Aadhaar Card : ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋ ಚೇಂಜ್ ಮಾಡಲು ಈ ಸುಲಭ ಮಾರ್ಗಗಳನ್ನ ಅನುಸರಿಸಿ!

ಸಧ್ಯ ಅದರಲ್ಲಿರುವ ಫೋಟೋ ಗುರುತಿಸಬಹುದಾದ ಫೋಟೋ ಇಲ್ಲದಿರುವುದು ಕೂಡ ಕೆಲವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಕಾರಣದಿಂದಾಗಿ ಕೆಲವು ವ್ಯಕ್ತಿಗಳಿಗೆ ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಚೇಂಜ್ ಮಾಡಲು ಆಗುವುದಿಲ್ಲ. ಇಂತಹ ಒಂದು ಇದು ಪ್ರಮುಖ ಮಾಹಿತಿ ನಿಮಗಾಗಿ..

Written by - Channabasava A Kashinakunti | Last Updated : Aug 19, 2021, 01:29 PM IST
  • ಆಧಾರ್ ಕಾರ್ಡ್ ಸಧ್ಯ ದೇಶದ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ
  • ಸರ್ಕಾರದ ಯೋಜನೆಗಳಿಗೆ ಮಾತ್ರವಲ್ಲ ಹಣಕಾಸು ಸೇವೆಗಳಿಗೂ ಆಧಾರ್ ಅಗತ್ಯ
  • ನಿಮ್ಮ ಆಧಾರ್ ಕಾರ್ಡ್ ಫೋಟೋ ನೀವು ಬದಲಾಯಿಸಬಹುದು
Aadhaar Card : ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋ ಚೇಂಜ್ ಮಾಡಲು ಈ ಸುಲಭ ಮಾರ್ಗಗಳನ್ನ ಅನುಸರಿಸಿ! title=

ನವದೆಹಲಿ : ಆಧಾರ್ ಕಾರ್ಡ್ ಸಧ್ಯ ದೇಶದ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರದ ಯೋಜನೆಗಳಿಗೆ ಮಾತ್ರವಲ್ಲ ಹಣಕಾಸು ಸೇವೆಗಳಿಗೂ ಆಧಾರ್ ಅಗತ್ಯವಿದೆ. ಇದು ಬ್ಯಾಂಕ್ ಖಾತೆಗಳು, ವಾಹನಗಳು ಮತ್ತು ವಿಮಾ ಪಾಲಿಸಿ ಹೀಗೆ ಇತ್ಯಾದಿಗಳೊಂದಿಗೆ ಲಿಂಕ್ ಮಾಡಲಾಗಿದೆ. ಆಧಾರ್ ಕಾರ್ಡ್ ವ್ಯಕ್ತಿಯ ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಮತ್ತು ಫೋಟೋ ವಿವರಗಳನ್ನು ಒಳಗೊಂಡಿದೆ.

ನಮ್ಮಲ್ಲಿ ಹೆಚ್ಚಿನವರು ತಮ್ಮ ಆಧಾರ್ ಕಾರ್ಡ್‌(Aadhar Card)ಗಾಗಿ ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರು, ಸಧ್ಯ ಅದರಲ್ಲಿರುವ ಫೋಟೋ ಗುರುತಿಸಬಹುದಾದ ಫೋಟೋ ಇಲ್ಲದಿರುವುದು ಕೂಡ ಕೆಲವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಕಾರಣದಿಂದಾಗಿ ಕೆಲವು ವ್ಯಕ್ತಿಗಳಿಗೆ ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಚೇಂಜ್ ಮಾಡಲು ಆಗುವುದಿಲ್ಲ. ಇಂತಹ ಒಂದು ಇದು ಪ್ರಮುಖ ಮಾಹಿತಿ ನಿಮಗಾಗಿ..

ಇದನ್ನೂ ಓದಿ : Watch CCTV Footage: ಚಲಿಸುತ್ತಿದ್ದ ರೈಲಿನಡಿ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ವ್ಯಕ್ತಿ..!

