ವಿಷಪೂರಿತ ಸಾರಾಯಿ ಸೇವಿಸಿ 30 ಜನರ ದುರ್ಮರಣ, ತನಿಖೆಗಾಗಿ ತಂಡ ರಚಿಸಿದ CM ಕ್ಯಾಪ್ಟನ್ ಅಮರಿಂದರ್ ಸಿಂಗ್

ಪಂಜಾಬ್, ತರ್ನ್ ತರಣ್, ಅಮೃತಸರ ಮತ್ತು ಗುರುದಾಸ್‌ಪುರದ ಮೂರು ಜಿಲ್ಲೆಗಳ ಬಟಾಲಾದಲ್ಲಿ ವಿಷಕಾರಿ ಮದ್ಯ ಸೇವಿಸಿ 30 ಜನರು ಸಾವನ್ನಪ್ಪಿದ್ದಾರೆ. ಈ ಜನರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

Last Updated : Jul 31, 2020, 05:10 PM IST
ವಿಷಪೂರಿತ ಸಾರಾಯಿ ಸೇವಿಸಿ 30 ಜನರ ದುರ್ಮರಣ, ತನಿಖೆಗಾಗಿ ತಂಡ ರಚಿಸಿದ CM ಕ್ಯಾಪ್ಟನ್ ಅಮರಿಂದರ್ ಸಿಂಗ್ title=

ಪಂಜಾಬ್: ಪಂಜಾಬ್‌ನ ಹಲವು ಜಿಲ್ಲೆಗಳಲ್ಲಿ ವಿಷಕಾರಿ ಮದ್ಯ ಸೇವಿಸಿ 30 ಜನರು ಸಾವನ್ನಪ್ಪಿದ್ದಾರೆ. ಮೃತರು ಟಾರ್ನ್ ತರಣ್, ಅಮೃತಸರ ಮತ್ತು ಬಟಲಾ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಈ ಮೊದಲು ಐದು ಜನರು ಸಾವನ್ನಪ್ಪಿದ್ದರು. ಇಂದು ಮತ್ತೆ 25 ಜನರು ಸಾವನ್ನಪ್ಪಿದ್ದು, ಪ್ರದೇಶದಲ್ಲಿ ಆತಂಕ ಮನೆಮಾಡಿದೆ. ಘಟನೆಯ ಕುರಿತು ತನಿಖೆ ನಡೆಸಲು ರಾಜ್ಯದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ SIT ರಚಿಸಿದ್ದಾರೆ. ಗುರುವಾರ ಈ ಘಟನೆಯಲ್ಲಿ ಮೃತಪಟ್ಟ ಐದು ಜನರನ್ನು ಅವರ ಕುಟುಂಬ ಸದಸ್ಯರು ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡದೆ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದ್ದಾರೆ.

ಗುರುವಾರ ಸಂಭವಿಸಿರುವ ಈ ಪ್ರಕರಣದಲ್ಲಿ ಇದುವರೆಗೆ ಸುಮಾರು 30 ಜನರು ವಿಷಪೂರಿತ ಸಾರಾಯಿ ಸೇವಿಸಿ ಮೃತಪಟ್ಟಿದ್ದಾರೆ. ರಾಜ್ಯದ ತರನ್ ತಾರನ್ ಜಿಲ್ಲೆಯಲ್ಲಿ 15, ಅಮೃತ್ಸರ್ ನಲ್ಲಿ ಇಂದು ಇಬ್ಬರು, ಬಟಾಲದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳಲ್ಲಿ ಅಮೃತ್ ಸರ್ ನಲ್ಲಿ 9 ಹಾಗೂ ಬಟಾಲಾದಲ್ಲಿ 6 ಜನರು ವಿಷಪೂರಿತ ಸಾರಾಯಿ ಸೇವಿಸಿ ಸಾವನ್ನಪ್ಪಿದ್ದಾರೆ. ಪ್ರಕರಣದಲ್ಲಿ ಜಾಲಂದರ್ ಜಿಲ್ಲೆಯ ಡಿವಿಜನಲ್ ಕಮೀಷನರ್ ನಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ಈ ತನಿಖಾ ತಂಡದಲ್ಲಿ ಜಾಯಿಂಟ್ ಎಕ್ಸರ್ ಸೈಜ್ ಅಂಡ್ ಟ್ಯಾಕ್ಸೇಶನ್ ಕಮಿಷನರ್ ಹಾಗೂ ಸಂಬಂಧಿತ ಜಿಲ್ಲೆಯಲ ಪೋಲೀಸ್ ವರಿಷ್ಠ ಅಧಿಕಾರಿಗಳೂ ಕೂಡ ಶಾಮೀಲಾಗಿದ್ದಾರೆ. 

