ನೀರವ್ ಮೋದಿ ನಂತರ ಮತ್ತೋರ್ವ ವಜ್ರದ ವ್ಯಾಪಾರಿ ವಿರುದ್ಧ ಸಿಬಿಐ ದೂರು ದಾಖಲು

ಮತ್ತೋರ್ವ ವಜ್ರದ ವ್ಯಾಪಾರಿ ವಿರುದ್ಧ 389.85 ಕೋಟಿ ರೂ.ಗಳ ಸಾಲ ವಂಚನೆ ದೂರನ್ನು ಸಿಬಿಐ ದಾಖಲಿಸಿಕೊಂಡಿದೆ. 

Last Updated : Feb 24, 2018, 10:42 AM IST
  • ವಜ್ರದ ವ್ಯಾಪಾರಿ ವಿರುದ್ಧ 389.85 ಕೋಟಿ ರೂ.ಗಳ ಸಾಲ ವಂಚನೆ ದೂರು ದಾಖಲು.
  • ದ್ವಾರಕಾ ದಾಸ್ ಸೇಠ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
  • ದ್ವಾರಕಾ ದಾಸ್ ಸೇಠ್ ಎಸ್ ಇಎಜ್ ಇನ್ ಕಾರ್ಪೋರೇಷನ್ ಸಂಸ್ಥೆ ವಿರುದ್ಧವೂ ದೂರು ದಾಖಲಾಗಿದೆ.
ನೀರವ್ ಮೋದಿ ನಂತರ ಮತ್ತೋರ್ವ ವಜ್ರದ ವ್ಯಾಪಾರಿ ವಿರುದ್ಧ ಸಿಬಿಐ ದೂರು ದಾಖಲು title=

ನವದೆಹಲಿ: ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಮತ್ತೋರ್ವ ವಜ್ರದ ವ್ಯಾಪಾರಿ ವಿರುದ್ಧ 389.85 ಕೋಟಿ ರೂ.ಗಳ ಸಾಲ ವಂಚನೆ ದೂರನ್ನು ಸಿಬಿಐ ದಾಖಲಿಸಿಕೊಂಡಿದೆ. 

ವಜ್ರದ ವ್ಯಾಪಾರಿ ದ್ವಾರಕಾ ದಾಸ್ ಸೇಠ್ ಎಂಬವರು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್'ನಲ್ಲಿ ಸುಮಾರು 389 ಕೋಟಿ ರೂ ಸಾಲ ಪಡೆದು ಅದನ್ನು ಮರುಪಾವತಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ  ದ್ವಾರಕಾ ದಾಸ್ ಸೇಠ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. 

ಅಲ್ಲದೆ, ಸಂಸ್ಥೆಯ ನಿರ್ದೇಶಕರುಗಳಾದ ಸಭ್ಯಾ ಸೇಟ್, ರೀಟಾ ಸೇಟ್, ಕೃಷ್ಣ ಕುಮಾರ್ ಸಿಂಗ್, ರವಿಸಿಂಗ್ ಸೇರಿದಂತೆ ಕಂಪನಿಯ ಇತರರ ವಿರುದ್ಧವೂ ದೂರು ದಾಖಲಿಸಲಾಗಿದೆ. ಜತೆಗೆ, ದ್ವಾರಕಾ ದಾಸ್ ಸೇಠ್ ಸಂಸ್ಥೆಯ ಸಹೋದರ ಸಂಸ್ಥೆ ಎನ್ನಲಾಗುತ್ತಿರುವ ದ್ವಾರಕಾ ದಾಸ್ ಸೇಠ್ ಎಸ್ ಇಎಜ್ ಇನ್ ಕಾರ್ಪೋರೇಷನ್ ಸಂಸ್ಥೆ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. 

Trending News