿಸಲು ಯೋಜಿಸಿದ್ದೇವೆ" ಎಂದು ಹೇಳಿದರು.

ಇದನ್ನೂ ಓದಿ: Vegetable Price: ಹೇಗಿದೆ ಗೊತ್ತಾ ಈರುಳ್ಳಿ, ಟೊಮ್ಯಾಟೋ ಬೆಲೆ? ಇಲ್ಲಿದೆ ತರಕಾರಿ ದರದ ವಿವರ

ತಾನು ಪಾರ್ವತಿ ದೇವಿಯ ಅವತಾರವೆಂದೂ, ಶಿವನನ್ನು ಮದುವೆಯಾಗಲು ಬಂದಿರುವುದಾಗಿಯೂ ಹೇಳಿಕೊಂಡ ಮಹಿಳೆ ಮಾನಸಿಕವಾಗಿ ಅಸ್ಥಿರಳಾಗಿರಬಹುದು ಎಂದು ವರದಿಗಳು ಹೇಳುತ್ತಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News