ಈ ಪ್ರಕರಣದ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ, ಇದಕ್ಕೂ ಮೊದಲು ಒಟ್ಟು ಐದು ಸಾವಿನ ಪ್ರಕರಣಗಳು ಅಮೃತಸರ್ ಗ್ರಾಮೀಣ ಕ್ಷೇತ್ರದ ಮುಚ್ಚಲ್ ಹಾಗೂ ಟಾಂಗರಾ ಗ್ರಾಮಗಳಲ್ಲಿ ಬೆಳಕಿಗೆ ಬಂದಿದ್ದವು. ಮುಚ್ಚಲ್ ಗ್ರಾಮದಲ್ಲಿ ಮೃತಪಟ್ಟವರನ್ನು ಮಂಗಲ್ ಸಿಂಗ್, ಬಲವಿಂದರ್ ಸಿಂಗ್, ದಲಬೀರ್ ಸಿಂಗ್, ಗುರುಪ್ರೀತ್ ಸಿಂಗ್, ಕಶ್ಮೀರ್ ಸಿಂಗ್, ಕಾಕಾ ಸಿಂಗ್, ಕೃಪಾಲ್ ಸಿಂಗ್, ಜಸವಂತ್ ಸಿಂಗ್, ಜೋಗಾ ಸಿಂಗ್ ಸೇರಿದಂತೆ ಕಾಂಗಡಾ ಗ್ರಾಮದ ಬಲದೇವ್ ಸಿಂಗ್ ಕೂಡ ಶಾಮೀಲಾಗಿದ್ದಾರೆ. ಬಟಾಲಾ ಪಟ್ಟಣದಲ್ಲಿ ಬೂಟಾ ರಾಮ್, ಭಿಂಡಾ, ರಿಂಕೂ ಸಿಂಗ್, ಕಾಲಾ, ಕಾಲೂ, ಬಿಲ್ಲಾ ಹಾಗೂ ಜಿತೇಂದ್ರ ಎಂಬುವವರು ಮೃತಪಟ್ಟಿದ್ದಾರೆ.

ಈ ಎಲ್ಲ ಜನರು ಮನೆಯಲ್ಲಿಯೇ ದೇಸಿ ಪದ್ದತಿಯಿಂದ ತಯಾರಿಸಲಾಗಿರುವ ಅಕ್ರಮ ಸಾರಾಯಿ ಸೇವಿಸುವುದರಿಂದ ಸಂಭವಿಸಿದೆ. ಮೃತಪಟ್ಟವರಲ್ಲಿ ನೌರಂಗಾಬಾದ್ ನಿವಾಸಿಗಳಾಗಿರುವ ಧರ್ಮ ಸಿಂಗ್, ಸಾಹೇಬ್ ಸಿಂಗ್, ತೇಜಾ ಸಿಂಗ್, ಹರಬಂಸ್ ಸಿಂಗ್, ಸುಖದೇವ್ ಸಿಂಗ್ ಹಾಗೂ ಮಲ್ಲಾಮೊಹರಿ ಗ್ರಾಮದ ನಿವಾಸಿಗಳಾಗಿರುವ ಮಿಟ್ಟೂ ಸಿಂಗ್, ನಾಜರ್ ಸಿಂಗ್, ಜೋಧ್ಪುರ್ ನಿವಾಸಿ ಮಿಟ್ಟೂ ಸಿಂಗ್, ಭುಲ್ಲರ್ ನಿವಾಸಿ ಪ್ರಕಾಶ್ ಸಿಂಗ್, ಬಚಡೆ ಗ್ರಾಮದ ಗುರುಮೆಲ್ ಸಿಂಗ್ ಜೊತೆಗೆ ತಾರನ್ ತರನ್ ನಿವಾಸಿ ರಂಜೀತ್ ಸಿಂಗ್, ಹರಜೀತ್ ಸಿಂಗ್ ಹೀರಾ, ಭಾಗ ಮಲ್ಲ ಸಿಂಗ್, ಅಮರಿಕ್ ಸಿಂಗ್ ಶಾಮೀಲಾಗಿದ್ದಾರೆ. ಪ್ರಕರಣದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಡಿಸಿ ಕುಲವಂತ್ ಸಿಂಗ್ ಮಾಹಿತಿ ನೀಡಿದ್ದಾರೆ.

Trending News