ಆಧಾರ್ ಕಾರ್ಡ್‌ನಲ್ಲಿರುವ ಹಳೆಯ ಅಥವಾ ಗುರುತಿಸಲಾಗದ ಫೋಟೋ(Photo) ಈಗ ನಿಮ್ಮ ಆದ್ಯತೆಗೆ ಅನುಗುಣವಾಗಿ ಸರಳ ಮತ್ತು ಸುಲಭ ಪ್ರಕ್ರಿಯೆಯ ಮೂಲಕ ಅಪ್‌ಡೇಟ್ ಮಾಡಬಹುದು. ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್‌ನಲ್ಲಿರುವ ಫೋಟೋ ಬದಲಾಯಿಸಬಹುದು. ಆದಾಗ್ಯೂ, ಯುಐಡಿಎಐ ವೆಬ್‌ಸೈಟ್‌ನಿಂದ ಆಧಾರ್ ನೋಂದಣಿ ನಮೂನೆ ಅಗತ್ಯವಿದೆ.

ನಿಮ್ಮ ಆಧಾರ್ ಕಾರ್ಡ್ ಫೋಟೋ(Aadhar Card Photo) ನೀವು ಬದಲಾಯಿಸಬಹುದು ಮತ್ತು ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಹೊಸದನ್ನು ಅಪ್‌ಲೋಡ್ ಮಾಡಬಹುದು:

ಇದನ್ನೂ ಓದಿ : ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದು ಪತ್ನಿ ಮೇಲೆ ಕುದಿಯುವ ನೀರೆರೆಚಿದ ನಿರ್ದಯ ಪತಿ!

ಪ್ರಕ್ರಿಯೆಯು ಸರಳವಾಗಿದೆ ಮತ್ತು ನೀವು ಯಾವುದೇ ರೀತಿಯ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ.

ಹಂತ 1: ಅಧಿಕೃತ ವೆಬ್‌ಸೈಟ್‌ https://uidai.gov.in/ ಗೆ ಭೇಟಿ ನೀಡಿ

ಹಂತ 2: ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾಯಿಸಲು ಒಂದು ಫಾರ್ಮ್ ಅನ್ನು ಭರ್ತಿ ಮಾಡಿ.

ಹಂತ 3: ಫಾರ್ಮ್ ಅನ್ನು ಆಧಾರ್ ದಾಖಲಾತಿ ಕಾರ್ಯನಿರ್ವಾಹಕರಿಗೆ ಸಲ್ಲಿಸಿ

ಹಂತ 4: ನಿಮ್ಮ ಫೋಟೋ ಬದಲಾಯಿಸಲು ನೀವು ನಿಮ್ಮ ಪ್ರದೇಶದ ಆಧಾರ್ ದಾಖಲಾತಿ ಕೇಂದ್ರಕ್ಕೆ ಹೋಗಬೇಕಾಗುತ್ತದೆ.

ಹಂತ 5: ಪ್ರಕ್ರಿಯೆಗೆ ಅಗತ್ಯವಾದ ಶುಲ್ಕವನ್ನು ನೀವು ಸಲ್ಲಿಸಬೇಕು.

ಹಂತ 6: ಆಧಾರ್ ದಾಖಲಾತಿ ಕೇಂದ್ರದಲ್ಲಿ, ಇಲಾಖೆಯ ಅಧಿಕಾರಿಯೊಬ್ಬರು ನಿಮ್ಮ ಹೊಸ ಫೋಟೋ ಕ್ಲಿಕ್ ಮಾಡಿ ಮತ್ತು ಅದನ್ನು ನಿಮ್ಮ ಆಧಾರ್ ಕಾರ್ಡ್‌ಗೆ ಅಪ್‌ಲೋಡ್ ಮಾಡುತ್ತಾರೆ.

ಹಂತ 7. ಆಧಾರ್ ದಾಖಲಾತಿ ಕಾರ್ಯನಿರ್ವಾಹಕರು ಅಪ್‌ಡೇಟ್ ವಿನಂತಿ ಸಂಖ್ಯೆ (ಯುಆರ್‌ಎನ್) ಜೊತೆಗೆ ಸ್ವೀಕೃತಿ ಸ್ಲಿಪ್ ಅನ್ನು ನಿಮಗೆ ನೀಡುತ್ತಾರೆ.

ಹಂತ 8. ಯುಆರ್‌ಎನ್‌ನೊಂದಿಗೆ, ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀವು ಆಧಾರ್ ಅಪ್‌ಡೇಟ್ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.

ಇದನ್ನೂ ಓದಿ : Cooking Oil : ಕಡಿಮೆ ಆಗಲಿದೆ 'ಅಡುಗೆ ಎಣ್ಣೆ' ಬೆಲೆ : ಸರ್ಕಾರದಿಂದ 'ರಾಷ್ಟ್ರೀಯ ಖಾದ್ಯ ತೈಲ ಮಿಷನ್' ಆರಂಭ!

Trending News