ಪಾಕ್ ನಿಂದ ಅಭಿನಂದನ್ ವರ್ತಮಾನ್ ಗೆ ತೀವ್ರ ಮಾನಸಿಕ ಕಿರುಕುಳ- ಮೂಲಗಳು

ಪಾಕಿಸ್ತಾನದ ಸೆರೆಯಲ್ಲಿದ್ದ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಗೆ ತೀವ್ರ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.ವಿಂಗ್ ಕಮಾಂಡರ್ ಅಭಿನಂದನ್ ಗೆ ಪಾಕಿಸ್ತಾನ ಭೌತಿಕವಾಗಿ ಚಿತ್ರಹಿಂಸೆ ಮಾಡದಿದ್ದರೂ ಸಹಿತ ಮಾನಸಿಕವಾಗಿ ಸಾಕಷ್ಟು ಕಿರುಕುಳ ನೀಡಿದೆ ಎಂದು ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ. 

Last Updated : Mar 2, 2019, 08:55 PM IST
ಪಾಕ್ ನಿಂದ ಅಭಿನಂದನ್ ವರ್ತಮಾನ್ ಗೆ ತೀವ್ರ ಮಾನಸಿಕ ಕಿರುಕುಳ- ಮೂಲಗಳು   title=

ನವದೆಹಲಿ: ಪಾಕಿಸ್ತಾನದ ಸೆರೆಯಲ್ಲಿದ್ದ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಗೆ ತೀವ್ರ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.ವಿಂಗ್ ಕಮಾಂಡರ್ ಅಭಿನಂದನ್ ಗೆ ಪಾಕಿಸ್ತಾನ ಭೌತಿಕವಾಗಿ ಚಿತ್ರಹಿಂಸೆ ಮಾಡದಿದ್ದರೂ ಸಹಿತ ಮಾನಸಿಕವಾಗಿ ಸಾಕಷ್ಟು ಕಿರುಕುಳ ನೀಡಿದೆ ಎಂದು ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ. 

ಪಾಕಿಸ್ತಾನವು ಸುಮಾರು 60 ಗಂಟೆಗಳ ಕಾಲ ಅಭಿನಂದನ್ ರನ್ನು ತನ್ನ ವಶದಲ್ಲಿರಿಸಿಕೊಂಡಿತ್ತು, ಇದಾದ ನಂತರ ಶಾಂತಿಯ ಪ್ರತೀಕವಾಗಿ ಅವರನ್ನು ಶುಕ್ರವಾರ ರಾತ್ರಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಅಭಿನಂದನ್ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸೈನ್ಯದ ಸೆರೆ ಸಿಕ್ಕಿದ್ದರು. ನಂತರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದರು. ಆ ಪ್ರಕಾರ ಅವರು ಭಾರತಕ್ಕೆ ಮರಳಿದ್ದರು. 

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ 35 ವರ್ಷ ವಯಸ್ಸಿನ ಐಎಎಫ್ ಪೈಲಟ್ ಅವರನ್ನು ಮಿಲಿಟರಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಿದ್ದರು.ಶುಕ್ರವಾರದಂದು ಭಾರತಕ್ಕೆ ತಡರಾತ್ರಿ ಆಗಮಿಸಿದ ಅಭಿನಂದನ್ ವರ್ತಮಾನ್ ಅವರನ್ನು ಹಲವಾರು ಪರೀಕ್ಷೆಗಳಿಗೆ ಒಳಪಡಿಸಲಾಯಿತು.ಸಚಿವರ ಭೇಟಿಗೂ ಮುನ್ನ ಮುಂಚೆ ವರ್ತಮಾನ್ ಕುಟುಂಬದ ಸದಸ್ಯರನ್ನು ಮತ್ತು ಐಎಎಫ್ ನ ಹಲವು ಉನ್ನತ ಅಧಿಕಾರಿಗಳು ಭೇಟಿ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರದಂದು 11.45 ರ ವೇಳೆಗೆ ದೆಹಲಿಗೆ ಆಗಮಿಸಿದ ನಂತರ ಅವರನ್ನು ಆಗಮಿಸಿದ ಬಳಿಕ ಏರ್ಫೋರ್ಸ್ ಸೆಂಟ್ರಲ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ (ಎಎಫ್ಸಿಎಂಇ)ನಲ್ಲಿರುವ  ವಿಶೇಷ ವೈದ್ಯಕೀಯ ಮೌಲ್ಯಮಾಪನ ಕೇಂದ್ರಕ್ಕೆ ಸಾಗಿಸಲಾಯಿತು.

Trending News