ಇಂದಿನಿಂದ 5 ದಿನ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಹಾರಾಟ

ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್‌ ಏರೋ ಇಂಡಿಯಾಗೆ ಚಾಲನೆ ನೀಡಲಿದ್ದಾರೆ. 

Last Updated : Feb 20, 2019, 09:24 AM IST
ಇಂದಿನಿಂದ 5 ದಿನ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಹಾರಾಟ title=
File Image

ಬೆಂಗಳೂರು: ಏಷ್ಯಾದ ಬೃಹತ್ 'ಏರೋ ಇಂಡಿಯಾ 2019'ರ ಪ್ರದರ್ಶನ ಇಂದಿನಿಂದ ಆರಂಭವಾಗಲಿದೆ. 12ನೇ ಆವೃತ್ತಿಯ ಪ್ರತಿಷ್ಠಿತ ವೈಮಾನಿಕ ಪ್ರದರ್ಶನಕ್ಕೆ ಇಂದು ಇಂದು ಬೆಳಗ್ಗೆ 9.30ಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಯಲಹಂಕ ವಾಯುನೆಲೆಯಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಎಚ್‌ಎಎಲ್‌, ಡಿಆರ್‌ಡಿಒ, ದೇಶದ ಮೂರು ಸೇನಾಪಡೆಗಳ ಹಿರಿಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. 

'ಏರೋ ಇಂಡಿಯಾ 2019' ಫೆ.20 ರಿಂದ 24ರವರೆಗೆ ಭಾರತದ ಯುದ್ಧ ಹಾಗೂ ನಾಗರೀಕ ಸೇವಾ ವಿಮಾನಗಳನ್ನು ಸೇರಿದಂತೆ ವಿದೇಶಿ ವಿಮಾನಗಳು ಬಾನಂಗಳದಲ್ಲಿ ಶಕ್ತಿ ಪ್ರದರ್ಶನ ನಡೆಸಲಿವೆ.

ಇಂದಿನಿಂದ 5 ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳು ತಮ್ಮ ಕರಾಮತ್ತು ಬೆಳಗ್ಗೆ 10 ರಿಂದ 12 ರವರೆಗೆ ಹಾಗೂ ಮಧ್ಯಾಹ್ನ 2ರಿಂದ 5ರ ಗಂಟೆವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. ದೇಶ-ವಿದೇಶಗಳ ನೂರಾರು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಈ ವೇಳೆ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಹಲವು ಮಹತ್ವದ ಒಪ್ಪಂದಗಳು, ಅಭಿವೃದ್ಧಿ ಒಪ್ಪಂದಗಳು, ಮಾರಾಟ, ಖರೀದಿಗೆ ಸಹಿ ಬೀಳಲಿವೆ. 

36 ದೇಶೀಯ ವಿಮಾನಗಳು, 7 ವಿದೇಶಿ ವಿಮಾನಗಳು ಹಾಗೂ ಐಎಎಫ್‌ನ 11 ವಿಮಾನಗಳು ಏರ್‌ ಶೋನಲ್ಲಿ ಚಮತ್ಕಾರ ತೋರಿಸಲಿವೆ. ಇನ್ನು ಖರೀದಿ ವಿಚಾರವಾಗಿ ಸಾಕಷ್ಟು ವಿವಾದಕ್ಕೆ ಈಡಾಗಿರೋ ರಫೇಲ್ ಯುದ್ಧವಿಮಾನ ಈ ಬಾರಿ ಹಾರಾಟ ನಡೆಸುತ್ತಿರುವುದು ಏರ್‌ ಶೋನ ಪ್ರಮುಖ ಆಕರ್ಷಣೆಯಾಗಿದೆ. 
 

Trending News