ಲಕ್ನೋ: ಈರುಳ್ಳಿ ಬೆಲೆ ದೇಶಾದ್ಯಂತ ಗಗನಕ್ಕೇರುತ್ತಿದೆ. ಇದು ಸಾರ್ವಜನಿಕರ ಊಟದ ರುಚಿಯನ್ನು ಹಾಳು ಮಾಡಿದೆ. ಈ ಎಲ್ಲದರ ಮಧ್ಯೆ ಉತ್ತರ ಪ್ರದೇಶದ ಜನರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ.
ಉತ್ತರ ಪ್ರದೇಶದಲ್ಲಿ ಎಲ್‌ಪಿಜಿಯ ಬೆಲೆ 13.20 ರೂ. ಏರಿಕೆಯಾಗಿದೆ. ಇದರೊಂದಿಗೆ ಎಲ್‌ಪಿಜಿ(LPG)ಯ 14.2 ಕೆಜಿ ಸಿಲಿಂಡರ್ ಬೆಲೆ ಈಗ 730 ರೂ.ಗೆ ಏರಿದೆ. ಅದೇ ಸಮಯದಲ್ಲಿ, ವಾಣಿಜ್ಯ ಸಿಲಿಂಡರ್‌ನ ಬೆಲೆಯೂ 7.30 ರೂ. ಈಗ 19 ಕೆಜಿ ಸಿಲಿಂಡರ್ 1295.50 ರೂ. ಆಗಿದೆ. ಅಷ್ಟೇ ಅಲ್ಲ ಇದರೊಂದಿಗೆ 5 ಕೆಜಿ ಸಣ್ಣ ಸಿಲಿಂಡರ್ ಬೆಲೆ ಕೂಡ 5.41 ರೂ. ದುಬಾರಿಯಾಗಿದೆ. ಸಣ್ಣ ಸಿಲಿಂಡರ್ ಬೆಲೆಯನ್ನು 269 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ವಿಶೇಷವೆಂದರೆ, ಕಳೆದ 4 ತಿಂಗಳಲ್ಲಿ ಎಲ್‌ಪಿಜಿಯ ಬೆಲೆ 118 ರೂ. ದುಬಾರಿಯಾಗಿದೆ. ಈ ಹೆಚ್ಚಳದಿಂದ ಜನರ ಅಡುಗೆಮನೆಯ ರುಚಿ ಕ್ಷೀಣಿಸುತ್ತಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ತರಕಾರಿಗಳ ಬೆಲೆಗಳು ಈಗಾಗಲೇ ಆಕಾಶವನ್ನು ಮುಟ್ಟುತ್ತಿವೆ. ಈ ಎಲ್ಲದರ ಮಧ್ಯೆ, ಎಲ್‌ಪಿಜಿಯ ಬೆಲೆಗಳ ಹೆಚ್ಚಳವು ಜನರ ಜೇಬಿನ ಮೇಲೆ ಹೊರೆಯನ್ನು ಹೆಚ್ಚಿಸಿದೆ.
ಕಾನ್ಪುರದ ಕಿಡ್ವಾಯ್ ನಗರ ನಿವಾಸಿ ರಶ್ಮಿ ತ್ರಿಪಾಠಿ, ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆಯಲ್ಲಿನ ಏರಿಕೆಯಿಂದಾಗಿ, ಅವುಗಳನ್ನು ಈಗಾಗಲೇ ಊಟದಿಂದ ತೆಗೆದುಹಾಕಲಾಗಿದೆ ಎಂದು ಹೇಳುತ್ತಾರೆ. ಈಗ ಎಲ್‌ಪಿಜಿಯ ಬೆಲೆ ಹೆಚ್ಚಳ ಮಧ್ಯಮ ವರ್ಗದ ಕುಟುಂಬಕ್ಕೆ ಹೊರೆಯಾಗಿದೆ.